ಕಾಸರಗೋಡು ಜಿಲ್ಲೆಯ ಐತಿಹಾಸಿಕ , ಸಾಂಸ್ಕೃತಿಕ ಇತಿಹಾಸದ ಸಂಕೇತವಾದ ಕೋಟೆ ಕೊತ್ತಲಗಳನ್ನು ಮತ್ತು ಅದನ್ನು ಅವಲಂಬಿಸಿರುವ ವೀರಾಂಜನೇಯ ದೇವಸ್ಥಾನಗಳನ್ನು ಪುರಾತತ್ವ ಇಲಾಖೆ ಮುತುವರ್ಜಿ ವಹಿಸಿ ನವೀಕರಿಸಿ ಸಂರಕ್ಷಣೆ ನೀಡಬೇಕೆಂದು ಎಡನೀರು ಮಠದಲ್ಲಿ ನಡೆದ ಕಾಸರಗೋಡು ಜಿಲ್ಲಾ ಕ್ಷೇತ್ರ ಏಕೋಪನಾ ಸಮಿತಿಯ ಸಮಾವೇಶ ಠರಾವು ಮಂಡಿಸಿ ಒತ್ತಾಯಿಸಿದೆ.
ಕುಂಬಳೆ ಆರಿಕ್ಕಾಡಿ ಕೋಟೆಯೊಳಗಿನ ಬಾವಿಯಿಂದ ಮೊಗ್ರಾಲ್ ಪುತ್ತೂರು ಗ್ರಾ.ಪಂ. ಉಪಾಧ್ಯಕ್ಷ ಹಾಗೂ ಐವರ ತಂಡ ನಿಧಿ ಅಪಹರಿಸಲು ಯತ್ನಿಸಿದ ಘಟನೆಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳಬೇಕೆಂದೂ ಠರಾವಿನಲ್ಲಿ ಒತ್ತಾಯಿಸಲಾಗಿದೆ.
ಚಿನ್ಮಯಾ ಮಿಷನ್ ಕೇರಳ ಘಟಕದ ಮುಖ್ಯಸ್ಥ ಶ್ರೀ ವಿವಿಕ್ತಾನಂದ ಸರಸ್ವತಿ ಸ್ವಾಮೀಜಿ ಕ್ಷೇತ್ರ ಸಮನ್ವಯ ಸಮಿತಿ ಸಮಾಲೋಚನಾ ಸಭೆ ಉದ್ಘಾಟಿಸಿದರು. ಎಡನೀರು ಮಠದ ಶ್ರೀ ಸಚ್ಛಿದಾನಂದ ಭಾರತಿ ಸ್ವಾಮೀಜಿಯವರು ಪ್ರಧಾನ ರಕ್ಷಾಧಿಕಾರಿಯಾಗಿ ಜಿಲ್ಲೆಯ ದೇವಾಲಯ, ದೈವಸ್ಥಾನ, ಭಜನಾ ಮಂದಿರ, ತರವಾಡು ಕ್ಷೇತ್ರ, ಸಾಮುದಾಯಿಕ ಕ್ಷೇತ್ರ, ಬನಗಳ ಸಮಿತಿ ಮುಂತಾದುವುಗಳನ್ನೆಲ್ಲಾ ಜೋಡಿಸಿ 101ಸದಸ್ಯರ ಕ್ಷೇತ್ರ ಏಕೋಪನಾ ಸಮಿತಿಗೆ ರೂಪು ನೀಡಿ ಜಿಲ್ಲಾ ಘಟಕವನ್ನು ಘೋಷಿಸಲಾಯಿತು.
ಶ್ರೀ ಎಡನೀರು ಮಠದ ಸಚ್ಛಿದಾನಂದ ಭಾರತಿ ಶ್ರೀಪಾದಂಗಳು, ಚಿನ್ಮಯಾ ಮಿಷನಿನ ಶ್ರೀ ವಿವಿಕ್ತಾನಂದ ಸರಸ್ವತಿ ಸ್ವಾಮೀಜಿ, (ಪ್ರಧಾನ ರಕ್ಷಾಧಿಕಾರಿಗಳು) ಹಾಗೂ ರಕ್ಷಾಧಿಕಾರಿಗಳಾಗಿ ಮಾನವರ್ಮ ರಾಜಾ ನೀಲೇಶ್ವರ ಅರಮನೆ, ಪ್ರೇಮಾನಂದ ಸ್ವಾಮೀಜಿ ಶಿವಗಿರಿ ಮಠ ಪ್ರತಿನಿಧಿ, ಕುಂಞಿಕಣ್ಣನ್ ಆಯತ್ತಾರ್, ಬ್ರಹ್ಮಶ್ರೀ ಕೇಶವಾಚಾರ್ಯ ಉಳಿಯತ್ತಡ್ಕ ಹಾಗೂ ಜಿಲ್ಲಾಧ್ಯಕ್ಷರಾಗಿ ಗಣೇಶ್ ಅರಮಂಗಾನಂ ಆಯ್ಕೆಗೊಂಡರು.
ನ್ಯಾಯವಾದಿ ರಮೇಶ್ ಯಾದವ್, ಇಂದುಲೇಖಾ ಕರಿಂದಳಂ, ವಾಸುದೇವನ್ ಮಲ್ಲಿಶ್ಶೇರಿ, ಸುರೇಶ್ ಕೀಯೂರ್, ಎಂ.ನಾರಾಯಣ ಚಂಬಲ್ತಿಮಾರ್, ರಾಂದಾಸ್ ವಾಯುನ್ನೋರ್, ನ್ಯಾಯವಾದಿ ಶಶಿಧರ ಭಟ್ (ಉಪಾಧ್ಯಕ್ಷರು), ಪ್ರಧಾನ ಕಾರ್ಯದರ್ಶಿಯಾಗಿ ರಾಜನ್ ಕೋಯಂಗರ, ಜತೆ ಕಾರ್ಯದರ್ಶಿಗಳಾಗಿ ಎಂ.ಸತೀಶ್, ರಾಮಚಂದ್ರನ್ ಆಲಡ್ಕಂ, ವೇಣುಗೋಪಾಲ್, ಸೂರ್ಯ ಭಟ್ ಬಳಾಂತೋಡ್
ಆಯ್ಕೆಗೊಂಡರು.
ಜಿಲ್ಲೆಯ ಹಿಂದೂ ಆರಾಧನಾಲಯಗಳನ್ನು ಒಂದೇ ಮಾಲಿಕೆಯಲ್ಲಿ ಪೋಣಿಸಿ , ಅಲ್ಲೇನಾದರೂ ಸಮಸ್ಯೆಗಳು ಬಂದಲ್ಲಿ ಪರಿಹಾರ ಕಾಣುವುದು ಕ್ಷೇತ್ರ ಏಕೋಪನಾ ಸಮಿತಿಯ ಉದ್ದೇಶವಾಗಿದೆ.