- ಕಳ್ಳನನ್ನು ಬಗಲಲ್ಲಿ ಕೂರಿಸಿ ಕಾವಲು ನೀಡಿ ಕಾಪಾಡುವುದು
ಮುಸ್ಲಿಂಲೀಗಿನ ನೈತಿಕತೆಯ ಕನ್ನಡಿ - ನಿಧಿ ದೋಚಲೆತ್ನಿಸಿದ ಆರೋಪಿ ಪಂ.ಉಪಾಧ್ಯಕ್ಷನ ರಾಜೀನಾಮೆ ತನಕ ಬಿ.ಜೆ.ಪಿ ಹೋರಾಟ ಎಂದ ಎಂ.ಎಲ್.ಅಶ್ವಿನಿ
ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ಆಡಳಿತ ಕಳ್ಳನನ್ನು ಬಗಲಲ್ಲಿ ಕೂರಿಸಿ ಕಾಪಾಡುತ್ತಿದೆ. ಕಳ್ಳರಿಗೆ ಕಾವಲು ಕೂರುವ ಕಾಪಠ್ಯ ಮುಸ್ಲಿಂಲೀಗಿನ ನೈತಿಕತೆಯನ್ನು ಸಾರುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರಿಕ್ಕಾಡಿ ಕೋಟೆಯಲ್ಲಿ ನಿಧಿ ಅಪಹರಣಕ್ಕೆತ್ನಿಸಿದ ಮುಸ್ಲಿಂಲೀಗ್ ನಾಯಕ, ಮೊಗ್ರಾಲ್ ಪುತ್ತೂರು ಗ್ರಾ ಪಂ.ಉಪಾಧ್ಯಕ್ಷ ಮುಜೀಬ್ ಕಂಬಾರ್ ವಿರುದ್ಧ ಪ್ರಜಾಪ್ರಭುತ್ವ ರೀತಿಯಲ್ಲಿ ಪ್ರತಿಭಟಿಸಿದ ಮೊಗ್ರಾಲ್ ಪುತ್ತೂರು ಗ್ರಾ.ಪಂ. ನ ಬಿಜೆಪಿ ಮಹಿಳಾ ಸದಸ್ಯರ ಸಹಿತ ಉಳ್ಳವರನ್ನು ಆಕ್ರಮಿಸಲೆತ್ನಿಸಿದ ಮುಸ್ಲಿಂಲೀಗ್ ಪ್ರತಿನಿಧಿಗಳ ಕೃತ್ಯ ಲಜ್ಜಾಸ್ಪದ ಮತ್ತು ಪ್ರತಿಭಟನಾರ್ಹವಾಗಿದೆ. ಪುರಾತತ್ವ ಇಲಾಖೆಯ ಆಧೀನದಲ್ಲಿರುವ ಕೋಟೆಯಿಂದ ನಿಧಿ ದೋಚಲು ಯತ್ನಿಸಿದ ಕೇಸಿನ ಆರೋಪಿಯಾದ ಗ್ರಾ.ಪಂ. ಉಪಾಧ್ಯಕ್ಷನನ್ನು ರಾಜೀನಾಮೆ ಕೊಡಿಸದೇ, ಪಂಚಾಯತ್ ಸೆಮಿನಾರಿಗೆ ಕರೆಸಿ ಕುಳ್ಳಿರಿಸಿರುವುದು ಲೀಗಿನ ದಾಷ್ಟ್ಯತನದ ಸಂಕೇತವಾಗಿದೆ.
ಅಪರಾಧದ ಮೊಕದ್ದಮೆ ಹೊಂದಿರುವಾತನ ವಿರುದ್ಧ ರಾಜೀನಾಮೆ ಬಯಸಿ ಪ್ರತಿಭಟಿಸಿದಾಗ, ಪ್ರತಿಭಟನಾಕಾರರಾದ ಮಹಿಳಾ ಜನಪ್ರತಿನಿಧಿಗಳ ಮೇಲೆ ರೇಗುತ್ತಾ ಕೂಗಾಡಿ ಆಕ್ರಮಿಸಲೆತ್ನಿಸಿರುವುದು ಲಜ್ಜೆಗೇಡಿತನ ಎಂದವರು ಅಭಿಪ್ರಾಯಪಟ್ಟರು.
ನಿಧಿ ಅಪಹರಣ ಯತ್ನದ ಆರೋಪಿ ಮುಜೀಬ್ ಕಂಬಾರ್ ಗ್ರಾ.ಪಂ. ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ತನಕ ಬಿಜೆಪಿ ಹೋರಾಟ ಮುಂದುವರಿಯಲಿದೆ ಎಂದ ಅವರು ನಿಧಿ ಆಪಹರಣ ಯತ್ನದ ಆರೋಪಿಯನ್ನು ಆಡಳಿತದಲ್ಲಿ ಕೂರಿಸಿಕೊಂಡದ್ದನ್ನು ಬಿಜೆಪಿ ಒಪ್ಪುವುದಿಲ್ಲ ಎಂದು ಪ್ರಕಟಿಸಿದ್ದಾರೆ.
.