ಭೂಮಿ ಪುತ್ರರಾದ ಮೊಗೇರ ಸಮಾಜಕ್ಕೆ ಪ್ರಾಚೀನ ಇತಿಹಾಸವಿದೆ. ತನ್ನದೇ ಆದ ಸಾಂಸ್ಕೃತಿಕ ಐತಿಹ್ಯಗಳೊಂದಿಗೆ ಪರಂಪರೆಗಳಿವೆ. ಅದನ್ನು ಮುಂದಿನ ಪೀಳಿಗೆಗೆ ತಿಳಿಯಪಡಿಸುವ ಮತ್ತು ಅದರಲ್ಲಿ ಅಭಿಮಾನ ಪಡುವ ತಲೆಮಾರನ್ನು ರೂಪಿಸುವ ಕೆಲಸ ತುರ್ತಾಗಿ ನಡೆಯಬೇಕೆಂದು ಮಧೂರು ಶ್ರೀ ಮದರು ಮಹಾಮಾತೆ ಮಹಾ ಸಮಾಜದ ಅಧ್ಯಕ್ಷ ವಸಂತ ಅಜಕ್ಕೋಡು ನುಡಿದರು.
ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ,ಮೂಲಸ್ಥಾನದಲ್ಲಿ ಮದರು ಮಹಾಮಾತೆಗೆ ಸೂಕ್ತ ಸ್ಥಾನ ದೊರೆಯಬೇಕೆಂಬ ಸಮಾಜದ ಬೇಡಿಕೆಗೆ ಮಧೂರು ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಸ್ಪಂದಿಸಿದ್ದು , ಸಮುದಾಯದ ಕೊಡುಗೆಯಾಗಿ ಮೂಲಸ್ಥಾನದಲ್ಲಿ ದ್ವಾರ ನಿರ್ಮಾಣವಾಗುತ್ತಿದೆ. ಈ ನಿಟ್ಟಿನಲ್ಲಿ ಸಮಾಜದ ಜ
ಬದಿಯಡ್ಕದಲ್ಲಿ ನಡೆದ ಸಮಾಜದ ಸಭೆಯಲ್ಲಿ ಸತತ 7ನೇ ಬಾರಿಗೆ ಮಹಾಮಾತೆ ಮದರು ಮಹಾಸಮಾಜದ ಅಧ್ಯಕ್ಷರಾಗಿ ವಸಂತ ಅಜಕ್ಕೋಡು ಪುನರಾಯ್ಕೆಗೊಂಡರು.
ಪ್ರಧಾನ ಕಾರ್ಯದರಶಿಯಾಗಿ ಶಂಕರ ಡಿ ದರ್ಭೆತ್ತಡ್ಕ, ಕೋಶಾಧಿಕಾರಿಯಾಗಿ ಕೃಷ್ಣದಾಸ್ ಡಿ ಆಯ್ಕೆಗೊಂಡರು.
ಸಭೆಯಲ್ಲಿ ಗೌರವಾಧ್ಯಕ್ಷ ಆನಂದ ಮವ್ವಾರು, ಗೌ.ಸಲಹೆಗಾರ ರಾಮಪ್ಪ ಮಂಜೇಶ್ವರ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ನಿಟ್ಟೋಣಿ ಬಂದ್ಯೋಡು, ಹರಿಶ್ಚಂದ್ರ ಪುತ್ತಿಗೆ, ಗೋಪಾಲ ಡಿ, ಗಂಗಾಧರ ಗೋಳಿಯಡ್ಕ, ಸುಂದರಿ ಮಾರ್ಪನಡ್ಕ, ಪೂರ್ಣಿಮ ನೀರೋಳಿ, ಸುಂದರ ಮಳ್ಳಂಗೈ, ಅನಿಲ್ ಅಜಕ್ಕೋಡ್ ಮೊದಲಾದವರಿದ್ದರು.
ಸುಧಾಕರ ಬೆಳ್ಳಿಗೆ ಸ್ವಾಗತಿಸಿ, ರಾಜೇಶ್ ಕಿಳಿಂಗಾರು ವಂದಿಸಿದರು.