ದೆಹಲಿಯ ರಾಷ್ಟ್ರಪತಿ ಭವನ ಇತಿಹಾಸದಲ್ಲೇ ಮೊದಲ ಬಾರಿಗೆ ಮದುವೆ ಮಂಟಪವಾಗುತ್ತಿದೆ..!
ಈ ವರೆಗೆ ರಾಷ್ಪ್ರಪತಿ ಭವನ ಯಾರೊಬ್ಬರ ಮದುವೆಗೂ ವೇದಿಕೆಯಾದದ್ದಿಲ್ಲ. ಆದರೆ ಇದೀಗ ಇಂಥದ್ದೊಂದು ಅನನ್ಯ ಅವಕಾಶ ಸಿಕ್ಕಿರುವುದು ದೇಶದ ಅತ್ಯಂತ ಪ್ರತಿಷ್ಠಿತ ವ್ಯಕ್ತಿಗೇನೂ ಅಲ್ಲ. ಅದುವೇ ಈ ಸುದ್ದಿಯ ವೈಶಿಷ್ಟ್ಯ.
ಇಷ್ಟಕ್ಕೂ ದೇಶದ ಮೊದಲ ಪ್ರಜೆಯಾದ ರಾಷ್ಟ್ರಪತಿ ಭವನವನ್ನೇ ಮದುವೆ ಮಂಟಪವಾಗಿಯೂ, ಮದುವೆ ಮನೆಯಾಗಿಯೂ ಪಡೆದ ಅದೃಷ್ಟವಂತೆ ಯಾರು ಗೊತ್ತೇ?
ಮತ್ಯಾರೂ ಅಲ್ಲ.., ಸೆಂಟ್ರಲ್ ರಿಸರ್ವ್ ಪೋಲೀಸ್ ಫೋರ್ಸ್ ನಲ್ಲಿ ಉದ್ಯೋಗ ನಿರತಳಾದ ಪೂನಂ ಗುಪ್ತಾ ಎಂಬವರಿಗೆ. ಫೆ.12ರಂದು ಇವರ ಮದುವೆ ರಾಷ್ಟ್ರಪತಿ ಭವನದಲ್ಲಿ ಜರಗಲಿದೆ. ಕಳೆದ 74ನೇ ಗಣರಾಜ್ಯೋತ್ಸವದ ಪೆರೇಡ್ ನಲ್ಲಿ ಸಿಆರ್ ಪಿ ಎಫ್ ನ ಸಂಪೂರ್ಣ ಮಹಿಳಾ ತುಕಡಿಯ ನೇತೃತ್ವ ವಹಿಸಿದ್ದ ಸಹಾಯಕ ಕಮಾಂಡೆಂಟ್ ಆಗಿರುವ ಪೂನಂ ಗುಪ್ತಾ ಅವರಿಗೆ ರಾಷ್ಟ್ರಪತಿ ಭವನವೇ ಈ ಅಪೂರ್ವ ಅವಕಾಶವನ್ನಿತ್ತಿದೆ.
ಆಕೆ ಸಲ್ಲಿಸಿದ ಸೇವೆ, ಆಕೆಯ ಕರ್ತವ್ಯ ದಕ್ಷತೆ ಮತ್ತು ನಿಷ್ಠೆ ಹಾಗೂ ಮಹಿಳಾ ಪ್ರತಿನಿಧಿಯಾಗಿ ಗಣರಾಜ್ಯೋತ್ಸವದಲ್ಲಿ ನೀಡಿದ ಪ್ರದರ್ಶನಗಳನ್ನೆಲ್ಲಾ ಪರಿಗಣಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೇ ಈ ಅವಕಾಶವನ್ನಿತ್ತು ಹರಸಿದ್ದಾರೆ.
ರಾಷ್ಟ್ರಪತಿ ಭವನದ ಮದರ್ ತೆರೇಸಾ ಕ್ರೌನ್ ಕಾಂಪ್ಲೆಕ್ಸ್ ನಲ್ಲಿ ವಿವಾಹ ನಡೆಯಲಿದೆ. ಆಹ್ವಾನಿತರಿಗಷ್ಟೇ ಭಾಗಿಯಾಗಲು ಅವಕಾಶವಿದೆ. ಸದ್ಯ ಸಿಆರ್ಪಿಎಫ್ ಸಿಬ್ಬಂದಿ ಪೂನಂ ಗುಪ್ತ ರಾಷ್ಟ್ರಪತಿ ಭವನದಲ್ಲೇ ಕರ್ತವ್ಯಕ್ಕೆ ನಿಯುಕ್ತರಾಗಿದ್ದು, ತನ್ನ ವಿವಾಹದ,ಮೂಲಕ ಇತಿಹಾಸ ನಿರ್ಮಿಸುತ್ತಿದ್ದಾರೆ.
ತನ್ನ ವೃತ್ತಿಪರತೆಯ ದಕ್ಷತೆಯಿಂದ ಅಪಾರ ಅಭಿಮಾನಿಗಳನ್ನು ಪಡೆದು, ರಾಷ್ಟ್ರಪತಿಯವರ ಮನಗೆದ್ದ ಪೂನಂ ಗುಪ್ತಾಳನ್ನು ವರಿಸುವುದು ಯಾರು ಗೊತ್ತೇ…? ಆಕೆಯಂತೆಯೇ ಕರ್ತವ್ಯ ದಕ್ಷತೆಗೆ ಹೆಸರಾದ, ಪ್ರಸ್ತುತ ಜಮ್ಮುಕಾಶ್ಮೀರದಲ್ಲಿ ಸಹಾಯಕ ಕಮಾಂಡೆಂಟರಾಗಿ ನೇಮಕಗೊಂಡಿರುವ ಅವನೀಶ್ ಕುಮಾರ್. ಬಿಗಿ ಭದ್ರತೆಯೊಂದಿಗೆ ವಿವಾಹ ಜರಗಲಿದೆ. ಸಕಲ ಸರಕಾರಿ ಪ್ರಮುಖರು ಹಾಜರಿರುವರು.