42
- ಬಿಜೆಪಿ ಮಂಜೇಶ್ವರ ಮಂಡಲಾಧ್ಯಕ್ಷರಾಗಿ ಬಿ.ಎಂ.ಆದರ್ಶ್ ಪದಗ್ರಹಣ
ಬಿಜೆಪಿ ಮಂಜೇಶ್ವರ ಮಂಡಲಾಧ್ಯಕ್ಷರಾಗಿ ಬಿ.ಎಂ.ಆದರ್ಶ್ ಜವಾಬ್ದಾರಿ ಸ್ವೀಕರಿಸಿಕೊಂಡರು. ಮಂಜೇಶ್ವರದಲ್ಲಿ ಫೆ 2ರಂದು ನಡೆದ ಪದಗ್ರಹಣ ಸಮಾರಂಭವನ್ನು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಶ್ರೀಕಾಂತ್ ಉದ್ಘಾಟಿಸಿದರು. ಜಿಲ್ಲಾ ಕಾರ್ಯದರ್ಶಿ ಮಣಿಕಂಠ ರೈ ಅಧ್ಯಕ್ಷತೆ ವಹಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷೆ ಎಂ ಎಲ್.ಅಶ್ವಿನಿ, ಮಾಜಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ ರೈ, ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ, ಎಸ್ ಸಿ ಮೋರ್ಛಾ ರಾಜ್ಯ ಉಪಾಧ್ಯಕ್ಷ ಎ.ಕೆ ಕಯ್ಯಾರ್ ಮೊದಲಾದವರು ಉಪಸ್ಥಿತರಿದ್ದರು.
ಮಂಜೇಶ್ವರ ಮಂಡಲ ಮಾಜಿ ಕಾರ್ಯದರ್ಶಿ ಯತಿರಾಜ್ ಸ್ವಾಗತಿಸಿ, ಚಂದ್ರಹಾಸ ಪೂಜಾರಿ ವಂದಿಸಿದರು.