ಕಾಸರಗೋಡು : ಬಿ ಜೆ.ಪಿ ಉದುಮ ಮಂಡಲಾಧ್ಯಕ್ಷೆಯಾಗಿ ಆಯ್ಕೆಗೊಂಡ ಶೈನಿಮೋಳ್ ಶಶಿಕುಮಾರ್ ಅವರು ಕಾರ್ಯಕರ್ತರ ಸಂಭ್ರಮದ ಮೆರವಣಿಗೆಯೊಂದಿಗೆ ಪರವನಡ್ಕ ದೀನದಯಾಳ್ ಸ್ಮಾರಕ ಮಂದಿರದಲ್ಲಿ ಜವಾಬ್ದಾರಿ ವಹಿಸಿಕೊಂಡರು.
ಇದೇ ಸಂದರ್ಭ ಕಾಸರಗೋಡು ಜಿಲ್ಲೆಯ ಬಿಜೆಪಿಗೆ ಪ್ರಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ನೇಮಕಗೊಂಡ ಎಂ.ಎಲ್.ಅಶ್ವಿನಿ ಅವರನ್ನು ಉದುಮ ಮಂಡಲಕ್ಕೆ
ಸ್ವಾಗತಿಸುತ್ತಾ ಸುರೇಶ್ ಕುಮಾರ್ ಕೀಯೂರ್ ಶಾಲು ಹಾಕಿ ಅಭಿನಂದಿಸಿದರು.
ಸಮಾರಂಭದಲ್ಲಿ ಮಾಜಿ ಉದುಮ ಮಂಡಲಾಧ್ಯಕ್ಷ ಪುರುಷೋತ್ತಮನ್ ಅಧ್ಯಕ್ಷತೆ ವಹಿಸಿ ನೂತನ ಅಧ್ಯಕ್ಷೆಗೆ ಜವಾಬ್ದಾರಿ ಹಸ್ತಾಂತರಿಸಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಶ್ರೀಕಾಂತ್, ಮಾಜಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರ್, ಬಿಜೆಪಿ ಜಿಲ್ಲಾಧ್ಯಕ್ಷೆ ಎಂ ಎಲ್. ಅಶ್ವಿನಿ, ಪ್ರಧಾನ ಕಾರ್ಯದರ್ಶಿ ವೇಲಾಯುಧನ್, ಜಿಲ್ಲಾ ಉಪಾಧ್ಯಕ್ಷ ಪಿ ರಮೇಶ್, ಮನುಲಾಲ್ಲಕೋಡೋತ್ತ್, ಬಾಬುರಾಜ್ ಪರವನಡ್ಕಂ, ಮುಳಿಯಾರು ಮಂಡಲ ಅಧ್ಯಕ್ಷ ದಿಲೀಪ್, ಶಿವದಾಸನ್ ಪರವನಡ್ಕಂ ಮೊದಲಾದವರು ಮಾತನಾಡಿದರು.
ಮಂಡಲ ಪ್ರಧಾನ ಕಾರ್ಯದರ್ಶಿ ಸುರೇಶ್ ಸ್ವಾಗತಿಸಿ, ಕಾರ್ಯದರ್ಶಿ ರತೀಶ್ ವಂದಿಸಿದರು.