ಕೂಡ್ಲು ಅಯ್ಯಪ್ಪ ವಿಗ್ರಹಕ್ಕೆ ತೊಡಿಸಿದ್ದ ಚಿನ್ನದ ಸರ ಬೆಳ್ಳಿ ಲೇಪಿತ ಸರವಾಗಿ ಮಾರ್ಪಾಡು

ನಾಟಕೀಯ ತನಿಖೆಗಳ ಬಳಿಕ ಮಂದಿರದ ಮಾಜಿ ಕಾರ್ಯದರ್ಶಿಯೇ ಬಲೆಗೆ

by Narayan Chambaltimar
  • ಕೂಡ್ಲು ಅಯ್ಯಪ್ಪ ವಿಗ್ರಹಕ್ಕೆ ತೊಡಿಸಿದ್ದ ಚಿನ್ನದ ಸರ ಬೆಳ್ಳಿ ಲೇಪಿತ ಸರವಾಗಿ ಮಾರ್ಪಾಡು
  • ನಾಟಕೀಯ ತನಿಖೆಗಳ ಬಳಿಕ ಮಂದಿರದ ಮಾಜಿ ಕಾರ್ಯದರ್ಶಿಯೇ ಬಲೆಗೆ

ಕಾಸರಗೋಡಿನ ಕೂಡ್ಲು ಪಾರೆಕಟ್ಟೆ ಶಾಸ್ತಾನಗರದ ಅಯ್ಯಪ್ಪ ಮಂದಿರದಲ್ಲಿ ಅಯ್ಯಪ್ಪ ವಿಗ್ರಹಕ್ಕೆ ತೊಡಿಸಲಾಗಿದ್ದ 4ಪವನ್ ಚಿನ್ನದ ಸರ ಎಗರಿಸಿ ಬದಲಿಗೆ ಚಿನ್ನದ ಒಪ್ಪ ಹಾಕಿದ ಬೆಳ್ಳಿಯ ಸರ ತೊಡಿಸಿ ವಂಚಿಸಿದ ವ್ಯಕ್ತಿ ನಾಟಕೀಯವಾಗಿ ಫೋಲೀಶ್ ವಶವಾಗಿದ್ದಾನೆ.

ಅಯ್ಯಪ್ಪ ಮಂದಿರದ ಅಧ್ಯಕ್ಷ ಕೆ.ವೇಣುಗೋಪಾಲ್ ನೀಡಿದ ದೂರಿನಂತೆ ಮಾಜಿ ಕಾರ್ಯದರ್ಶಿ ಕೂಡ್ಳು ಹೊಸಮನೆ ರಸ್ತೆಯ ದಯಾನಂದ ಶೆಟ್ಟಿ ಎಂಬಾತನ ವಿರುದ್ಧ ಕೇಸು ದಾಖಲಿಸಿ ಆರೋಪಿಯನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.

ಕೂಡ್ಳು ಅಯ್ಯಪ್ಪ ಮಂದಿರದ ವಿಗ್ರಹಕ್ಕೆ ಊರ ಭಕ್ತಾದಿಗಳೆಲ್ಲ ಸೇರಿ 4ಪವನ್ ತೂಕದ ಚಿನ್ನದ ಸರಹಾಕಿದ್ದರು. ಈ ಸಂದರ್ಭದಲ್ಲಿ ದಯಾನಂದ ಶೆಟ್ಟಿ ಕಾರ್ಯದರ್ಶಿಯಾಗಿದ್ದು, ಮಂದಿರದ ಸೊತ್ತು ಸಂರಕ್ಷಣೆಯ ಹೊಣೆ ಅವರದ್ದಾಗಿತ್ತು. ಇತ್ತೀಚೆಗೆ ದೇವರ ಕೊರಳಿನ ಚಿನ್ನದ ಸರ ತುಂಡಾಗಿ ಬಿತ್ತು. ಅದನ್ನು ಶುಭ್ರಗೊಳಿಸಿ ರಿಪೇರಿಗೆಂದು ಕೊಂಡೊಯ್ದಾಗ ಅದು ಚಿನ್ನವಲ್ಲವೆಂದೂ, ಬೆಳ್ಳಿಲೇಪಿತ ಮಾಲೆಯೆಂದೂ ಬಯಲಾಯಿತು. ಇದು ಊರಲ್ಲಿ ಭಾರೀ ಚರ್ಚೆಗೆ ಗ್ರಾಸವಾಯಿತು.

ಈ ಕುರಿತು ಕಾರ್ಯದರ್ಶಿಯಾಗಿದ್ದ ದಯಾನಂದನ ಮೇಲೆ ಶಂಕೆ ಮೂಡಿದಾಗ ಆತ ಸತ್ಯಪ್ರಮಾಣಕ್ಕೆ ಮುಂದಾದನೆಂದೂ, ಬಳಿಕ ಮೊನ್ನೆ ಚಿನ್ನದ ಸರ ತನ್ನ ಕೈಯ್ಯಿಂದ ಬಾವಿಗೆ ಬಿದ್ದಿದೆಯೆಂದೂ ಹೇಳಿದನು. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳವನ್ನು ಕರೆಸಿ ಬಾವಿಯಿಂದ ನೀರು ಬತ್ತಿಸಿ ಹುಡುಕಿದರೂ ಚಿನ್ನಾಭರಣ ಪತ್ತೆಯಾಗಲಿಲ್ಲ. ಬಳಿಕ ಪೋಲೀಸರು ಬಂದು ವಿಚಾರಿಸಿದಾಗ ತಪ್ಪೊಪ್ಪಿಕೊಂಡ ಆರೋಪಿ ಚಿನ್ನದ ಸರ ತಾನು ತೆಗೆದು ಮಾರಿಕೊಂಡಿರುವುದಾಗಿ ಪೋಲೀಸರಲ್ಲಿ ಒಪ್ಪಿದ್ದಾನೆ. ಈ ಹಿನ್ನೆಲೆಯಲ್ಲಿ ದೂರಿನ ಮೇರೆಗೆ ಕೇಸು ದಾಖಲಿಸಿ ಆರೋಪಿಯನ್ನು ವಶಕ್ಕೆ ಪಡೆದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00