102
ಕಾಸರಗೋಡಿನ ಅಡೂರಿನಲ್ಲಿ ಉಪಯೋಗಶೂನ್ಯ ಪಾಳು ಬಾವಿಯಲ್ಲಿ ಚಿರತೆಯ ಶವ ಪತ್ತೆಯಾಗಿದೆ. ಅಡೂರು ತಲ್ಪಚ್ಚೇರಿಯ ಮೋಹನ ಎಂಬವರ ಬಾವಿಯಲ್ಲಿ ಚಿರತೆಯು ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮನೆ ಪರಿಸರದಲ್ಲಿ ದುರ್ಗಂಧ ಹರಡಲಾರಂಭಿಸಿದ ಹಿನ್ನೆಲೆಯಲ್ಲಿ ತಪಾಸಿಸಿದಾಗ ಪಾಳು ಬಾವಿಯಲ್ಲಿ ಚಿರತೆ ತೇಲುವುದು ಕಂಡುಬಂತು. ಈ ಕುರಿತು ಅರಣ್ಯ ಇಲಾಖಾ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಅವರು ಸ್ಥಳ ಸಂದರ್ಶಿಸಿದ್ದಾರೆ.
ಕಾಸರಗೋಡಿನ ಅರಣ್ಯ ಪ್ರದೇಶ ಹೊಂದಿಕೊಂಡ ನಾಡಿನಲ್ಲಿ ಇತ್ತೀಚೆಗೆ ಚಿರತೆ ಕಾಟ ಹೆಚ್ಚಾಗಿದೆ. ಅಡೂರಿನ ತಲ್ಪಚ್ಚೇರಿ ಬಳಿಯಲ್ಲಿ ಇತ್ತೀಚೆಗೆ ಕಾಡಾನೆಗಳೆರಡು ಕಾದಾಡಿ ಒಂದು ಕಾಡಾನೆ ಮೃತಪಟ್ಟಿತ್ತು.