- ಬಾಯಾರು ಚೇರಾಲಿನಲ್ಲಿ ಮಹಾತ್ಮಗಾಂಧಿ ಕುಟುಂಬ ಸಂಗಮ
- ಗ್ರಾಮಸ್ವರಾಜ್ಯದ ಕನಸು ನನಸಾಗಿಸಲು ಆಹ್ವಾನ
ಬಾಯಾರು :
ಗಾಂಧೀಜಿ ಕನಸು ಕಂಡ ಗ್ರಾಮ ಸ್ವರಾಜ್ಯದ ಸಂಕಲ್ಪವನ್ನು ನನಸಾಗಿಲು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನು ಸಿದ್ದರಿರಬೇಕು. ಆ ನಿಟ್ಟಿನಲ್ಲಿ ಮುಂಬರುವ ಸ್ಥಳೀಯಾಡಳಿತ ಚುನಾವಣೆ ನಮಗೆ ಬಹಳ ಮಹತ್ವ ಹೊಂದಿದೆ ಎಂದು ಕುಂಬಳೆ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಲಕ್ಷ್ಮಣ ಪ್ರಭು ಕುಂಬಳೆ ಅಭಿಪ್ರಾಯಪಟ್ಟರು. ಪೈವಳಿಕೆ ಪಂಚಾಯಿತಿನ 9ನೇ ವಾರ್ಡು ಚೇರಾಲಿನಲ್ಲಿ ಸೇರಿದ ಮಹಾತ್ಮಾ ಗಾಂಧಿ ಕುಟುಂಬ ಸಂಗಮ ಉದ್ಘಾಟಿಸಿ ಅವರು ಮಾತನಾಡಿದರು. ಮಂಡಲ ಕಾಂಗ್ರೆಸ್ ಅಧ್ಯಕ್ಷ ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರಾಘವೇಂದ್ರ ಭಟ್ ಅವರು ಸಮಕಾಲೀನ ರಾಜಕೀಯದಲ್ಲಿ ಮಹಾತ್ಮಾ ಗಾಂಧಿಯವರ ಚಿಂತನೆಗಳ ಪ್ರಾಧಾನ್ಯತೆಯ ಬಗ್ಗೆ ಮಾತನಾಡಿದರು. ಬ್ಲಾಕ್ ಉಪಾಧ್ಯಕ್ಷ ನಾರಾಯಣ ಏದಾರ್ ಶುಭಾಶಂಸನೆಗೈದರು. ಅಬ್ಬುಲ್ಲ ಹಾಜಿ, ಗಂಗಾಧರ ನಾಯ್ಕ್, ಕುಂಞಣ್ಣ ನಾಯ್ಕ್, ಯೂಸುಫ್ ಚೇರಾಲ್, ಮೊದಲಾದವರು ಉಪಸ್ಥಿತರಿದ್ದರು. ವಾರ್ಡ್ ಕಾರ್ಯದರ್ಶಿ ಅಬ್ದುಲ್ ರಸಾಕ್ ಸ್ವಾಗತಿಸಿದರು. ಮಂಡಲ ಕಾರ್ಯದರ್ಶಿ ಶಿವರಾಮ ಶೆಟ್ಟಿ ಧನ್ಯವಾದವಿತ್ತರು.