- ಶಾಸ್ತ್ರೀಯ ಸಂಗೀತದಲ್ಲಿ ಅತ್ಯುತ್ತಮ ಮಾದರಿ ಪ್ರಬಂಧ ಮಂಡಿಸಿ ಡಾಕ್ಟರೇಟ್ ಮುಡಿದ ದಿವ್ಯಶ್ರೀ
- ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ವಿ ವಿ.ಶ್ಲಾಘನೆ
ಕರ್ಣಾಟಕ ಶಾಸ್ತ್ರೀಯ ಸಂಗೀತದ ಗಮಕಗಳು ಅನುಬಂಧಿತವಾದ ರಕ್ತಿರಾಗಗಳ ಕುರಿತು ಗಂಭೀರ ಅಧ್ಯಯನಗೈದು ಮಾದರಿ ಪ್ರಬಂಧ ಮಂಡಿಸಿ ಸಂಗೀತಜ್ಞೆ ದೀಪಶ್ರೀ ಬೆಂಗಳೂರು ವಿ.ವಿಯಿಂದ ಡಾಕ್ಟರೇಟ್ (ಪಿಎಚ್ ಡಿ)ಪಡೆದರು. ಶಾಸ್ತ್ರೀಯ ಸಂಗೀತದ “ಎ ಸ್ಟಡಿ ಆಫ್ ಗಮಕಾಸ್ ಏಂಡ್ ದೆಯರ್ ಎಪ್ಲಿಕೇಷನ್ಸ್ ಇನ್ ರಕ್ತಿ ರಾಗಾಸ್” ಎಂಬ ವಿಷಯದಲ್ಲಿ ಡಾ. ಹಂಸಿನಿ ನಾಗೇಂದ್ರ ಅವರ ಮಾರ್ಗದರ್ಶನದಲ್ಲಿ ಇವರು ಸಂಶೋಧನಾ ಪ್ರಬಂಧ ಮಂಡಿಸಿದ್ದರು. ಮೂಲತಃ ಕಾಸರಗೋಡು ಜಿಲ್ಲೆಯ ಮುಳ್ಳೇರಿಯ ಸಮೀಪದ ಪ್ರಶಾಂತ್ ಕಯಂಪಾಡಿ ಅವರ ಪತ್ನಿಯಾದ ದೀಪಶ್ರೀ ಅವರ ಸಂಶೋಧನಾ ಪ್ರಬಂಧ ವಿ ವಿ.ಯ ಶ್ಲಾಘನೆಗೆ ಪಾತ್ರವಾಗಿದೆ.
ತೌಲನಿಕ ಸಂಶೋಧನೆಗೆ ಕೃತ್ರಿಮ ಅಡ್ಡ ದಾರಿಗಳನ್ನು ಬಳಸದೇ , ಉದಾಹರಣೆಗಳನ್ನು ಮತ್ತು ಸಾಕ್ಷ್ಯಗಳನ್ನು ಮಂಡಿಸುತ್ತಾ ಅವರು ಸಮರ್ಪಿಸಿದ ಅಧ್ಯಯನ ಪ್ರಬಂಧವು ಶ್ರೇಷ್ಠ ಸಂಶೋಧನಾ ಮಾದರಿಯೆಂದು ಪ್ರಶಂಸಿಸಲ್ಪಟ್ಟಿದೆ. ವಿಷಯದ ಆಯ್ಕೆಯೇ ಗಂಭೀರವಾಗಿದ್ದು, ಅದನ್ನು ಅಷ್ಟೇ ಕಾಳಜಿಯಿಂದ ಮಂಡಿಸಿರುವುದು ಉತ್ತಮ ಮಾರ್ಗದರ್ಶಕಿ ಮತ್ತು ಸಂಶೋಧಕಿಯ ಪ್ರತಿಭೆಗೆ ನಿದರ್ಶನವಾಗಿದೆ.