ಮಹಾಕುಂಭ ಮೇಳದ ಕೋಟ್ಯಾಂತರ ಜನರ ಅಮೃತಸ್ನಾನಕ್ಕೆ ಜಗತ್ತೇ ಬೆರಗು..! ಎಷ್ಟು ಕುಂಭಮೇಳವಿದೆ…ಅದು ನಡೆಯುವ ಜಾಗದ ಪಾವಿತ್ರ್ಯವೇನು ಬಲ್ಲಿರಾ?

by Narayan Chambaltimar

ದೇಶದಾದ್ಯಂತ ಈಗ ಕುಂಭಮೇಳದ್ದೇ ಕೌತುಕದ ಸುದ್ದಿ..
ಜಗತ್ತಿನೆಲ್ಲಡೆಯಿಂದ ಕೋಟ್ಯಾಂತರ ಜನರನ್ನು ಕುತೂಹಲದಿಂದ ಸೆಳೆಯುವ ಮಹಾಕುಂಭಮೇಳ ಈ ಶತಮಾನದ ಧಾರ್ಮಿಕ ಅಚ್ಚರಿಗಳಲ್ಲೊಂದು..!
ಏನಿದು ಕುಂಭಮೇಳ..? ಎಷ್ಟು ನಮೂನೆಯ ಕುಂಭಮೇಳಗಳಿವೆ?
ಇದು ನಡೆಯುವ ಜಾಗದ ಹಿನ್ನೆಲೆಯ ಪಾವಿತ್ರ್ಯವೇನು…?

ದೇಶದ ಸಂತರ, ಸದ್ಭಕ್ತರ ಮಹಾಸಂಗಮವಾದ ಕುಂಭಮೇಳ ಪ್ರತೀ 3ವರ್ಷ, 6ವರ್ಷಕ್ಕೊಮ್ಮೆ, 12ವರ್ಷಕ್ಕೊಮ್ಮೆ, ಮತ್ತು 144ವರ್ಷಗಳಿಗೊಮ್ಮೆ ನಡೆಯುವುದು ರೂಢಿ. ಇದು ಸನಾತನ ಧರ್ಮದ ಅತ್ಯಂತ ಪ್ರಸಿದ್ಧ ಮಹಾಪರ್ವ. ರಾಷ್ಟ್ರ ಚರಿತೆಯಲ್ಲೇ ಅದು ಮಹತ್ವದ ಇತಿಹಾಸ ಹೊಂದಿದೆ. ಪ್ರಸ್ತುತ ದೈನಂದಿನ ಕೋಟಿ,ಕೋಟಿ ಜನರು ಪುಣ್ಯಸ್ನಾನಗೈದು ಕುಂಭಮೇಳದಲ್ಲಿ ಪಾಲ್ಗೊಳ್ಳುವ ವರದಿಗಳು ಬರುತ್ತಿದೆ. ಈ ಮೂಲಕ ಜಗದ ಜನತೆಯ ಕುತೂಹಲದ ಕಣ್ಣುಗಳರಳಿವೆ..
ಅಚ್ಚರಿ ಮೂಡಿದೆ.

ಚತುರ್ವಿಧ ಕುಂಭಗಳು…
ಉತ್ತರಪ್ರದೇಶ ಭಾರತದ ಹೃದಯಭೂಮಿ. ಅಲ್ಲಿನ ಪ್ರಯಾಗ್ ರಾಜ್ ನಲ್ಲಿ 144ವರ್ಷದ ಬಳಿಕ ನಡೆಯುವ ಕುಂಭಮೇಳವೇ ಈಗಿನ ಮಹಾಕುಂಭಮೇಳ.
ಉಜ್ಜೈನಿ, ಹರಿದ್ವಾರ್, ಪ್ರಯಾಗ್ರಾಜ್ ಮತ್ತು ನಾಸಿಕ್ ನಲ್ಲಿ ಪ್ರತಿ ಮೂರುವರ್ಷಕ್ಕೊಮ್ಮೆ ನಡೆಯುವ ಮಹಾಜಾತ್ರೆಯನ್ನು ಕುಂಭ ಎಂದು ಕರೆಯುತ್ತಾರೆ. ಹರಿದ್ವಾರ್, ಪ್ರಯಾಗ್ ರಾಜ್ ನಲ್ಲಿ 6ವರ್ಷಕ್ಕೊಮ್ಮೆ ನಡೆಯುವ ನಡೆಯುವ ಇನ್ನೊಂದು ಕುಂಭವನ್ನು ಅರ್ಧ ಕುಂಭ ಎನ್ನುತ್ತಾರೆ. ಇದೇ ವೇಳೆ ಪ್ರಯಾಗ್ ರಾಜ್ ನಲ್ಲಿ 12ವರ್ಷಕ್ಕೊಮ್ಮೆ ನಡೆಯುವ ಕುಂಭವನ್ನು ಪೂರ್ಣಕುಂಭ ಮೇಳ ಎನ್ನುತ್ತಾರೆ. ಇದೆಲ್ಲದಕ್ಕೆ ತಿಲಕ ತೊಟ್ಟು ಕಿರೀಟ ಇಟ್ಟಂತೆ 144ವರ್ಷಗಳಿಗೊಮ್ಮೆ ನಡೆಯುವುದೇ ಮಹಾಕುಂಭಮೇಳ..

ಸನಾತನ ಪರಂಪರೆಯ ಹಿಂದೂ ದಿನದರ್ಶಿಕೆಯನ್ನು ಆಧರಿಸಿ ಕುಂಭದ ನಿರ್ಣಯಗಳಾಗುತ್ತದೆ.
ಮೂರು, ಆರು ವರ್ಷಕ್ಕೊಮ್ಮೆ ಕುಂಭ ಮೇಳ ಇದ್ದರೂ ಪೂರ್ಣಕುಂಭ ಮೇಳ ಜರಗುವುದು 12ವರ್ಷಗಳಿಗೊಮ್ಮೆ ಮಾತ್ರ. ಕಾರಣ ಹಿಂದೂ ದಿನದರ್ಶಿಕೆಯಂತೆ ದೇವರ 12ದಿನಗಳು ಮನುಷ್ಯರ ಪಾಲಿಗೆ 12ವರ್ಷವೆಂದು ಹೇಳುತ್ತಾರೆ. ಆದ್ದರಿಂದ 12ವರ್ಷಕ್ಕೊಮ್ಮೆ ಪೂರ್ಣ ಕುಂಭ ನಡೆಯುತ್ತದೆ. 12ರಿಂದ 12ನ್ನು ಗುಣಿಸಿದಾಗ 144 ಆಗುವುದರಿಂದ 144ವರ್ಷಕ್ಕೊಮ್ಮೆ ಮಹಾ ಕುಂಭಮೇಳ ನಡೆಯುತ್ತದೆ.
ಇದನ್ನು ಸನಾತನ ಕಾಲದಿಂದ ಪ್ರಯಾಗ್ ರಾಜ್ ನಲ್ಲೇ ನಡೆಸಲಾಗುತ್ತಿದೆ.

ಕುಂಭ ರಾಶಿಗೆ ಗುರು ಪ್ರವೇಶಿಸಿದಾಗ ಮತ್ತು ಮೇಷ ರಾಶಿಗೆ ಸೂರ್ಯನು ಪ್ರವೇಶಿಸಿದಾಗ ಕುಂಭ ಹಬ್ಬ ಆಚರಿಸುವುದು ರೂಢಿ. ಜತೆಗೆ ಇದು ನಾಲ್ಕುಗ್ರಹಗಳ ಅಪರೂಪದ ಸಂಯೋಜನೆಯ ವೈಜ್ಞಾನಿಕ ಮಹತ್ವವನ್ನೂ ಪಡೆದಿದೆ.

ಮಹಾಕುಂಭ ಮೇಳ ಆರಂಭಗೊಂಡದ್ದು ಎಲ್ಲಿಂದ?

ಕುಂಭಮೇಳ ಎಂದರೆ ಅಘೋರಿಗಳ, ನಾಗಾ ಸಾಧುಗಳ ಸಂಭ್ರಮ. ಉಳಿದ ಸಮಯದಲ್ಲಿ ಸಾರ್ವಜನಿಕವಾಗಿ ಕಾಣದ ಇವರು ಕುಂಭಮೇಳದಲ್ಲಿ ಹಿಂಡು ಹಿಂಡು ಕಾಣುತ್ತಾರೆ. ಇವರೆಲ್ಲರೂ ಪ್ರಯಾಗ್ ರಾಜ್ ನ ತ್ರಿವೇಣಿ ಸಂಗಮದಲ್ಲಿ ಸ್ನಾನಕ್ಕಾಗಿ ಬರುವುದು ಕುಂಭಮೇಳದ ವೈಶಿಷ್ಠ್ಯವಾದರೂ ಪ್ರಯಾಗ್ ರಾಜ್ ನಲ್ಲೇ ಏಕೆ ಮಹಾಕುಂಭ ಮೇಳ?
ಏಕೆಂದರೆ ಕುಂಭಮೇಳಕ್ಕೂ ಸಮುದ್ರ,ಮಥನಕ್ಕೂ ಸಂಬಂಧದ ಕತೆಗಳಿವೆ. ದೇವಾಸುರರು ಪಾಲ್ಗಡಲ ಮಥನ ನಡೆಸಿದಾಗ ಅಮೃತ ಕಲಶದಿಂದ ನಾಲ್ಕು ಹನಿ ಅಮೃತವು ಬಿದ್ದುವು. ಈ ನಾಲ್ಕು ಸ್ಥಳದಲ್ಲೇ ಕುಂಭಮೇಳ ನಡೆಯುತ್ತದೆ.
ಆದ್ದರಿಂದಲೇ ತ್ರಿವೇಣಿ ಸಂಗಮದ ಸ್ನಾನಕ್ಕೆ ಅಮೃತ ಸ್ನಾನ ಎಂಬ ಹೆಸರಃ ಬಂದಿದೆ. 44ದಿನಗಳ ಕಾಲ ನಡೆಯುವ ಮಹಾಕುಂಭಮೇಳ 2025 ಜನವರಿ 13ರಂದು ಮಕರ ಸಂಕ್ರಮಣದೊಂದಿಗೆ ಆರಂಭಗೊಂಡಿದ್ದು ಫೆಬ್ರವರಿ26ರಂದು ಶಿವರಾತ್ರಿಯ ದಿನ ಸಮಾಪ್ತಿಯಾಗಲಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00