ತುಳುನಾಡಿನ ಅರ್ಚಕರಿಗೆ ಒಲಿದ ತಿರುವನಂತಪುರ ಪದ್ಮನಾಭ ದೇಗುಲದ ಪೂಜೆಯ ‘ಪೆರಿಯ ನಂಬಿ’ ಪಟ್ಟ

by Narayan Chambaltimar

ದೇಶದ ಅತ್ಯಂತ ಶ್ರೀಮಂತ ದೇವಸ್ಥಾನವಾದ ತಿರುವನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವರನ್ನು ಪೂಜಿಸುವ ನಿಯೋಗ ದ.ಕ ಜಿಲ್ಲೆಯ ಕೊಕ್ಕಡದ ಅರ್ಚಕರಿಗೆ ಪ್ರಾಪ್ತವಾಗಿದೆ. ಇದು ತಿರುವನಂತಪುರ ದೇಗುಲದ ಪೆರಿಯ (ಹಿರಿಯ) ನಂಬಿ ಪಟ್ಟ.
ಈ ಸ್ಥಾನಕ್ಕೆ ವಿಶೇಷ ಗೌರವದ ಮರ್ಯಾದೆಗಳಿವೆ..

ತಿರುವನಂತಪುರ: ಭಾರತದಲ್ಲೇ ಸಿರಿತನದ ದೇವಾಲಯವಾದ ತಿರುವನಂತಪುರ ದೇಗುಲದ ಪ್ರಧಾನ ಅರ್ಚಕರಾಗಿ ದ.ಕ.ಜಿಲ್ಲೆಯ ಕೊಕ್ಕಡದ ಬಡೆಕ್ಕರ ಸತ್ಯನಾರಾಯಣ ತೋಡ್ತಿಲ್ಲಾಯ ನೇಮಕಗೊಂಡಿದ್ದಾರೆ.
ತಿರುವನಂತಪುರ ದೇಗುಲದ ಪ್ರಧಾನ ಅರ್ಚಕ ಸ್ಥಾನವು ದೊರೆಯುವ ಅಕ್ಕರ ದೇಶಿ ಪ್ರತಿನಿಧಿಯಾಗಿರುವ ಇವರು ಈ ಸ್ಥಾನಕ್ಕೇರುವ ಅತ್ಯಂತ ಕಿರಿಯವರಾಗಿದ್ದಾರೆ.

ಪ್ರಧಾನ ಅರ್ಚಕರಿಗೆ ಪೆರಿಯನಂಬಿ ಸ್ಥಾನ,ಮಾನದ,ಗೌರವಗಳಿವೆ. ಇದರಂತೆ ತಿರುವನಂತಪುರ ಅನಂತ ಪದ್ಮನಾಭ ಸ್ವಾಮಿ ಸಂಸ್ಥಾನದಿಂದ ನೀಡಲಾಗುವ ಛತ್ರ,ಚಾಮರ ಸಹಿತ ಗೌರವಗಳಿವೆ.
ಕಳೆದ ಆರು ತಿಂಗಳ ಹಿಂದೆಯಷ್ಟೇ ಅರ್ಚಕರಾಗಿ ತಿರುವನಂತಪುರ ದೇಗುಲದಲ್ಲಿ ನೇಮಕಗೊಂಡಿದ್ದ ಕೊಕ್ಕಡದ ದಿ. ಸುಬ್ರಾಯ ತೋಡ್ತಿಲ್ಲಾಯರ ಮಗ ಬಡಕ್ಕೆರೆ ಸತ್ಯನಾರಾಯಣ ತೋಡ್ತಿಲ್ಲಾಯರು ಇದೀಗ ಪ್ರಧಾನ ಅರ್ಚಕ ಸ್ಥಾನಕ್ಕೆ ಆರೋಹಣವಾದ ಕಿರಿಯರಲ್ಲಿ ಮೊದಲಿಗರೆಂದು ಗುರುತಿಸಲ್ಪಟ್ಟಿದ್ದಾರೆ.

ತಿರುವನಂತಪುರದಲ್ಲಿ ಅನಂತಪದ್ಮನಾಭನನ್ನು ಪೂಜಿಸಿ ಅರ್ಚಿಸುವುದು ಎಂದರೆ ಸಾಕ್ಷಾತ್ ವೈಕುಂಠದಲ್ಲಿ ಶ್ರೀಹರಿಯನ್ನು ಪೂಜಿಸಿದಷ್ಟೇ ಪವಿತ್ರ. ಈ ಅವಕಾಶ ಬಿಲ್ವಮಂಗಲ ಶ್ರೀಗಳ ಮೂಲದ ನನಗೆ ಒಲಿದದ್ದು ದೈವ ನಿಯೋಗ. ಇದಕ್ಕಾಗಿ ನಾನು ತಿರುವನಂತಪುರದ ರಾಜಸಂಸ್ಥಾನಕ್ಕೆ ತಲೆಬಾಗುತ್ತೇನೆ. ನನ್ನ ತುಳುನಾಡಿನ ಸರ್ವರಿಗಾಗಿಯೂ ಪ್ರಾರ್ಥಿಸುತ್ತೇನೆ. ಬದುಕಿನಲ್ಲಿ ಒಮ್ಮೆಯಾದರೂ ತಿರುವನಂತಪುರದ ಅನಂತಪದ್ಮನಾಭನನ್ನು ನೋಡಬೇಕೆಂದು ನನಗೆ ಆಸೆ ಇತ್ತು. ಆದರೆ ಈಗ ಪೂಜಿಸುವ ಯೋಗ ಭಗವಂತ ಕರುಣಿಸಿದ್ದಾನೆ. ಇದು ನನ್ನ ಜನ್ಮ ಸಾಫಲ್ಯದ ಅವಕಾಶ…
-ಶ್ರೀ ಸತ್ಯ ನಾರಾಯಣ ತೋಡ್ತಿಲ್ಲಾಯ
ಪೆರಿಯನಂಬಿ, ತಿರುವನಂತಪುರಂ

 

 

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00