ಕುಂಭ ಮೇಳದಲ್ಲಿ ಸನ್ಯಾಸಿನಿಯಾದ ಅಪ್ಪಟ ಕಮ್ಯೂನಿಸ್ಟ್ , ನಕ್ಸಲೈಟ್ ನಾಯಕನ ಮಗಳು : ಮಾರ್ಕ್ಸ್ ನಿಂದ ಮಹರ್ಷಿಯೆಡೆಗೆ ಮತ್ತೊಂದು ಪಯಣ…

ಮಲಯಾಳಂ ನಟಿ ನಿಖಿಲಾ ವಿಮಲ್ ಸಹೋದರಿ ಅಖಿಲಾ ಇನ್ನು ಆವಂತಿಕಾ ಭಾರತಿ..

by Narayan Chambaltimar
  • ಕುಂಭ ಮೇಳದಲ್ಲಿ ಸನ್ಯಾಸಿನಿಯಾದ ಅಪ್ಪಟ ಕಮ್ಯೂನಿಸ್ಟ್ , ನಕ್ಸಲೈಟ್ ನಾಯಕನ ಮಗಳು : ಮಾರ್ಕ್ಸ್ ನಿಂದ ಮಹರ್ಷಿಯೆಡೆಗೆ ಮತ್ತೊಂದು ಪಯಣ…
  • ಮಲಯಾಳಂ ನಟಿ ನಿಖಿಲಾ ವಿಮಲ್ ಸಹೋದರಿ ಅಖಿಲಾ ಇನ್ನು ಆವಂತಿಕಾ ಭಾರತಿ..

ಕೇರಳದ ಅಪ್ಪಟ ಕಮ್ಯೂನಿಸ್ಟ್ ಕ್ರಾಂತಿಕಾರಿ ಕಲಾಕುಟುಂಬದ ಮಹಿಳೆ ಕುಂಭಮೇಳದಲ್ಲಿ ಸನ್ಯಾಸ ಸ್ವೀಕರಿಸಿ ಧಾರ್ಮಿಕ ಪಥಕ್ಕೆ ಕಾಲೂರಿದ್ದಾರೆ. ಇದು ಮತ್ಯಾರೂ ಅಲ್ಲ, ಪ್ರಸಿದ್ಧ ನಟಿ, ಪ್ರಗತಿಪರಳಾದ ನಿಖಿಲಾ ವಿಮಲ್ ನ ಸಹೋದರಿ. ಆದ್ದರಿಂದಲೇ ಪ್ರಸ್ತುತ ಅಖಿಲಾ ವಿಮಲ್ ಸನ್ಯಾಸಿನಿಯಾದದ್ದು ಭಾರೀ ಚರ್ಚೆಗೆ, ಜಾಲತಾಣಿಗರ ನಡುವೆ ವಿಮರ್ಶೆಗೆ ಗ್ರಾಸವಾಗಿದೆ.

ಮೂಲತಃ ಕಣ್ಣೂರು ತಳಿಪರಂಬ ನಿವಾಸಿಯಾದ ಇವರ ತಂದೆ ಎಂ.ಅರ್.ಪವಿತ್ರನ್ ಒಂದು ಕಾಲದ ಕಟ್ಟರ್ ನಕ್ಸಲೈಟ್ ನಾಯಕ. ಬಳಿಕ ಮಲಯಾಳದ ಎಡಪಂಥೀಯ ಲೇಖಕ. ತಾಯಿ ನೃತ್ಯ ಕಲಾವಿದೆ ವಿಮಲಾ ಕಲಾಮಂಡಲಂ ನಲ್ಲಿ ನೃತ್ಯಾಧ್ಯಾಪಕಿ. ಇವರದ್ದು ಕಟ್ಟಾ ಕಮ್ಯುನಿಸ್ಟ್ ಕುಟುಂಬ.

ಮಕ್ಕಳಾದ ಅಖಿಲಾ, ನಿಖಿಲಾ ರ ಪೈಕಿ ನಿಖಿಲಾ ಎಳವೆಯಲ್ಲೇ ಅಭಿನಯ ರಂಗಕ್ಕೆ ಕಾಲೂರಿದರೆ ಹಿರಿಯವಳಾದ ನಿಖಿಲಾ ಶಿಕ್ಷಣದಲ್ಲಿ ಗಮನವಿಟ್ಟು, ದೆಹಲಿ ಜೆ.ಎನ್ ಯು ನಲ್ಲಿ ಥಿಯೇಟರ್ ಆರ್ಟ್ಸ್ ನಲ್ಲಿ ಸ್ನಾತ್ತಕೋತ್ತರ ಪದವಿ ಪಡೆದರು. ಬಳಿಕ ಅಮೇರಿಕಾ ತೆರಳಿ ಹಾರ್ವರ್ಡ್ ಯೂನಿವರ್ಸಿಟಿಯಿಂದ theatre and performanse research felloship ಪಡೆದರು.

ರಂಗಭೂಮಿ ಮೂಲಕ ಕಲಾವಿದೆಯಾಗಿ ದುಡಿಯುತ್ತಿರುವಾಗಲೇ ಆಧ್ಯಾತ್ಮದತ್ತ ವಾಲಿದ ಇವರು ಇದೀಗ ದಿಢೀರನೆ ಕಾಷಾಯ ತೊಟ್ಟು ಸ್ವಾಮಿನಿಯ ವೇಷದಲ್ಲಿ ಕಂಡಾಗ ಎಲ್ಲರಿಗೂ ದಿಗ್ಭ್ರಮೆಯಾಯಿತು.
ಕುಂಭಮೇಳದಲ್ಲಿ ಅಖಿಲಾ ತನ್ನ ಧಾರ್ಮಿಕ ಗುರು ಅಭಿನವ ಬಾಲಾನಂದ ಭೈರವ್ ಮೂಲಕ ಜೂನಾ ಅಖಾಡದಲ್ಲಿ ಮಹಾಮಂಡಲೇಶ್ವರ್ ಅವದೇಶಾನಂದ ಗಿರಿ ಅವರಿಂದ ದೀಕ್ಷೆ ಪಡೆದು ಆವಂತಿಕಾ ಭಾರತಿ ಎಂದೆನಿಸಕೊಂಡರು.

ನಿಖಿಲಾ ವಿಮಲ್ ಕೂಡಾ ಎಳೆಯ ಹರೆಯದಲ್ಲೇ ಅಪ್ಪನಿಂದ ಸೈದ್ಧಾಂತಿಕ ಪ್ರಚೋದನೆ ಪಡೆದವರು. ಎಡಪಂಥೀಯ ಚಿಂತನೆಗಳ ಸಂವಾದ ನಡೆಸುತ್ತಿದ್ದವರು. ಈ ಪಯಣ ಅವರನ್ನು ಜೆ ಎನ್.ಯು ಗೆ ತಲುಪಿಸಿತು. ರಂಗಭೂಮಿ, ಪ್ರದರ್ಶನ ಕಲೆಗಳ ಅಧ್ಯಯನ ಅವರನ್ನು ವಿದೇಶಕ್ಕೆ ಕರೆಯಿತು. ಈಗ ಸನಾತನ ಆಧ್ಯಾತ್ಮ ಕಾಷಾಯ ತೊಡಿಸಿದೆ…

 

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00