ಕೇರಳದ ವಯನಾಡಿನ ಮಾನಂದವಾಡಿ ಪಂಜಾರಕೊಲ್ಲಿ ಎಂಬಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ನರಭಕ್ಷಕ ಹುಲಿ ನಿಜಕ್ಕೂ ಸತ್ತದ್ದು ಹೇಗೆ..?
ಈ ಸಾವಿನಲ್ಲಿ ಅಸಹಜತೆಯ ನಿಗೂಢತೆ ಉಂಟೆಂದು ಶಂಕಿಸಲಾಗಿದೆ. ಅರಣ್ಯ ಇಲಾಖೆ ಪ್ರಕರಣವನ್ನು ನಿಭಾಯಿಸಿದ ರೀತಿಯಲ್ಲಿ ನ್ಯೂನತೆ ಉಂಟಾಗಿದೆಯೆಂದು ಆರೋಪಿಸಿ ವೈಲ್ಡ್ ಲೈಫ್ ಕ್ರೈಂ ಕಂಟ್ರೋಲರ್ ಬ್ಯೂರೋಗೆ ದೂರು ದಾಖಲಾಗಿದೆ. ಎನಿಮಲ್ಸ್ ಏಂಡ್ ನೇಚರ್ ಎಥಿಕ್ಸ್ ಕಮ್ಯೂನಿಟಿ ಟ್ರಸ್ಟ್ ದೂರು ನೀಡಿದ್ದು, ಅರಣ್ಯ ಇಲಾಖೆಗೆ ಇದು ಸಂಕಷ್ಟ ತಂದೊಡ್ಡಿದೆ.
ಹುಲಿಯನ್ನು ನಿಭಾಯಿಸುವುದರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಕರ್ತವ್ಯ ನ್ಯೂನತೆ ಉಂಟಾಗಿದ್ದು, ಈ ಸಂಬಂಧ ಹೈಕೋರ್ಟಿನ ಮೊರೆ ಹೋಗುವುದಾಗಿ ದೂರುದಾತರು ತಿಳಿಸಿದ್ದಾರೆ.
ದೇಹದಲ್ಲಿ ಗಾಯಗಳೊಂದಿಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಹುಲಿಯು ಬೇರೊಂದು ಹುಲಿಯೊಂದಿಗೆ ಕಾದಾಟ ನಡೆಸಿ ಮೃತಪಟ್ಟಿರುವುದಾಗಿ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ದೂರುದಾತರು ಈ ವರದಿಯ ಕುರಿತು ಸಂಶಯ ಪ್ರಕಟಿಸಿದ್ದಾರೆ. ಜ.24ರಂದು ಕಾಫಿ ಎಸ್ಟೇಟಿನಲ್ಲಿ ಕೆಲಸಕ್ಕೆ ಹೋಗುವ ದಾರಿಮಧ್ಯೆ ಹುಲಿ ಆಕ್ರಮಣ ಉಂಟಾಗಿ ವನವಾಸಿ ಮಹಿಳೆ ರಾಧ ಮೃತಪಟ್ಟಿದ್ದರು. ಬಳಿಕ ನರಭಕ್ಷಕ ಹುಲಿಯನ್ನು ಕೊಲ್ಲಲು ಆದೇಶ ಹೊರಡಿಸಿ, ಅದರ ಪತ್ತೆಗೆ ಕಾರ್ಯಾಚರಣೆ ನಡೆದಿತ್ತು. ಈ ವೇಳೆ ಅರಣ್ಯ ಇಲಾಖೆ ಆರ್.ಆರ್.ಟಿ ನೌಕರ ಜಯಸೂರ್ಯ ಎಂಬವರ ಮೇಲೂ ಹುಲಿ ಆಕ್ರಮಣ ನಡೆದಿತ್ತು. ಈ ವೇಳೆ ಗುಂಡಿಕ್ಕಿರುವುದರಲ್ಲಿ ಹುಲಿಗೆ ಗಾಯಗೊಂಡಿತ್ತು. ಮರುದಿನ ಕಾಡಂಚಿನಲ್ಲಿ ಹುಲಿ ಸತ್ತು ಪತ್ತೆಯಾಗಿತ್ತು.