38
ಪೋಲೀಸರು ಆರೋಪಿಗಳಿಗೆ ಮತ್ತು ದೂರುದಾತರಿಗೆ ಇ – ಮೇಲ್, ವಾಟ್ಸಪ್ ಸೇರಿದಂತೆ ಯಾವುದೇ ಜಾಲತಾಣ ಮಾಧ್ಯಮಗಳ ಮೂಲಕ ನೋಟೀಸ್ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟು ತಿಳಿಸಿದೆ.
ಪೋಲೀಸರು ನೋಟೀಸು ನೀಡುವಾಗ ಪರ್ಯಾಯ ಮಾಧ್ಯಮವಾಗಿ ವಾಟ್ಸಪ್ ಅಥವಾ ವಿದ್ಯುನ್ಮಾನ ಮಾಧ್ಯಮಗಳನ್ನು ಇತರ ಎಲೆಕ್ಟ್ರಾನಿಕ್ ಮೋಡ್ ಗಳನ್ನು ಬಳಸಕೂಡದು ಎಂದು ಸುಪ್ರೀಂಕೋರ್ಟು ಸ್ಪಷ್ಟ ಪಡಿಸಿದೆ. ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ್ ಮತ್ತು ರಾಜೇಶ್ ಬಿಂದಾಲ್ ಅವರ ಪೀಠವು ಈ ಆದೇಶವಿತ್ತು ದೇಶದ ಎಲ್ಲಾ ಪೋಲೀಸ್ ಠಾಣೆಗೆ ತಲುಪುವಂತೆ ಆದೇಶ ಮಾಡಬೇಕೆಂದು ಇಲಾಖೆಗಳಿಗೆ ನಿರ್ದೇಶನವಿತ್ತಿದೆ.
ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಅವರ ಅರ್ಜಿಯನ್ನು ಪರಿಗಣಿಸಿ ಈ ತೀರ್ಪು ನೀಡಲಾಗಿದೆ.