ಕುಂಬಳೆ ಆರಿಕ್ಕಾಡಿ ವೀರ ಹನುಮಾನ್ ಕ್ಷೇತ್ರದ ಕೋಟೆಯಿಂದ ನಿಧಿ ಅಪಹರಿಸಲು ಪ್ರಯತ್ನ ನಡೆದಿದ್ದು ಈ ಸಂಬಂಧ ಪುರಾತತ್ವ ಇಲಾಖೆ ಕಾಳಜಿಯಿಂದ ಗಂಭೀರ ತನಿಖೆ ನಡೆಸಬೇಕೆಂದು ಹಿಂದೂ ಐಕ್ಯ ವೇದಿ ಕಾಸರಗೋಡು ಜಿಲ್ಲಾ ಘಟಕ ಕಾಸರಗೋಡು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದೆ.
ಆರಿಕ್ಕಾಡಿ ವೀರಹನುಮಾನ್ ಕ್ಷೇತ್ರವು ಪ್ರಾಚೀನ ಕೋಟೆಯ ಅವಲಂಬಿತ ದೇವಳವಾಗಿದ್ದು, ಇದರ ಪಕ್ಕದಲ್ಲೇ ಇರುವ ಕೋಟೆಯ ಪಾಳು
ಬಾವಿಯಿಂದ ನಿಧಿ ಅಪಹರಣ ಪ್ರಯತ್ನ ನಡೆದಿದೆ. ಪುರಾತತ್ವ ಇಲಾಖೆಯ ಆಧೀನದ ಕೋಟೆಗೆ ಸಂರಕ್ಷಣೆ ನೀಡುವುದರೊಂದಿಗೆ ನಿಧಿ ಅಪಹರಣ ಯತ್ನ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದೂರು ಸಲ್ಲಿಸಲಾಗಿದೆ.
ಮೊಗ್ರಾಲ್ ಪುತ್ತೂರು ಪಂ. ಉಪಾಧ್ಯಕ್ಷ ಹಾಗೂ ಮುಸ್ಲಿಂ ಲೀಗ್ ನಾಯಕನ ನೇತೃತ್ವದಲ್ಲಿ ಐವರ ತಂಡ ಈ ಕೃತ್ಯ ಎಸಗಿದ್ದು, ಇವರನ್ನು ಕುಂಬಳೆ ಪೋಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ನಿಗೂಢತೆ ಇದ್ದು, ಪುರಾತತ್ವ ಇಲಾಖೆ ತನಿಖೆಗೆ ಮುಂದಾಗಬೇಕೆಂದು ಹಿಂದೂ ಐಕ್ಯ ವೇದಿಕೆಯ ಜಿಲ್ಲಾ ಘಟಕನೀಡಿದ ದೂರಿನಲ್ಲಿ ಜಿಲ್ಲಾಧಿಕಾರಿಯವರನ್ನು ವಿನಂತಿಸಲಾಗಿದೆ.
ಹಿಂದೂ ಐಕ್ಯ ವೇದಿ ಜಿಲ್ಲಾಧ್ಯಕ್ಷ ಎಸ್ ಪಿ.ಷಾಜಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜನ್ ಮುಳಿಯಾರ್, ಜಿಲ್ಲಾ ಕಾರ್ಯಧ್ಯಕ್ಷ ಗೋಪಾಲಕೃಷ್ಣನ್ ತಚ್ಚಂಗಾಡ್, ಜಿಲ್ಲಾ ಉಪಾಧ್ಯಕ್ಷ ಉದಯಗಿರಿ ರಾಮ ಗುರುಸ್ವಾಮಿ ಎಂಬಿವರ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ, ಪ್ರಕರಣದ ಗಂಭೀರತೆ ಮತ್ತುವ ಆತಂಕ ಮಂಡಿಸಿ ದೂರು ನೀಡಿದರು.