- ಕುಂಬಳೆ ಆರಿಕ್ಕಾಡಿ ಕೋಟೆಯ ನಿಧಿ ಅಪಹರಣ ಯತ್ನ: ಕುಂಬಳೆ ಮುಸ್ಲಿಂಲೀಗಿನ ಶಾಮೀಲಾತಿಯ ತನಿಖೆ ನಡೆಯಲಿ -ಸಿಪಿಐಎಂ
ಕುಂಬಳೆ ಆರಿಕ್ಕಾಡಿ ಕೋಟೆಯಿಂದ ನಿಧಿ ಅಪಹರಿಸಲು ಯತ್ನಿಸಿದ ಪ್ರಕರಣದಲ್ಲಿ ಕುಂಬಳೆಯ ಮುಸ್ಲಿಂ ಲೀಗ್ ನಾಯಕರ ಸಹಾಯ ಹಸ್ತದ ಪಾಲ್ಗೊಳ್ಳುವಿಕೆಯ ಶಾಮೀಲಾತಿ ಕುರಿತು ತನಿಖೆ ನಡೆಯಬೇಕೆಂದು ಸಿಪಿಐಎಂ ಕುಂಬಳೆ ಲೋಕಲ್ ಕಮಿಟಿ ಕಾರ್ಯದರ್ಶಿ ಯೂಸುಪ್ ಕೆ ಬಿ. ಒತ್ತಾಯಿಸಿದ್ದಾರೆ.
ಕುಂಬಳೆ ಆರಿಕ್ಕಾಡಿ ಕೋಟೆಯ ಒಳಗಿನ ಬಾವಿಯಿಂದ ನಿಧಿ ಅಪಹರಿಸುವ ಯತ್ನದಲ್ಲಿ ತೊಡಗಿದ್ದಾಗ ಮೊಗ್ರಾಲ್ ಪುತ್ತೂರು ಗ್ರಾ.ಪಂ. ಉಪಾಧ್ಯಕ್ಷ, ಲೀಗ್ ನಾಯಕ ಮುಜೀಬ್ ಕಂಬಾರ್ ಸಹಿತ ಐವರನ್ನು ಸ್ಥಳೀಯರ ಸಹಕಾರದಿಂದ ಪೋಲೀಸರು ಸೋಮವಾರ ಸಂಜೆ ವಶಕ್ಕೆ ಪಡೆದಿದ್ದರು. ಈ ತಂಡಕ್ಕೆ ಕುಂಬಳೆಯ ಲೀಗ್ ನಾಯಕರು ಬೆಂಬಲ ದ ಸಹಾಯ ನೀಡಿರುವ ಗುಮಾನಿ ಇದ್ದು, ಈ ಕುರಿತು ಪೋಲೀಸ್ ತನಿಖೆ ನಡೆಯಬೇಕೆಂದು ಅವರು ಆಗ್ರಹಿಸಿದ್ದಾರೆ.
ಕುಂಬಳೆಯ ಮುಸ್ಲಿಂಲೀಗ್ ನಾಯಕರು ಭ್ರಷ್ಟಾಚಾರದಲ್ಲಿ ನಿರತರಾದ ಹಲವು ಪ್ರಕರಣಗಳು ಇತ್ತೀಚೆಗೆ ಬೆಳಕಿಗೆ ಬಂದಿವೆ. ಇದೀಗ ನಿಧಿ ಅಪಹರಣದಲ್ಲೂ, ಅದರ ಬೆನ್ನಲ್ಲೇ ನಡೆದ ಕೋಟೆಯೊಳಗಿನ ಅಗ್ನಿ ಅನಾಹುತದ ಕುರಿತೂ ತನಿಖೆ ನಡೆಯಬೇಕೆಂದು ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.