35
- ಹುಲಿ ಆಕ್ರಮಣದಲ್ಲಿ ಮೃತಪಟ್ಟ ಮಹಿಳೆ ಮನೆಗೆ ಸಂಸದೆ ಪ್ರಿಯಾಂಕ ಗಾಂಧಿ ಭೇಟಿ
- ಸಂತ್ರಸ್ಥ ಕುಟುಂಬದ ಮನೆ ಕಾಮಗಾರಿ ನೆರವೇರಿಸಿ ಕೊಡುವ ಭರವಸೆ
ವಯನಾಡಿನ ಪಂಜಾರಕೊಲ್ಲಿ ಕಾಫಿ ಎಸ್ಟೇಟಿನಲ್ಲಿ ಹುಲಿ ಆಕ್ರಮಿಸಿ ಕೊಂದು ಭಕ್ಷಿಸಿದ ಮಹಿಳೆ ರಾಧಾ ಅವರ ಮನೆಗೆ ಮಂಗಳವಾರ ಸಂಸದೆ ಪ್ರಿಯಾಂಕಾ ಗಾಂಧಿ ಆಗಮಿಸಿದರು. ಮಧ್ಯಾಹ್ನ 1.20ಕ್ಕೆ ಮೃತ ರಾಧಾ ಅವರ ಮನೆ ಸಂದರ್ಶಿಸಿದ ಸಂಸದೆ ಅರ್ಧ ತಾಸು ಅಲ್ಲಿ ವ್ಯಯಿಸಿದರು. ಕುಟುಂಬವನ್ನು ಸಂತೈಸಿದ ಅವರು ನಿರ್ಮಾಣ ಹಂತದಲ್ಲಿ ಸ್ಥಗಿತಗೊಂಡ ಮನೆ ಕಾಮಗಾರಿಯನ್ನು ಶೀಘ್ರವೇ ಸಂಪೂರ್ಣ ನಡೆಸಿಕೊಡುವ ಭರವಸೆ ಇತ್ತರು.
ಮೃತ ರಾಧ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ, ಮಕ್ಕಳ ಶಿಕ್ಷಣದ ಕುರಿತು ವಿಚಾರಿಸಿದ ಸಂಸದೆ ವಯನಾಡನ್ನು ಕಾಡುವ ವನ್ಯ ಮೃಗ ಹಾವಳಿಯ ಕುರಿತು ಮಾಹಿತಿ ಸಂಗ್ರಹಿಸಿಕೊಂಡರು. ನಾಯಕ ಕೆ.ಸಿ.ವೇಣುಗೋಪಾಲ್, ಕೆ.ಪಿ.ಸಿ.ಸಿ ಅಧ್ಯಕ್ಷ ಕೆ.ಸುಧಾಕರನ್ ಸಹಿತ ಹಲವು ನಾಯಕರು ಪ್ರಿಯಾಂಕ ಜತೆಗಿದ್ದರು. ಅರಣ್ಯ ಇಲಾಖೆಯ ದಿನಗೂಲಿ ನೌಕರನಾದ ಅಪ್ಪಚ್ಚನ್ ಎಂಬವರ ಪತ್ನಿ ರಾಧ ಅವರನ್ನು ಬೆಳಿಗ್ಗೆ ಕಾಫಿ ಎಸ್ಟೇಟಿಗೆ ಕೆಲಸಕ್ಕೆ ಹೋಗುವ ದಾರಿ ಮಧ್ಯೆ ಹುಲಿ ಎರಗಿ ಕೊಂದು ಭಕ್ಷಿಸಿದ ಘಟನೆ ರಾಷ್ಟ್ರೀಯ ಮಟ್ಟದಲ್ಲಿ ವರದಿಯಾಗಿತ್ತು