- ಲಂಚ ಪಡೆಯುತ್ತಿರುವಾಗಲೇ ಮಂಗಳೂರಿನಲ್ಲಿ ಎಸ್.ಐ.ಬಂಧನ
- ಠಾಣೆಯಿಂದ ಸ್ಕೂಟರ್ ಬಿಡುಗಡೆಗೆ ಲಂಚ ಕೇಳಿದ ಎಸ್.ಐ.ಲೋಕಾಯುಕ್ತ ಬಲೆಗೆ
ಮಂಗಳೂರೂ : ಪೋಲೀಸ್ ಠಾಣೆಯಿಂದ ಸ್ಕೂಟರ್ ಬಿಡುಗಡೆಗೊಳಿಸಿ ಕೊಂಡೊಯ್ಯಲು ಬಂದವರಿಂದ ಲಂಚ ಪಡೆದ ಆರೋಪದ ಮೇಲೆ ಮಂಗಳೂರು ಉತ್ತರದ ಸಂಚಾರ ಪೋಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಹಮ್ಮದ್ ಶೆರೀಫ್ ಹಾಗೂ ಸಿಬಂದಿ ಪ್ರವೀಣ್ ನಾಯ್ಕ್ ಎಂಬಿವರನ್ನು ಲೋಕಾಯುಕ್ತ ಪೋಲೀಸರು ಬಂಧಿಸಿದ್ದಾರೆ.
ಪೋಲೀಸ್ ವಶದಲ್ಲಿದ್ದ ಸ್ಕೂಟರನ್ನು ಬಿಡುಗಡೆಗೊಳಿಸಲು ನ್ಯಾಯಾಲಯದ ಆದೇಶವಾಗಿತ್ತು. ಈ ಸಂಬಂಧ ದೂರುದಾತರು ಠಾಣೆಗೆ ಬಂದಾಗ ಬಿಡುಗಡೆಗೆ 5ಸಾವಿರ ರೂ ಲಂಚ ನೀಡುವಂತೆ ಎಸ್.ಐ ಮಹಮ್ಮದ್ ಶೆರೀಫ್ ಬೇಡಿಕೆ ಇಟ್ಟಿದ್ದರು. ಮೊತ್ತವನ್ನು ಕಡಿಮೆ ಮಾಡುವಂತೆ ವಿನಂತಿಸಿದಾಗ ಠಾಣಾ ಬರಹಗಾರರಾದ ನಾಗರತ್ನ ಅವರನ್ನು ಕಾಣುವಂತೆ ಎಸ್.ಐ.ತಿಳಿಸಿದರು. ಅವರು ಅವಾಚ್ಚವಾಗಿ ಬೈದು, ಕಡೆಗೆ 3ಸಾವಿರ ನೀಡುವಂತೆ ತಿಳಿಸಿದರು. ಆದರೆ ಲಂಚ ನೀಡಲು ಮನಸ್ಸಿಲ್ಲದ ದೂರುದಾತರು ಲೋಕಾಯುಕ್ತ ಪೋಲೀಸರಿಗೆ ತಿಳಿಸಿದರು.
ಈ ಹಿನ್ನೆಲೆಯಲ್ಲಿ ದೂರುದಾತರು ಎಸ್.ಐ.ಗೆ 3ಸಾವಿರ ರೂ ಲಂಚ ನೀಡುತ್ತಿರುವಾಗಲೇ ಎಸ್.ಐಯನ್ನು ಬಂಧಿಸಲಾಗಿದೆ. ಸೋಮವಾರ ಈ ಘಟನೆ ನಡೆದಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಲೋಕಾಯುಕ್ತ ಪೋಲೀಸರು ತಿಳಿಸಿದ್ದಾರೆ.