- ಕುಂಬಳೆ ಆರಿಕ್ಕಾಡಿ ಕೋಟೆಯಿಂದ ನಿಧಿ ಅಪಹರಿಸಲೆತ್ನಿಸಿದ ಲೀಗ್ ನಾಯಕ, ಗ್ರಾ.ಪಂ. ಉಪಾಧ್ಯಕ್ಷನನ್ನು ಸ್ಥಾನ ಭ್ರಷ್ಠ ಗೊಳಿಸಲು ಒತ್ತಾಯಿಸಿ ಮೊಗ್ರಾಲ್ ಪುತ್ತೂರು ಪಂಚಾಯತಿಗೆ ಬಿಜೆಪಿ ಪ್ರತಿಭಟನಾ ಮಾರ್ಚ್
- ಘಟನೆ ನಡೆದ ಕುಂಬಳೆಯಲ್ಲಿ ಬಿಜೆಪಿ ನಾಯಕರಿಂದ ಕೋಟೆಯ ಸ್ಥಳ ಸಂದರ್ಶನ
ಕುಂಬಳೆ ಆರಿಕ್ಕಾಡಿ ವೀರಹನುಮಾನ್ ಕ್ಷೇತ್ರಾವರಣದ ಕೋಟೆಯ ಒಳಗಿನ ಪ್ರಾಚೀನ ಬಾವಿಯಿಂದ ನಿಧಿ ಅಪಹರಿಸಲೆತ್ನಿಸಿದ ಮುಸ್ಲಿಂ ಲೀಗ್ ನಾಯಕ, ಮೊಗ್ರಾಲ್ ಪುತ್ತೂರು ಗ್ರಾ ಪಂ. ಉಪಾಧ್ಯಕ್ಷನನ್ನು ತಕ್ಷಣವೇ ಪಂಚಾಯತಿನ ಜವಾಬ್ದಾರಿಯುತ ಹುದ್ದೆಯಿಂದ ಅಮಾನತುಗೈದು, ಸಮಗ್ರ ತನಿಖೆ ನಡೆಸಿ ಪ್ರಾಚೀನ ಪರಂಪರೆಯ ನಿಧಿ ಅಪಹರಣ ಯತ್ನದ ಕೇಸು ದಾಖಲಿಸಬೇಕೆಂದು ಒತ್ತಾಯಿಸಿ ಮೊಗ್ರಾಲ್ ಪುತ್ತೂರು ಬಿಜೆಪಿ ಪಂ.ಘಟಕದ ನೇತೃತ್ವದಲ್ಲಿ ಮಂಗಳವಾರ( ಜ.28) ಸಂಜೆ ಪ್ರತಿಭಟನಾ ಮಾರ್ಚ್ ನಡೆಯಿತು. ಬಳಿಕ ಪಂ. ಕಚೇರಿ ಮುಂಭಾಗದಲ್ಲಿ ಉಪಾಧ್ಯಕ್ಷನ ಪ್ರತಿಕೃತಿ ದಹಿಸಿ ಕೃತ್ಯವನ್ನು ಖಂಡಿಸಲಾಯಿತು.
ಮೊಗ್ರಾಲ್ ಪುತ್ತೂರು ಪಂಚಾಯತ್ ಬಿಜೆಪಿ ಘಟಕ ನೇತೃತ್ವದಲ್ಲಿ ಚೌಕಿ ಯಿಂದ ಆರಂಭಿಸಿದ ಪ್ರತಿಭಟನಾ ಮೆರವಣಿಗೆಯನ್ನು ಕಾಸರಗೋಡು ಬಿಜೆಪಿ ಮಂಡಲಾಧ್ಯಕ್ಷ ಗುರುಪ್ರಸಾದ್ಲಕಾಮತ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಕ್ಷೇತ್ರ ಪರಂಪರೆಯ ಕೋಟೆಯೊಳಗಿನ ಬಾವಿಯಲ್ಲಿ ನಿಧಿ ಅಪಹರಿಸಲು ಯತ್ನಿಸಿರುವುದು , ಅಪಹರಣದಷ್ಟೇ ಗೌರವದ ಪ್ರಕರಣ. ಈ ವಿಷಯದಲ್ಲಿ ಆರೋಪಿಗಳನ್ನು ಬಂಧಿಸದೇ ಬಿಟ್ಟದ್ದು ಕಾನೂನಿನ ನಿರ್ಲಕ್ಷ್ಯ , ಬಿಜೆಪಿ ಇದನ್ನು ಪ್ರತಿಭಟಿಸುತ್ತದೆ ಎಂದರು.
ಪಕ್ಷದ ಮೊಗ್ರಾಲ್ ಪುತ್ತೂರು ಪಂ. ಘಟಕಾಧ್ಯಕ್ಷ ಚಂದ್ರಶೇಖರ, ಯುವಮೋರ್ಚಾ ಪಂ.ನಾಯಕ ಧನಂಜಯ, ಸುಕುಮಾರ ಕುದ್ರೆಪ್ಪಾಡಿ, ಹಿರಿಯ ಬಿಜೆಪಿ ನಾಯಕ ಉಮೇಶ ಕಡಪ್ಪರಂ, ಮಹಿಳಾ ಮೋರ್ಛಾ ನಾಯಕಿಯರಾದ ಪ್ರಿಯ, ಪ್ರಮೀಳಾ ಮಜಲ್, ಮಲ್ಲಿಕಾ, ಸುಲೋಚನಾ, ಸಂಪತ್ ಕುಮಾರ್, ಗೀರೀಶ್ ಮೊದಲಾದವರು ನೇತೃತ್ವ ನೀಡಿದರು.
ಇತ್ತ ಘಟನೆ ನಡೆದ ಕುಂಬ್ಳೆಯಲ್ಲಿ ಬಿಜೆಪಿ ರಾಜ್ಯ ನಾಯಕರ ಸಹಿತ ಕುಂಬ್ಳೆ ಪಂ.ಘಟಕದ ನಾಯಕರು ಘಟನೆ ನಡೆದ ಸ್ಥಳಕ್ಕೆ ಸಂದರ್ಶನ ನೀಡಿದರು.
ಕುಂಬಳೆ ಠಾಣೆಯಿಂದ ನಿಧಿ ಅಪಹರಣ ಯತ್ನದ ಆರೋಪಿಗಳನ್ನು ಠಾಣಾ ಜಾಮೀನಿನಲ್ಲಿ ಬಿಡುಗಡೆಗೊಳಿಸಿಯೂ, ಅದನ್ನು ಪ್ರತಿಭಟಿಸದೇ, ಕಾನೂನು ಕ್ರಮದ ಮೊರೆ ಹೋಗದೇ ಕೇವಲ ಸಂದರ್ಶನ ನಡೆಸಿದ ನಾಯಕರ ನಡೆಯ ಬಗ್ಗೆ ಸಾರ್ವಜನಿಕರು ಅತೃಪ್ತಿ ಪ್ರಕಟಿಸಿದ್ದಾರೆ.