ಕಂಬಾರು ಕ್ಷೇತ್ರಕ್ಕೆ ಪೆರ್ಮುದೆಯಿಂದ ಸಾಗಾರೋಪಾದಿಯಾಗಿ ಸಾಗಿ ಬಂದ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ ಶೋಭಾಯಾತ್ರೆ

by Narayan Chambaltimar
  • ಕಂಬಾರು ಕ್ಷೇತ್ರಕ್ಕೆ ಪೆರ್ಮುದೆಯಿಂದ ಸಾಗಾರೋಪಾದಿಯಾಗಿ ಸಾಗಿ ಬಂದ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ ಶೋಭಾಯಾತ್ರೆ

ಪೆರ್ಮುದೆ : ಕಂಬಾರು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಅಷ್ಟಬಂಧ ಬ್ರಹ್ಮ ಕುಂಭಾಭಿಷೇಕ ಹಾಗೂ ಜಟಾಧಾರಿ ಪರಿವಾರ ಸಾನಿಧ್ಯಗಳ ಪುನಃ ಪ್ರತಿಷ್ಠೆ ಕಾರ್ಯಕ್ರಮಗಳ ಅಂಗವಾಗಿ ಪೆರ್ಮುದೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಿಂದ ಮಂಗಳವಾರ ಅಪರಾಹ್ನ ಬೃಹತ್ ಹಸಿರುವಾಣಿ ಹೊರೆ ಕಾಣಿಕೆ ಜರಗಿತು. ಕುಡಾಲು – ಬಾಡೂರು ಎರಡೂ ಗ್ರಾಮಸ್ಥರ ಹಾಗೂ ಸಂಘ ಸಂಸ್ಥೆ ಸಮಿತಿಗಳ ನೇತೃತ್ವದಲ್ಲಿ ಸಾಗರೋಪಾದಿಯಾಗಿ ಸಾಗಿ ಬಂದ ಮೆರವಣಿಗೆಯಲ್ಲಿ ಸಿಂಗಾರಿ ಮೇಳ, ಮುತ್ತು ಕೊಡೆ, ಸಮವಸ್ತ್ರಧಾರಿತ ಮಹಿಳೆಯರು ಹಾಗೂ ವಾಹನಗಳಲ್ಲಿ ಸುವಸ್ತು ಸಾಮಾಗ್ರಿಗಳು ಸಾಗಿ ಬಂದವು. ಪೆರ್ಮುದೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಪ್ರಾರ್ಥನ ಮಾಡಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಕ್ಷೇತ್ರ ಆಡಳಿತ ಸಮಿತಿ, ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು ಮೆರವಣಿಗೆಗೆ ನೇತೃತ್ವವಹಿಸಿದ್ದರು.

ಸೌಹರ್ದತೆಯೊಂದಿಗೆ ಜತೆಗೂಡಿದ ಪೆರ್ಮುದೆ ಚರ್ಚ್ ಹಸಿರುವಾಣಿ

ಪೆರ್ಮುದೆ ಭಜನಾ ಮಂದಿರದಿಂದ ಹೊರಟ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆಯು ಪೆರ್ಮುದೆ ಪೇಟೆ ದಾಟಿ ಸಂತ ಲಾರೆನ್ಸರ ಚರ್ಚ್ ನ‌ ಮುಂಭಾಗಕ್ಕೆ ಆಗಮಿಸಿದಾಗ ಚರ್ಚ್ ಧರ್ಮಗುರುಗಳು ಪದಾಧಿಕಾರಿಗಳ ಸಹಿತ ಉಪಸ್ಥಿತರಿದ್ದು ಇಗರ್ಜಿಯ ವತಿಯಿಂದ ಹೊರೆ ಕಾಣಿಕೆಯ ಸಾಮಾಗ್ರಿಗಳನ್ನು ಕಳುಹಿಸಿ ಸೌಹರ್ದತೆಯ ಸಂದೇಶಕ್ಕೆ ಸಾಕ್ಷಿಯಾದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00