131
ಕೇರಳ – ಕರ್ನಾಟಕ ಗಡಿಯ ಅಡೂರು ಸಮೀಪದ ಕರ್ನಾಟಕ ಅರಣ್ಯದ ಮಂಡೆಕೋಲು ಕನ್ಯಾನದಲ್ಲಿ ಕಾಡಾನೆಗಳೆರಡು ಮದಬಂದು ಕಾದಾಟ ನಡೆಸಿದ್ದು, ಈ ಪೈಕಿ ಒಂದು ಆನೆ ಮೃತಪಟ್ಟಿದೆ.
ಮೃತರ ಆನೆಯ ಶರೀರದಲ್ಲಿ ದಂತದಿಂದ ತಿವಿದ ಹಲವು ಗಾಯದ ಗುರುತುಗಳಿವೆ.

ನಿನ್ನೆ ಸಂಜೆ ಘಟನೆ ನಡೆದಿದ್ದು, ಆನೆಗಳ ಘರ್ಷಣೆಯ ಸದ್ದು ಸ್ಥಳೀಯ ಪ್ರದೇಶಕ್ಕೆ ಕೇಳಿದೆಯೆಂದು ನಾಗರಿಕರು ತಿಳಿಸಿದ್ದಾರೆ. ಮೃತ ಆನೆಗೆ 65ವರ್ಷ ಅಂದಾಜಿಸಲಾಗಿದೆ.
ಕರ್ನಾಟಕ ಅರಣ್ಯ ಇಲಾಖೆಯ ಫೋರೆನ್ಸಿಕ್ ತಜ್ಞರು ಸ್ಥಳಕ್ಕಾಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಇದೇ ವೇಳೆ ಕಾದಾಟ ನಡೆಸಿದ ಇನ್ನೊಂದಾನೆಗೂ ಗಾಯಗಳಾಗಿರುವ ಸಾಧ್ಯತೆ ಗಮನಿಸಿ, ಅದರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ.
ಕೇರಳ -ಕರ್ನಾಟಕ ಗಡಿಪ್ರದೇಶದ ಅಡೂರು ವ್ಯಾಪ್ತಿಯಲ್ಲಿ ಇತ್ತೀಚೆಗೆ ಕಾಡಾನೆ ಹಾವಳಿ ವ್ಯಾಪಕವಾಗಿದೆ.




