62
- ಪಿಐಎಂ ಜಿಲ್ಲಾ ಸಮ್ಮೇಳನದ ಪ್ರಚಾರಕ್ಕೆ ಸೀತಾಂಗೋಳಿಯ ಮುಖಾರಿಗದ್ದೆಯಲ್ಲಿ ನಾಳೆ ಕಬಡಿ ಟೂರ್ನ್ ಮೆಂಟ್
- ಪ್ರಸಿದ್ಧ ಕಬಡಿಪಟುಗಳ 32 ತಂಡಗಳು ಭಾಗಿ, ವಿಜೇತರಿಗೆ ಕಾ. ಅಜಿತ್ ಕುಮಾರ್ ಸ್ಮರಣೀಯ ಟ್ರೋಫಿ, ನಗದು ಬಹುಮಾನ
ಸೀತಾಂಗೋಳಿ : ಸಿಪಿಐಎಂ ಕಾಸರಗೋಡು ಜಿಲ್ಲಾ ಸಮ್ಮೇಳನ ಪ್ರಚಾರದಂಗವಾಗಿ ಸಿಐಟಿಯು ತಲೆಹೊರೆ ಕಾರ್ಮಿಕ ಯೂನಿಯನ್ ಸೀತಾಂಗೋಳಿ ಘಟಕ ಮತ್ತು ಸಿಐಟಿಯು ಆಟೋರಿಕ್ಷಾ ಚಾಲಕರ ಯೂನಿಯನ್ ಸಂಯುಕ್ತ ನೇತೃತ್ವದಲ್ಲಿ ಗಣರಾಜ್ಯೋತ್ಸವ ದಿನವಾದ ಫೆ.26ರಂದು ಮುಖಾರಿಗದ್ದೆ ಯುವಧಾರಾ ಕ್ರೀಡಾಂಗಣದಲ್ಲಿ ಕಬಡಿ ಟೂರ್ನ್ ಮೆಂಟ್ ನಡೆಯಲಿದೆ.
ಕಾ. ಅಜಿತ್ ಕುಮಾರ್ ಸ್ಮರಣಾರ್ಥ ಟ್ರೋಫಿ ಮತ್ತು ನಗದು ಪುರಸ್ಕಾರದ ಕಬಡಿ ಟೂರ್ನ್ ಮೆಂಟಿನಲ್ಲಿ ಕೇರಳದ ಪ್ರಸಿದ್ಧ ಕಬಡಿ ಪಟುಗಳು ಪಾಲ್ಗೊಳ್ಳುವ 32 ತಂಡಗಳು ಭಾಗವಹಿಸಲಿವೆ.
ಟೂರ್ನ್ ಮೆಂಟನ್ನು ಸಿಪಿಐಎಂ ಜಿಲ್ಲಾ ಸೆಕ್ರಟರಿಯೇಟ್ ಸಧಸ್ಯ, ಪುತ್ತಿಗೆ ಗ್ರಾ.ಪಂ. ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ ಉದ್ಘಾಟಿಸುವರು. ಸಿಪಿಐಎಂ, ಸಿಐಟಿಯು ನಾಯಕರು ಭಾಗವಹಿಸುವರು. ಟೂರ್ನ್ಮೆಂಟ್ ಯಶಸ್ಸಿಗೆ ಲೋಕಲ್ ಸೆಕ್ರಟರಿ ಅಬ್ದುಲ್ ಹಕೀಂ ಅಧ್ಯಕ್ಷರಾಗಿ, ಸಿಐಟಿಯು ತಲೆಹೊರೆ ಕಾರ್ಮಿಕರ ಯೂನಿಯನ್ ಏರಿಯ ಸೆಕ್ರಟರಿ ಬಿನೀಷ್ ಬಾಡೂರು ಸಂಚಾಲಕ ಮತ್ತು 51 ಸದಸ್ಯರ ತಂಡ ಕಾರ್ಯನಿರತವಾಗಿದೆ.