- ಮೀನುಗಾರರು ಸಮುದ್ರದಲ್ಲಿ ಹೃದಯಾಘಾತದಿಂದ ಮೃತಪಟ್ಟರೆ ಆಶ್ರಿತ ಕುಟುಂಬಕ್ಕೆ ವಿಮೆ, ಸೌಲಭ್ಯ ಒದಗಿಸಬೇಕೆಂದು ಸುರೇಶ್ ಕುಮಾರ್ ಕೀಯೂರು ಕೇಂದ್ರಕ್ಕೆ ಒತ್ತಾಯ
- ಅಖಿಲ ಭಾರತ ಕೋಲಿ ಸಭಾ ಕಾರ್ಯನಿರ್ವಾಹಕ ಸಭೆಯಲ್ಲಿ ಕೇರಳದ ಮೀನುಗಾರರ ಸಮಸ್ಯೆ ಮಂಡನೆ
ಕೇರಳ ಕರಾವಳಿಯ ಸಾಂಪ್ರದಾಯಿಕ ಮೀನುಗಾರರಾದ ದೀವರರಿಗೆ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವಾಗ ಹೃದಯಾಘಾತ ಸಂಭವಿಸಿ ಮೃತಪಟ್ಟರೆ ವಿಮಾ ಸೌಲಭ್ಯ ಸಹಿತ ಆಶ್ರಿತ ಕುಟುಂಬಕ್ಕೆ ಸೌಲಭ್ಯಗಳನ್ನೊದಗಿಸಬೇಕೆಂದೂ, ಮೀನುಗಾರಿಗೆ ಸೀಮೆ ಎಣ್ಣೆ ಸಬ್ಸಿಡಿ ಒದಗಿಸಬೇಕೆಂದೂ ಅಖಿಲ ಭಾರತ ಕೋಲಿ ಸಭಾ ರಾಷ್ಟ್ರೀಯ ಘಟಕದ ಕಾರ್ಯನಿರ್ವಾಹಕ ಮಂಡಳಿ ಸಭೆಯಲ್ಲಿ ಸುರೇಶ್ ಕುಮಾರ್ ಕೀಯೂರು ಅವರು ಭಾರತೀಯ ಕೋಲಿ ಸಮಾಜ್ ರಾಷ್ಟ್ರೀಯ,ಘಟಕದ ಅಧ್ಯಕ್ಷರಾದ ಕೇಂದ್ರ ಕ್ಯಾಬಿನೆಟ್ ಸಚಿವ ಕುನ್ವರ್ಜೀ ಭಾಯಿ ಬಾವಿಲ ಅವರಲ್ಲಿ ಖುದ್ದು ಮಾತನಾಡಿ, ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಕೇರಳದ ಮೀನುಗಾರರು ಅನುಭವಿಸುವ ಸಮಸ್ಯೆಗಳ ಕುರಿತು ಕಾರ್ಯನಿರ್ವಾಹಕ ಸಭೆಯಲ್ಲಿ ಮಾತಾಡಿದ ಅವರು ಬಳಿಕ ಈ ಕುರಿತು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದರು.
ಅಖಿಲ ಭಾರತ ಕೋಲಿ ಸಮಾಜ ದ ರಾಷ್ಟ್ರೀಯ ಘಟಕದ ಕಾರ್ಯನಿರ್ವಾಹಕ ಮಂಡಳಿ ಸಭೆ ಹೈದರಾಬಾದಿನಲ್ಲಿ ಜ.17ರಿಂದ 19ರ ತನಕ ನಡೆಯಿತು.
ಕೇಂದ್ರ ಸಚಿವ ಹಾಗೂ ಸಂಘಟನೆಯ ರಾಷ್ಟ್ರೀಯ ಘಟಕದ ಅಧ್ಯಕ್ಷ ಕುನ್ವರ್ಜೀ ಭಾಯಿ ಬಾವಿಲ ನೇತೃತ್ವದಲ್ಲಿ ಮಹಾಸಭೆ ಸೇರಲಾಯಿತು. ಸಂಘಟನೆಯ ಕೇಂದ್ರ ಘಟಕದ ಕಾರ್ಯನಿರ್ವಾಹಕ ಮಂಡಳಿ ಸದಸ್ಯರಾದ ಸುರೇಶ್ ಕುಮಾರ್ ಕೀಯೂರ್ ಕೇರಳದಿಂದ ವಿಶೇಷ ಆಹ್ವಾನಿತರಾಗಿದ್ದರು.