66
ಕರ್ನಾಟಕ ಕಾರವಾರದ ಯಲ್ಲಾಪುರ ತಾಲೂಕಿನ ಅರೆಬೈಲ್ ಎಂಬಂಲ್ಲಿಂದು ಬೆಳಿಗ್ಗೆ ತರಕಾರಿ, ಹಣ್ಣುಹಂಪಲು ತುಂಬಿದ್ದ,ಲಾರಿ ಮಗುಚಿ 10ಮಂದಿ ಸಾವನ್ನಪ್ಪಿದ್ದಾರೆ. ಇತರ 10ಮಂದಿ ಗಾಯಗೊಂಡಿದ್ದಾರೆ.
ಕುಮಟಾದಲ್ಲಿ ನಡೆಯುವ ವಾರದ ಸಂತೆಗೆ ಹಾವೇರಿ ಜಿಲ್ಲೆಯ ಸವಣೂರಿಂದ ಯಲ್ಲಾಪುರ ದಾರಿಯಾಗಿ ತರಕಾರಿ ಸಾಗಿಸುತ್ತಿದ್ದಾಗ ಇಂದು ನಸುಕಿನ ವೇಳೆ ದುರ್ಘಟನೆ ಸಂಭವಿಸಿದೆ.ಮೃತಪಟ್ಟವರೆಲ್ಲರೂ ಸಂತೆಯಲ್ಲಿ ತರಕಾರಿ ಮಾರಲೆಂದು ಬಂದವರೆಂದು ತಿಳಿದುಬಂದಿದೆ.
ಲಾರಿಯಲ್ಲಿ ತರಕಾರಿ ಹೇರಿಕೊಂಡು ಅದರ ಜತೆ 25ಪ್ರಯಾಣಿಕರಿದ್ದರು. ಅರೆಬೈಲ್ ಘಟ್ಟದ ಸಮೀಪ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಮಗುಚಿ ದುರಂತ ಸಂಭವಿಸಿದೆ.