- ಮಂಜೇಶ್ವರ ವಿಧಾನಸಭಾ ಕ್ಷೇತ್ರದ 21 ಗ್ರಾಮೀಣ ರಸ್ತೆಗಳ ಪುನರ್ ನಿರ್ಮಾಣಕ್ಕೆ 4.28ಕೋಟಿ ರೂ ಮಂಜೂರು
- ಟೆಂಡರ್ ನಡೆಸಿ ಕೂಡಲೇ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದ ಶಾಸಕ ಎ.ಕೆ ಎಂ ಅಶ್ರಫ್
ಮಂಜೇಶ್ವರ ವೀಧಾನಸಭಾ ಕ್ಷೇತ್ರದ 21 ಗ್ರಾಮೀಣ ರಸ್ತೆಗಳ ಅಭಿವೃದ್ದಿ ಮತ್ತು ಪುನರ್ ನಿರ್ಮಾಣಕ್ಕೆ 4.28ಕೋಟಿ ರೂ ಮಂಜೂರು ಮಾಡಿರುವುದಾಗಿ ಶಾಸಕ ಎ.ಕೆ.ಎಂ ಅಶ್ರಫ್ ತಿಳಿಸಿದ್ದಾರೆ.
ಕುಂಬಳೆಯ ಬಾಯಿಕಟ್ಟೆ – ಉಳುವಾರ್ ಜುಮಾ ಮಸೀದಿ ರಸ್ತೆಗೆ 20ಲಕ್ಷ, ಮಂಗಲ್ಪಾಡಿ ಪಂಚಾಯತಿನ ಅಡ್ಕ ಬಿಲಾಲ್ ಮಸೀದಿ ಮುಂಭಾಗದ ಚುಕ್ರಿಯಡ್ಕ ರಸ್ತೆಗೆ 20ಲಕ್ಷ, ಮಂಜೇಶ್ವರ ಪಂಚಾಯತಿನ ಬೀಚ್ ರಸ್ತೆ -ಕಣ್ವತೀರ್ಥ,ರಸ್ತೆಗೆ 15 ಲಕ್ಷ, ಪೈವಳಿಕೆಯ ಕಾಯರ್ಕಟ್ಟೆ – ನೂತಿಲ ರಸ್ತೆಗೆ 20ಲಕ್ಷರೂ, ಪುತ್ತಿಗೆ ಪಂಚಾಯತಿನ ಕೋಡಿಚ್ಚಾಲು – ಪುತ್ತಿಗೆ ಬಯಲು ರಸ್ತೆಗೆ 15ಲಕ್ಷ, ವರ್ಕಾಡಿ ಪಂಚಾಯತಿನ ಪಾವೂರು – ಕುಂಡಾಪು ಪಾಲತ್ತಡಿ ರಸ್ತೆಗೆ 20ಲಕ್ಷ ರೂ, ಎಣ್ಮಕಜೆ ಪಂಚಾಯತಿನ ಕುರೆಡ್ಕ -ಬೆದ್ರಂಪಳ್ಳ ಲಿಂಕ್ ರೋಡ್ ಗೆ 20ಲಕ್ಷ, ಮಿಂಜ ಪಂಚಾಯತಿನ ಬೋರ್ಕಳ – ಕೋಳ್ಯೂರು ಮಸ್ಜಿದ್ ರಸ್ತೆಗೆ 15 ಲಕ್ಷ,
ಕುಂಬಳೆಯ ಎನ್.ಎಚ್ ಬದ್ರಿಯಾನಗರ್ – ಪೆರುವಾಡು ರಸ್ತೆಗೆ 25ಲಕ್ಷರೂ, ಬಂದಿಯೋಡು ಮಾಣಿಹಿತ್ಲು -ರೈಲ್ವೇ ಟ್ರಾಕ್ ರಸ್ತೆಗೆ 20ಲಕ್ಷ, ಮಂಜೇಶ್ವರದ ಹೈಗೋಡಿ ರಸ್ತೆಗೆ 30ಲಕ್ಷ, ಪೈವಳಿಕೆಯ ಪಚ್ಚಂಬಳ -ಕನ್ನಾಟಿಕಾನ ರಸ್ತೆಗೆ 20ಲಕ್ಷ, ಪುತ್ತಿಗೆ ಕಂದಲ್ ರಸ್ತೆಗೆ 20ಲಕ್ಷ, ವರ್ಕಾಡಿಯ ಕಜಪದವು -ಮಲಾರ್ ರಸ್ತೆಗೆ 20ಲಕ್ಷ, ಎಣ್ಮಕಜೆಯ ಏಳ್ಕಾನ -ಉರ್ಮಿ ರಸ್ತೆಗೆ 20ಲಕ್ಷ, ಮೀಂಜದ ಬೆಂಡೆಜಾಲ್ -ಪದಮಾರ್ ರಸ್ತೆಗೆ 15ಲಕ್ಷ, ಫಕುಂಬಳೆಯ ಮುಳಿಯಡ್ಕ – ಬಲ್ಲಂಬಾಡಿ ರಸ್ತೆಗೆ 15ಲಕ್ಷ, ಮಂಗಲ್ಪಾಡಿಯ ಓಬರ್ಲಾ ಮಸೀದಿ ರಸ್ತೆಗೆ 30ಲಕ್ಷ, ಮಂಜೇಶ್ವರದ ಮೇಲಂಗಡಿ -ಕಜೆ ಕೊಪ್ಪಳ ರಸ್ತೆಗೆ 18ಲಕ್ಷ,
ಸೇರಿದಂತೆ ಒಟ್ಟುವ21ರಸ್ತೆಗೆ 4.28ಕೋಟಿ ರೂಗಳನ್ನು ಮಂಜೂರು ಮಾಡಲಾಯಿತು.
ಇದರ ಟೆಂಡರ್ ಕಾಮಗಾರಿಗಳು ಕೂಡಲೇ ನಡೆಯಲಿದೆ. ಕಾಮಗಾರಿಗಳನ್ನು ಕೂಡಲೇ ಆರಂಭಿಸುವಂತೆ ನಿರ್ದೇಶಿಸಿರುವುದಾಗಿ ಶಾಸಕರು ತಿಳಿಸಿದ್ದಾರೆ
.