136
ಕಾಸರಗೋಡಿನ ರೋಟರಿ ಕ್ಲಬ್ ತನ್ನ 2024-25ನೇ ಸಾಲಿನ ವೊಕೇಷನಲ್ ಎಕ್ಸಲೆನ್ಸ್ ಅವಾರ್ಡ್ ಗಳನ್ನು ಘೋಷಿಸಿದೆ. ಈ ಸಾಲಿನ ಪ್ರಶಸ್ತಿಗೆ ರಾಜ್ಯದ ಅತ್ಯುತ್ತಮ ವೈದ್ಯ ಪ್ರಸಸ್ತಿಗೆ ಭಾಜನರಾದ ಡಾ. ಜಮಾಲ್ ಅಹ್ಮದ್ , ನುರಿತ ಸಾಣೆ ಕೆಲಸಗಾರ ಲಕ್ಷ್ಮಣ ನಾಯಕ್ ಬೀರಿಕುಂಜೆ ಹಾಗೂ ಕಾಸರಗೋಡಿನ ಲಾವಣ್ಯ ಸ್ಟುಡಿಯೋ ಸ್ಥಾಪಕ, ಫೋಟೋಗ್ರಾಫರ್ ಮೈಂದಪ್ಪ ಕೆ ಎಂ. ಅವರನ್ನು ಆರಿಸಲಾಗಿದೆ.
ವೃತ್ತಿಪರ ಶ್ರೇಷ್ಠ ನಿರ್ವಹಣೆ ಮತ್ತು ಅತ್ಯುತ್ತಮ ಸಾಮಾಜಿಕ ಸೇವಾ ಕೈಂಕರ್ಯಗಳ ಹಿನ್ನೆಲೆಯಲ್ಲಿ ಇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.
ಜ.28ರಂದು ರಾತ್ರಿ 8ಕ್ಕೆ ಕಾಸರಗೋಡಿನ ರೋಟರಿ ಭವನದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಕಾಸರಗೋಡು ರೋಟರಿ ಅಧ್ಯಕ್ಷ ರೋಟೇರಿಯನ್ ಡಾ.ನಾರಾಯಣ ನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.