ಪುತ್ತಿಗೆ : ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಉನ್ನತೀಕರಿಸಿದ ಪುತ್ತಿಗೆ ಗ್ರಾಮ ಪಂಚಾಯತಿನ ಕುಟುಂಬ ಆರೋಗ್ಯ ಕೇಂದ್ರದಲ್ಲಿ ನೂತನ ಲ್ಯಾಬ್ ಅಸ್ಥಿತ್ವಕ್ಕೆ ಬಂದಿದೆ. ನೂತನ ಲ್ಯಾಬನ್ನು ಗ್ರಾ ಪಂ.ಅಧ್ಯಕ್ಷ ಡಿ. ಸುಬ್ಬಣ್ಣ ಆಳ್ವ ಉದ್ಘಾಟಿಸಿದರು.
ಆರೋಗ್ಯ ರಂಗದಲ್ಲಿ ಗ್ರಾಮಗಳಿಗೆ ಆಧುನಿಕ ಸೌಕರ್ಯಗಳ ಲ್ಯಾಬ್ ಒದಗಿಸಿದ ಕೇರಳ ಆರೋಗ್ಯ ಸಚಿವರ ಕಾಳಜಿಗೆ ಅವರು ಅಭಿನಂದನೆ ಸಲ್ಲಿಸಿದರು. ಗ್ರಾ.ಪಂ. ಉಪಾಧ್ಯಕ್ಷೆ ಜಯಂತಿ ಪೊನ್ನೆಂಗಳ ಅಧ್ಯಕ್ಷತೆ ವಹಿಸಿದರು.
ಸಮಾರಂಭದಲ್ಲಿ ಕೇರಳ ರಾಜ್ಯದ ಅತ್ಯುತ್ತಮ ವೈದ್ಯರೆಂಬ ಪ್ರಶಸ್ತಿ ಪಡೆದ ಕಾಸರಗೋಡಿನ ಮೆಡಿಕಲ್ ಆಫೀಸರ್ ಡಾ. ಸಯ್ಯದ್ ಹಮೀದ್ ಸುಹೈಬ್ ಅವರನ್ನು ಗೌರವಿಸಿ ಅಭಿನಂದಿಸಲಾಯಿತು. ಜಿ.ಪಂ. ಸದಸ್ಯ ನಾರಾಯಣ ನಾಯ್ಕ್, ಸ್ಥಾಯಿ ಸಮಿತಿ ಸದಸ್ಯ ಪಾಲಾಕ್ಷ ರೈ, ಪಿ. ಅಬ್ದುಲ್ ಮಜೀದ್, ಎಂ.ಎಚ್. ಅನಿತ, ಸದಸ್ಯರಾದ ಕೇಶವ ಎಸ್.ಆರ್, ಗಂಗಾಧರ ನಾಯಕ್, ಶಾಂತಿ ವೈ, ಆಸಿಫ್ ಆಲಿ, ಕಾವ್ಯ, ಬಿ,ಕೆ. ಜನಾರ್ಧನ ಪೂಜಾರಿ, ಕೆ.ಅನಿತ, ಜಯಂತಿ ಮುಖಾರಿಗದ್ದೆ, ಪ್ರೇಮ ಎಸ್.ರೈ ಆಯುರ್ವೇದ ಮೆಡಿಕಲ್ ಆಫೀಸರ್ ಸೀತಾರತ್ನ, ಪಂ.ಸೆಕ್ರೆಟರಿ ನಾರಾಯಣ ನಾಯಕ್, ಕೃಷಿ ಅಧಿಕಾರಿ ದಿನೇಶನ್, ವಿವಿಧ ರಾಜಕೀಯ ಪಕ್ಷ ನಾಯಕರು, ಆರೋಗ್ಯ ಇಲಾಖೆ ನೌಕರರು ಪಾಲ್ಗೊಂಡರು. ಮೆಡಿಕಲ್ ಆಫೀಸರ್ ಶುಹೈಬ್ ಕೆ ಸ್ವಾಗತಿಸಿದರು. ಹೆಲ್ತ್ ಇನ್ಸ್ಪೆಕ್ಟರ್,ತಿರುಮಲೇಶ್ವರ ನಾಯಕ್ ವಂದಿಸಿದರು.