ಮಧೂರು ಬ್ರಹ್ಮಕಲಶ ಪೂರ್ವಭಾವಿ ಸ್ವಯಂಸೇವಕ ಸಮಾವೇಶ.. ಸೀಮೆಯಿಂದ ಸ್ವಯಂಸ್ಪೂರ್ತಿಗೊಂಡು ಹರಿದು ಬಂತು ಕಾರ್ಯಕರ್ತರ ದಂಡು…!!

by Narayan Chambaltimar
  • ಮಧೂರು ಬ್ರಹ್ಮಕಲಶ ಪೂರ್ವಭಾವಿ ಸ್ವಯಂಸೇವಕ ಸಮಾವೇಶ..
  • ಸೀಮೆಯಿಂದ ಸ್ವಯಂಸ್ಪೂರ್ತಿಗೊಂಡು ಹರಿದು ಬಂತು ಕಾರ್ಯಕರ್ತರ ದಂಡು…!!

ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಮಾರ್ಚ್ 7ರಿಂದ ಎಪ್ರೀಲ್ 7ರ ತನಕ ನಡೆಯಲಿರುವ ಬ್ರಹ್ಮಕಲಶ ಸಹಿತ ಮೂಡಪ್ಪ ಸೇವೆ ಯ ಸಂದರ್ಭ ಸ್ವಯಂಸೇವಕರಾಗಿ ದುಡಿಯ ಬಯಸುವ ಸ್ವಯಂಸೇವಕರ ಸಮಾವೇಶ ಜ.19ರಂದು ಅಪರಾಹ್ನ ಮಧೂರಿನಲ್ಲಿ ನಡೆಯಿತು. ನಿರೀಕ್ಷೆಗೂ ಮೀರಿ ಭಕ್ತಜನ ಸಂದೋಹ ಸೇವಾ ಕೈಂಕರ್ಯಕ್ಕೆ ಉತ್ಸಾಹಿತರಾಗಿ ಮುಂದೆ ಬಂದಿರುವುದು ವಿಶೇಷತೆಯಾಗಿತ್ತು.

ಸ್ವಯಂ ಸೇವಕರಾಗ ಬಯಸುವವರು ಗೂಗಲ್ ನೋಂದಣಿ ಮಾಡಬಹುದಾಗಿದ್ದು, ಗೂಗಲ್ ನೋಂದಣಿ ಅರ್ಜಿಯನ್ನು ಸ್ವಯಂಸೇವಕ ಸಮಾವೇಶದಲ್ಲಿ ಎಡನೀರು ಶ್ರೀ ಸಚ್ಛಿದಾನಂದ ಭಾರತಿ ಶ್ರೀಪಾದರು ಬಿಡುಗಡೆ ಮಾಡಿದರು. ಮಧೂರು ಬ್ರಹ್ಮಕಲಶ ಎಂದರೆ ನಮ್ಮ ಸೀಮೆಯ ಅತೀ ದೊಡ್ಡ ಬ್ರಹ್ಮಕಲಶ. ಅದರಲ್ಲೊಂದು ಸೇವೆಯ ಅವಕಾಶ ಪಡೆಯುವುದೇ ಪುಣ್ಯಪ್ರದ. ಪ್ರತಿಯೊಬ್ಬರೂ ಸೇವಾ ಮನೋಭಾವದಿಂದ ತನ್ಮಯರಾಗಿ ದುಡಿದು ಇಡೀ ಸಮಾರಂಭದ ಯಶಸ್ಸಿಗೆ ಕೊಡುಗೆ ನೀಡಬೇಕೆಂದವರು ಆಹ್ವಾನ ಇತ್ತರು.

ಮಾಣಿಲ ಶ್ರೀಧಾಮದ ಮೌಹನದಾಸ ಸ್ವಾಮೀಜಿ ಆಶೀರ್ವಚನ ಇತ್ತು ಬ್ರಹ್ಮಕಲಶದ ಸ್ವಯಂಸೇವಕರಾಗುವುದೆಃದರೆ ಅದು ಸೌಭಾಗ್ಯವಶಾತ್ ಒಲಿಯುವ ದೇವಕಾರ್ಯ. ಇದರಿಂದ ಯಾರೂ ಹಿಂದೆ ಸರಿಯಬಾರದು.ಚಿಕ್ಕ ಪುಟ್ಟ ವೈಮನಸ್ಸುಗಳೇನಿದ್ದರೂ ಮರೆತು, ದೇವರ ಸೇವೆ ಎಂಬ ಭಾವದಿಂದ ಕರ್ತವ್ಯ ನಿರತರಾದರೆ ಫಲ ಭಗವಂತ ನೀಡುತ್ತಾನೆಂದವರು ತಿಳಿಸಿದರು. ಬ್ರಹ್ಮಕಲಶ ಸಮಿತಿ ಗೌರವಾಧ್ಯಕ್ಷ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮಾತನಾಡಿ
ದೇವ ಹಿತ, ರಾಷ್ಟ್ರ ಹಿತದೃಷ್ಟಿ ಧೋರಣೆಯಿಂದ ಪ್ರತಿಯೊಬ್ಬರೂ ಸ್ವಯಂ ಸೇವಾ ನಿರತರಾಗಬೇಕು. ಸ್ವಯಂ ಸ್ಪೂರ್ತಿಯಿಂದ ನಿರೀಕ್ಷೇಗೂ ಮೀರಿ ಜನರು ಆಗಮಿಸಿರುವುದೇ ಯಶದ ಸಂಕೇತ. ಈ ಮೂಲಕ ಕ್ಷೇತ್ರವಷ್ಟೇ ಅಲ್ಲ, ನಮ್ವ
ಮ ಸಮಾಜವೂ ಉನ್ನತಿ ಕಾಣಬೇಕೆಂದವರು ನುಡಿದರು.
ಮುಖ್ಯ ಅತಿಥಿಯಾಗಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಪಾಲ್ಗೊಂಡು ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ಬಿಎಸ್.ರಾವ್ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಕ್ಷೇತ್ರ ಪವಿತ್ರಪಾಣಿ ರತನ್ ಕುಮಾರ್ ಕಾಮಡ, ಮಧೂರು ಗ್ರಾ.ಪಂ. ಅಧ್ಯಕ್ಷ ಕೆ.ಗೋಪಾಲಕೃಷ್ಣ, ಉದ್ಯಮಿ ಮಃಜುನಾಥ ಕಾಮತ್, ರವೀಶ ತಂತ್ರಿ ಕುಂಟಾರು ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.
ಬಾಲಗೋಕುಲ ಮಧೂರು ಘಟಕದ ಮಕ್ಕಳು ಪ್ರಾರ್ಥನೆ ಹಾಡಿದರು. ಸುನಿಲ್ ಕುಮಾರ್ ಕುದ್ರೆಪಾಡಿ ಸ್ವಾಗತಿಸಿ, ದಿನೇಶ್ ಬಂಬ್ರಾಣ ವಂದಿಸಿದರು. ಗಣೇಶ್ ಪಾರೆಕಟ್ಟೆ ನಿರೂಪಿಸಿದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00