126
ಮುಂಬೈ: ಬಾಲಿವುಡ್ ನಟ ಸೈಫ್ ಆಲಿಖಾನ್ ರನ್ನು ಚಾಕುವಿನಿಂದ ಇರಿದು ಗಂಭೀರ ಗಾಯಗೊಳಿಸಿದ ನೈಜ ಆರೋಪಿ ಮೂಲತಃ ಬಾಂಗ್ಲಾ ಪ್ರಜೆಯಾಗಿದ್ದು, ಅಕ್ರಮವಾಗಿ ಭಾರತಕ್ಕೆ ಬಂದು ಹೆಸರು ಪಲ್ಲಟ ಮಾಡಿ ನೆಲೆಸಿದ್ದನೆಂಬ ಮಾಹಿತಿ ಪೋಲೀಸರು ಬಹಿರಂಗ ಪಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಡಿಸಿಪಿ ದೀಕ್ಷಿತ್ ಗೆಡಂ ಆರೋಪಿಯನ್ನು ಮುಂಬೈ ನಗರಠಾಣೆಯಲ್ಲಿ ವಶಕ್ಕೆ ಪಡೆಯಲಾಗಿದ್ದು, ಆತ ತಪ್ಪೊಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ. ಆರೋಪಿಯು ಬಾಂಗ್ಲಾ ಮೂಲದ ಮುಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್ ಎಂಬಿತನಾಗಿದ್ದು, ಈತ ಬಿಜೋಯ್ ದಾಸ್ ಎಂಬ ಹಿಂದೂ ಹೆಸರಿನಲ್ಲಿ ಗುರುತಿಸಿಕೊಂಡಿದ್ದನು.
ಬುಧವಾರ ರಾತ್ರಿ ನಟ ಸೈಫ್ ಆಲಿಖಾನ್ ನಿವಾಸಕ್ಕೆ ಆರೋಪಿ ನುಗ್ಗಿ ಆಕ್ರಮಣ ನಡೆಸಿದ್ದನು. ಘಟನೆಯಲ್ಲಿ ಸೈಫ್ ಅವರ ಕೊರಳು, ಬೆನ್ನಿಗೆ ಗಂಭೀರ ಗಾಯವಾಗಿವೆ. ಕಳ್ಳತನ ನಡೆಸುವ ಉದ್ದೇಶದಿಂದ ಮನೆಗೆ ನುಗ್ಗಿ ಆಕ್ರಮಿಹಲಾಗಿದೆ ಎಂದು ಆರೋಪಿ ತಪ್ಫೊಪ್ಪಿರುವುದಾಗಿ ಪೋಲೀಸರು ತಿಳಿಸಿದ್ದಾರೆ.