627
ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ದೇವಾಲಯದ ವಾರ್ಷಿಕ ಜಾತ್ರೆ ನಿಮಿತ್ತ ಸಿಡಿಸಲಾದ ಕುಂಬ್ಳೆ ಬೆಡಿ ಆಯೋಜಕರ ವಿರುದ್ದ ಕುಂಬಳೆ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ಬೆಡಿ ಉತ್ಸವ ಆಯೋಜಕರಾದ ಸದಾನಂದ ಕಾಮತ್, ಮಧುಸೂಧನ ಕಾಮತ್, ಲಕ್ಮ್ಮಣ ಪ್ರಭು, ಸುಧಾಕರ ಕಾಮತ್ ಎಂಬಿವರ ವಿರುದ್ದ ಕೇಸು ದಾಖಲಿಸಲಾಗಿದೆ.
ಅಪಾಯವನ್ನುಂಟು ಮಾಡುವ ಥರದಲ್ಲಿ ಅಸುರಕ್ಷಿತ ವಿಧಾನದಲ್ಲಿ ಸಿಡಿಮದ್ದು ಸಿಡಿಸಲಾಯಿತೆಂದು ಮೊಕದ್ದಮೆ ದಾಖಲಾಗಿದಗ. ಈ ಹಿಂದಿನ ವರ್ಷವೂ ಕುಂಬ್ಳೆ ಬೆಡಿ ಆಯೋಜಕರ ವಿರುದ್ದ,ಕೇಸು ದಾಖಲಾಗಿತ್ತು.