130
ಬಂದೂಕು ತೋರಿಸಿ ಬೆದರಿಸಿ ಕೋಟೆಕಾರು ಬೇಂಕಿನಿಂದ 10ಕೋಟಿ ರೂ ಸಹಿತ ಚಿನ್ನ ದರೋಡೆ
ಮಂಗಳೂರಿನ ಕೆ.ಸಿ.ರೋಡು ಬಳಿಯ ಕೋಟೆಕಾರು ಸೇವಾ ಸಹಕಾರಿ ಬೇಂಕಿಗೆ ನುಗ್ಗಿದ ದರೋಡೆಕೋರರು ಸಿಬಂದಿಯನ್ನು ಬಂದೂಕು , ಕೋವಿ ತೋರಿಸಿ ಬೆದರಿಸಿ 10ಕೋಟಿ ರೂ ಹಣ , ಚಿನ್ನಾಭರಣ ದೋಚಿದ ಘಟನೆ ನಡೆದಿದೆ..
ಜ.17 ಮಧ್ಯಾಹ್ನ ಬೇಂಕಿಗೆ ನುಗ್ಗಿದ ಐವರು ಮುಸುಕುಧಾರಿಗಳು ದರೋಡೆ ನಡೆಸಿ ಪರಾರಿಯಾಗಿದ್ದಾರೆ.
ಮಂಗಳೂರಿಗೆ ಇಂದು ಸಿಎಂ ಸಿದ್ಧರಾಮಯ್ಯ ನವರು ಆಗಮಿಸುವ ಹಿನ್ನೆಲೆಯಲ್ಲಿ ಭದ್ರತೆಗಾಗಿ ಎಲ್ಲ ಪೋಲೀಸ್ ಗಮನ ಅಲ್ಲಿಗಿತ್ತು. ಈ ಸಂದರಭ ಬಳಸಿಕೊಂಡು ಬೃಹತ್ ಬೇಂಕ್ ದರೋಡೆ ನಡೆದಿದೆ.
ಫಿಯೆಟ್ ಕಾರಿನಲ್ಲಿ ಮುಸುಕುಧಾರಿಗಳಾಗಿ ಬಂದ ಐವರು ಬೇಂಕಿಗೆ ನುಗ್ಗಿ ಗ್ರಾಹಕರನ್ನು ಮತ್ತು ಸಿಬಂದಿಗಳನ್ನು ಬೆದರಿಸಿ ಕೃತ್ಯವೆಸಗಿದೆ.ಘಟನೆಯ ಸಂದರ್ಭ ದರೋಡೆಕೋರರ ಪೈಕಿ ಓರ್ವ ಕಾರಿನ ಬಳಿ ನಿಂತು ಸುತ್ತಲೂ ವೀಕ್ಷಿಸುತ್ತಿದ್ದನು. ದರೋಡೆಯ ಬಳಿಕ ತಂಡ ಮಂಗಳೂರು ಕಡೆಗೆ ಹೆದ್ದಾರಿಯಲ್ಲಿ ಪರಾರಿಯಾಗಿದೆ.