140
- ಅನಿಲ್ ಕುಂಬ್ಳೆಯ ನೆಲದಿಂದ ಉದಿಸಿದ ಕ್ರಿಕೆಟಿನ ಬಾಲಪ್ರತಿಭೆ ಕೃಷ್ಣವೇಣಿಗೆ ರಾಗಮಾಲಿಕಾ ವತಿಯಿಂದ ಗೌರವಾಭಿನಂದನೆ
ಕೇರಳ ಕ್ರಿಕೆಟ್ ಅಸೋಸಿಯೇಷನ್ ನ ಅಂಡರ್ -15 ವನಿತಾ ಕ್ರಿಕೆಟ್ ಬೋರ್ಡಿಗೆ ಆಯ್ಕೆಯಾದ ಬೆದ್ರಡ್ಕ ಮಜಲು ನಿವಾಸಿ ಕು. ಕೃಷ್ಣವೇಣಿಯನ್ನು ಕಣಿಪುರ ಗೋಪಾಲಕೃಷ್ಣ ದೇವಾಲಯದ ವಾರ್ಷಿಕ ಜಾತ್ರಾ ಸಂದರ್ಭ ರಾಗಮಾಲಿಕಾ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು. ಜಾತ್ರಾ ಸಂದರ್ಭ ರಾಗಮಾಲಿಕಾ ನೆಲ್ಲಿಕಟ್ಟೆ ವತಿಯಿಂದ ಭಕ್ತಿರಸ ಮಂಜರಿ ಜರುಗಿದ್ದು, ಈ ವೇದಿಕೆಯಲ್ಲಿ ಕ್ರಿಕೆಟ್ ಪ್ರತಿಭೆಯನ್ನು ಗೌರವಿಸಲಾಯಿತು. ಜಗತ್ತಿನ ಗಮನಸೆಳೆದ, ವಿಶ್ವಶ್ರೇಷ್ಠ ಸ್ಪಿನ್ನರ್ ಅನಿಲ್ ಕುಂಬ್ಳೆಯ ನೆಲದಿಂದ ಮತ್ತೋರ್ವ ಕ್ರಿಕೆಟ್ ಪ್ರತಿಭೆ ಉದಿಸುವುದನ್ನು ವೇದಿಕೆಯಲ್ಲಿ ಕೊಂಡಾಡಿ ಶುಭ ಹಾರೈಸಲಾಯಿತು.
ಇತ್ತೀಚಿಗೆ ಬಿಸಿಸಿಐ ವತಿಯಿಂದ ಕರ್ನಾಟಕದ ಶಿವಮೊಗ್ಗದಲ್ಲಿ ಏರ್ಪಡಿಸಿದ ಕ್ರಿಕೆಟ್ ಟೂರ್ನಿಯಲ್ಲಿ ಕೃಷ್ಣವೇಣಿ ಕೇರಳ ಪರ ಆಡಿದ್ದಳು.
ಸಾಹಿತಿ ರಾಧಾಕೃಷ್ಣ ಉಳಿಯತಡ್ಕ, ಕಮಲಾಕ್ಷ ಪುತ್ತೂರು, ಅಮ್ಮು ಮಾಸ್ತರ್ ಅಮ್ಮಂಗೋಡು, ರಾಗಮಾಲಿಕಾ ಬಳಗದ ಗಾಯಕರು ಉಪಸ್ಥಿತರಿದ್ದರು.