228
- 777 ಚಾರ್ಲಿ ನಿರ್ದೇಶಕ ಗಡಿನಾಡ ಕಿರಣ್ ರಾಜ್ ಗೆ ಕೂಡಿ ಬಂತು ಕಂಕಣಭಾಗ್ಯ..
- ಭರತನಾಟ್ಯ ಪ್ರವೀಣೆ ವಧು ಯಾರು ಗೊತ್ತೇ?
ತನ್ನ ಚೊಚ್ಚಲ ಸಿನಿಮಾ 777 ಚಾರ್ಲೀ ನಿರ್ದೇಶನದ ಮೂಲಕ ಅತ್ಯುತ್ತಮ ನಿರ್ದೇಶನಕ್ಕಿರುವ ರಾಷ್ಟ್ರೀಯ ಪ್ರಶಸ್ತಿ ಗೆದ್ದು, ದೇಶ ವ್ಯಾಪಕ ಗಮನಸೆಳೆದ ಗಡಿನಾಡು ಕಾಸರಗೋಡಿನ ತರುಣ ನಿರ್ದೇಶಕ ಕಿರಣ್ ರಾಜ್ ಅವರಿಗೆ ಮಾಂಗಲ್ಯ ಯೋಗ ಕೂಡಿ ಬಂದಿದೆ.
ನಿನ್ನೆ ಮಂಗಳೂರಿನಲ್ಲಿ ನಡೆದ ಅವರ ಕುಟುಂಬದ ಹಿರಿಯರ ಸಮ್ಮುಖ ಕಿರಣ್ ರಾಜ್ ತನ್ನ ಬಾಳ ಸಂಗಾತಿ ಬೆರಳಿಗೆ ಉಂಗುರ ತೊಡಿಸಿ ನಿಶ್ಚಿತಾರ್ಥ ನಡೆದಿದೆ.
ಕಿರಣ್ ರಾಜ್ ವರಿಸುವ ವಧು ಭರತನಾಟ್ಯ ಕಲಾವಿದೆಯಾಗಿದ್ದಾರೆ. ಅನಯಾ ವಸುಧಾ ಎಂಬ ಅವರು ಲಂಡನ್ನಲ್ಲಿ ಹುಟ್ಟಿ ಬೆಳೆದವರು.
ಲಂಡನ್ ನಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯ ಶಾಲೆ ನಡೆಸುವ ಅವರು ಕಿರಣ್ ರಾಜ್ ನನ್ನು ಲಂಡನ್ ನ ಸಿನಿಮ ಸಂಬಂಧೀ ಕಾರ್ಯಕ್ರಮವೊಂದರಲ್ಲಿ ಮೊದಲ ಭೇಟಿಯಾಗಿದ್ದರು.
ಮೂಲತಃ ಕಾಸರಗೋಡಿನ ಹಿನ್ನೆಲೆಯುಳ್ಳ ಕುಟುಂಬ ಅವರದ್ದು.
ಪ್ರಸ್ತುತ ಕಿರಣ್ ರಾಜ್ ತನ್ನ ಎರಡನೇ ಚಿತ್ರದ ಸಿದ್ಧತೆಯಲ್ಲಿರುವಾಗ ಕಂಕಣಯೋಗ ಕೂಡಿ ಬಂದಿದ್ದು, ಚಿತ್ರಗಳು ವೈರಲ್ ಆಗುತ್ತಿವೆ.