- ವಿವಿಧ ಕಾರ್ಯಕ್ರಮ ವೈಶಿಷ್ಟ್ಯಗಳೊಂದಿಗೆ ಆನೆಗುಂದಿ ಮಠದಲ್ಲಿ ಕೋಟಿ ಕುಂಕುಮಾರ್ಚನೆ ಸಂಪನ್ನ
- 7ದಿನಗಳ ಆರಾಧನೆ, ಆಚರಣಾ ವೈಶಿಷ್ಟ್ಯದೊಂದಿಗ ಭಾರೀ ಜನಸಮಕ್ಷ ನಡೆದ ಕುಂಕುಮಾರ್ಚನೆಯ ಸಮರ್ಪಣೆ
- ಸ್ತೋತ್ರ ಕೃತಿ , ಸೇವಾ ರಶೀದಿ ಆಪ್ ಬಿಡುಗಡೆ, ಗೌರವಾಭಿನಂದನೆ, ಕಲಾಕೃತಿ ಅರ್ಪಣೆ, ಸನ್ಮಾನ ಸಹಿತ ಧಾರ್ಮಿಕ ಸಭೆಯೊಂದಿಗೆ ಸಮಾಪನ
ಕಣಿಪುರ ಸುದ್ದಿಜಾಲ, (ಪಡುಕುತ್ಯಾರು ಜ.12) :
ಪರಿಶುದ್ಧವಾಗಿದ್ದ ಗಂಗೆ ಮಲಿನಗೊಂಡು ಕೇಂದ್ರ’ ಸರ್ಕಾರವೇ ಶುದ್ದೀಕರಣ ಮಾಡಬೇಕಾದ ಪ್ರಮೇಯ ಬಂದೊದಗಿದಂತೆಯೇ ಹಿಂದೂ ಸಮಾಜವೂ ಕೆಲವೊಂದು ಆತಂಕಗಳನ್ನು ಎದುರಿಸುತ್ತಿದ್ದು ಮತ್ತೆ ಅದನ್ನು ಶುದ್ದೀಕರಿಸುವ ಹಂತಕ್ಕೆ ನಾವು ತಲುಪಿದ್ದೇವೆ. ಅಂತಹ ಒಂದು ಪ್ರಯತ್ನವನ್ನು ಕೋಟಿ ಕುಂಕುಮಾರ್ಚನೆ ಮೂಲಕ ನಾವು ಮಾಡಿದ್ದೇವೆ ಎಂದು ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರರಾದ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು.
ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದಲ್ಲಿ ಶ್ರೀ ಸರಸ್ವತೀ ಮಾತೃ ಮಂಡಳಿಯ ನೇತೃತ್ವದಲ್ಲಿ ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ ಮತ್ತು ಉಪಸಮಿತಿಗಳು ಹಾಗೂ ವಿವಿಧ ಗ್ರಾಮ ಸಮಿತಿಗಳ ನೇತೃತ್ವದಲ್ಲಿ ಏಳು ದಿನಗಳ ಜರಗಿದ ಕೇಪಳ ಪುಷ್ಪದೊಂದಿಗೆ ಕೋಟಿ ಕುಂಕುಮಾರ್ಚನೆ ಸಮಾರೋಪ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸಮಾಜದ ಜನರಿಗಾಗಿ ಮಿಡಿಯುವ, ಸ್ಪಂದಿಸುವ ಮತ್ತು ಉತ್ತಮ ಸಂದೇಶ ನೀಡುವುದರ ಜತೆಗೆ ರಾಷ್ಟ್ರಭಕ್ತರನ್ನು ಸೃಷ್ಡಿಸುವ ಕಾರ್ಯ ಮಠ ಮಂದಿರಗಳಿಂದ ನಡೆಯುತ್ತಿದೆ ಎಂದು ಶ್ಲಾಘಿಸಿದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಶುಭಾಶಂಸನೆಗೈದರು. ವಿದ್ವಾನ್ ಹಿರಣ್ಯ ವೆಂಕಟೇಶ ಭಟ್ ಬಾಯಾರು ಧಾರ್ಮಿಕ ಉಪನ್ಯಾಸ ನೀಡಿದರು. ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಸರಸ್ವತಿ ಮಾತೃ ಮಂಡಳಿಯ ವತಿಯಿಂದ ಶ್ರೀ ಗುರುಭಕ್ತಿ ಕುಸುಮಾಂಜಲಿ ಸ್ತೋತ್ರ ಪುಸ್ತಕ, ಯತೀಶ್ ಬಿ. ಆಚಾರ್ಯ ಕೊಯಂಬುತ್ತೂರು ತಯಾರಿಸಿದ ಮಹಾಸಂಸ್ಥಾನದ ಸೇವಾ ರಶೀದಿಗಳ ಆಪ್ ಬಿಡುಗಡೆ ಗೊಳಿಸಲಾಯಿತು. ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ವಿಶ್ವಕರ್ಮ ಸಹಕಾರ ಬ್ಯಾಂಕ್ ಮಂಗಳೂರು ಅಧ್ಯಕ್ಷ ಎಸ್ ಆರ್ ಹರೀಶ್ ಆಚಾರ್ಯ ಜಳಕದಕಟ್ಟೆ ಅವರಿಗೆ ಗೌರವ ಅಭಿನಂದನೆ ಸಲ್ಲಿಸಲಾಯಿತು. ಕಲಾವಿದರಾದ ಕಾರ್ತಿಕ್ ಆಚಾರ್ಯ ಮತ್ತು ಭೂಮಿಕಾ ಅವರು ರಚಿಸಿದ ಕಲಾಕೃತಿಯನ್ನು ಸ್ವಾಮೀಜಿಯವರಿಗೆ ಸಮರ್ಪಿಸಿದರು.
ಕೋಟಿ ಕುಂಕುಮಾರ್ಚನೆಯನ್ನು ಯಶಸ್ವಿಗೊಳಿಸಿದ ಪೂರ್ವ ಚಾತ್ರ ಸಂಘದ ಮನೋಜ್ ಶರ್ಮ, ಬಿ ಸೂರ್ಯಕುಮಾರ್ ಹಳೆಯಂಗಡಿ ಅವರನ್ನು
ಸನ್ಮಾನಿಸಲಾಯಿತು.
ಶ್ರೀ ಸರಸ್ವತೀ ಮಾತೃ ಮಂಡಳಿ ಗೌರವಾಧ್ಯಕ್ಷೆ ಮಾತೋಶ್ರೀ ಸರಳಮ್ಮ ಗುರುನಾಥ ಸ್ವಾಮಿ ಶಿಕಾರಿಪುರ, ಆನೆಗುಂದಿ ಮಹಾಸಂಸ್ಥಾನದ ಆಸ್ಥಾನ ವಿದ್ವಾಂಸ ಶಂಕರಾಚಾರ್ಯ ಕಡ್ಲಾಸ್ಕರ್ ಪಂಡಿತ್ ಹುಬ್ಬಳ್ಳಿ, ಶ್ರೀಧರ ಪುರೋಹಿತ್ ಕಟಪಾಡಿ, ಲಕ್ಷ್ಮೀಕಾಂತ ಶರ್ಮ ಬಾರ್ಕೂರು,ಪಿ. ವಿ. ಗಂಗಾಧರ ಆಚಾರ್ಯ ಉಡುಪಿ, ಮುನಿಯಾಲು ಸಂಜೀವಿನೀ ಗೋಧಾಮದ ಸವಿತಾ ಆರ್ ಆಚಾರ್ಯ, ಕೋಟಿ ಕುಂಕುಮಾರ್ಚನೆ ಗ್ರಾಮ ಸಮಿತಿ ಪ್ರಮುಖರಾದ ಶಿಲ್ಪಾ ಜಿ. ಸುವರ್ಣ, ಗೀತಾಂಜಲಿ ಸುವರ್ಣ, ಲತಾ ಎಸ್.ಆಚಾರ್ಯ, ಕುತ್ಯಾರು ಗ್ರಾಪಂ ಅಧ್ಯಕ್ಷ ಜನಾರ್ದನ ಆಚಾರ್ಯ, ಮಂಗಳೂರು ಎಸ್‌ಕೆಜಿಐ ಕೋ. ಆಪ್ ಸೊಸೈಟಿ ಅಧ್ಯಕ್ಷ ಉಪೇಂದ್ರ ಆಚಾರ್ಯ ಪೆರ್ಡೂರು, ದೇವಸ್ಥಾನಗಳ ಧರ್ಮರ್ಶಿಗಳಾದ ದಿನೇಶ್ ಆಚಾರ್ಯ ಪಡುಬಿದ್ರಿ ಆನೆಗುಂದಿ, ಶಿಲ್ಪಿ ರಾಮಚಂದ್ರ ಆಚಾರ್ಯ ಕಾರ್ಕಳ, ಚಂದ್ರಯ್ಯ ಆಚಾರ್ಯ ಕಳಿ ಉಪ್ರಳ್ಳಿ, ಮಧುಕರ ಚಂದ್ರಶೇಖರ ಆಚಾರ್ಯ ಗೋಕರ್ಣ, ಗಣೇಶ ಆಚಾರ್ಯ ಕಾಪು, ಸುಂದರ ಆಚಾರ್ಯ ಕೋಟೆ ಕಾರು, ಬಿ.ಎಂ ಯದುನಂದನ ಆಚಾರ್ಯ ಬಂಗ್ರ ಮಂಜೇಶ್ವರ, ಜನಾರ್ದನ ಆಚಾರ್ಯ ಆರಿಕ್ಕಾಡಿ ಕುಂಬಳೆ, ನ್ಯಾಯವಾದಿ ಕೆ. ಪ್ರಭಾಕರ ಆಚಾರ್ಯ ಮಧೂರು, ಸಿ.ಎ ಶ್ರೀಧರ ಆಚಾರ್ಯ ಪನ್ವೇಲ್, ಜಗದೀಶ್ ಆಚಾರ್ಯ ಪಡು ಪಣಂಬೂರು, ಸುಹಾಸ್ ಸವಣೂರುಹಳೆ ಹುಬ್ಬಳ್ಳಿ,ರವೀಂದ್ರ ಆಚಾರ್ಯ ದಾರವಾಡ, ಸಹಟ್ರಸ್ಟ್ ಮತ್ತು ಸಮಿತಿಗಳ ಪದಾಧಿಕಾರಿಗಳಾದ ಬಿ.ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ, ಗಣೇಶ್ ಆಚಾರ್ಯ ಕೆಮ್ಮಣ್ಣು, ಬೆಳುವಾಯಿ ಸುಂದರ ಆಚಾರ್ಯ, ಹರಿಶ್ಚಂದ್ರ ಎನ್. ಆಚಾರ್ಯಬೆಂಗಳೂರು, ಕೃಷ್ಣ ವಿ ಆಚಾರ್ಯ ಮುಂಬೈ, ಕೆ.ನಾಗರಾಜ ಆಚಾರ್ಯ ಕಾಡಬೆಟ್ಟು, ಮೋಹನ್ ಕುಮಾರ್ ಬೆಳ್ಳೂರು, ಪ್ರತಿಷ್ಠಾನದ ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ ಉಪಸ್ಥಿತರಿದ್ದರು.
ಶ್ರೀ ಸರಸ್ವತೀ ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ರಮಾ ನವೀನ್ ಸ್ವಾಗತಿಸಿದರು.ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ ಬಿ ಆಚಾರ್ ಕಂಬಾರ್,ಕಾರ್ಯದರ್ಶಿ ಕೆ.ಎಂ ಗಂಗಾಧರ ಆಚಾರ್ಯ ಕೊಂಡೆವೂರು ನಿರೂಪಿಸಿದರು. ಮೌನೇಶ್ ಶರ್ಮ ಅಭಿನಂದನ ಪತ್ರ ವಾಚಿಸಿದರು ಗೀತಾಚಂದ್ರ ಕಾರ್ಕಳ ವಂದಿಸಿದರು.
ಶ್ರೀ ನಾಗ ಧರ್ಮೇಂದ್ರ ಸಂಸ್ಕೃತ ವೇದ ಸಂಜೀವಿನಿ ಪಾಠ ಶಾಲೆಯ ವಿದ್ಯಾರ್ಥಿಗಳಿಂದ ವೇದಘೋಷ ನಡೆಯಿತು.
ಕೇಪಳ ಪುಷ್ಪದೊಂದಿಗೆ ಕೋಟಿ ಕುಂಕುಮಾರ್ಚನೆ ಸಂಪನ್ನ
ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದಲ್ಲಿ ಶ್ರೀ ಸರಸ್ವತೀ ಮಾತೃ ಮಂಡಳಿಯ ನೇತೃತ್ವದಲ್ಲಿ ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ ಮತ್ತು ಉಪಸಮಿತಿಗಳು ಹಾಗೂ ವಿವಿಧ ಗ್ರಾಮ ಸಮಿತಿಗಳ ನೇತೃತ್ವದಲ್ಲಿ ಜ. ೬ ರಿಂದ ಆರಂಭಗೊಂಡಿರುವ ಕೇಪಳ ಪುಷ್ಪದೊಂದಿಗೆ ಕೋಟಿ ಕುಂಕುಮಾರ್ಚನೆ ದಶ ಸಹಸ್ರ ಕದಳಿ ಶ್ರೀಲಲಿತಾ ಸಹಸ್ರನಾಮ ಹೋಮ ಹಾಗೂ ಶ್ರೀ ಸೂಕ್ತ ಹೋಮದೊಂದಿಗೆ ಭಾನುವಾರ ಸಮಾಪನಗೊಂಡಿತು. ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಶ್ರೀಧರ ಪುರೋಹಿತ್ ಕಟಪಾಡಿ,ಅಕ್ಷಯ ಶರ್ಮ ಕಟಪಾಡಿ,ಲಕ್ಷ್ಮಿಕಾಂತ ಶರ್ಮ ಬಾರ್ಕೂರು ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠಶಾಲೆ, ಶ್ರೀ ಸರಸ್ವತಿ ಪೂರ್ವ ಛಾತ್ರ ಸಂಘದ ವೈದಿಕ ವಿದ್ಯಾರ್ಥಿಗಳು ಮತ್ತು ಹಿರಿಯ ವೈದಿಕರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು.
[
7