- ಭಾರತೀಯ ಗಡಿ ಭದ್ರತಾ ಸೇನೆಗೆ ಮಾನ್ಯದ ಯುವಕ ಆಯ್ಕೆ :ಊರವರಿಂದ ಅಭಿನಂದನೆ
ಕಾಸರಗೋಡು ಜಿಲ್ಲೆಯ ಬದಿಯಡ್ಕ ಗ್ರಾ ಪಂ ವ್ಯಾಪ್ತಿಯ
ಮಾನ್ಯ ಮೇಗಿನಡ್ಕದ ಶ್ರೀಕುಮಾರ ಅವರ ಪುತ್ರ ಗಣೇಶ್ ಮೇಗಿನಡ್ಕ ಅವರು ಭಾರತ ಸರಕಾರದ ಗಡಿ ಭದ್ರತಾ ಸೇನೆಗೆ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಊರವರು ಗೌರವಾದರಗಳಿಂದ ಸಂಭ್ರಮಿಸಿದ್ದು, ಸ್ಥಳೀಯ ರಕ್ತೇಶ್ವರಿ ಪರಿವಾರ ದೈವಗಳ ಸೇವಾ ಸಮಿತಿ ವತಿಯಿಂದ ಅವರನ್ನು ಅಭಿನಂದಿಸಲಾಯಿತು.
ಗಡಿಭದ್ರತಾ ಸೇನೆಗೆ ಆಯ್ಕೆಗೊಂಡ ಗಣೇಶ್ ಅವರಿಗೆ ರಾಜಸ್ಥಾನದಲ್ಲಿ ತರಬೇತಿ ಶಿಬಿರವಿದೆ.
ದೇಶ ಕಾಯುವ ಯೋಧನಾಗಲು ಅವಕಾಶ ಸಿಗುವುದೇ ಭಾಗ್ಯ. ಈ ಮೂಲಕ ಮಾನ್ಯ ಪರಿಸರಕ್ಕೆ ಹೆಮ್ಮೆ ಮೂಡಿದೆ ಎಂದು ಅಭಿನಂದನಾ ಕಾರ್ಯಕ್ರಮದಲ್ಲಿ ಪ್ರಮುಖರು ನುಡಿದರು.
ಅಭಿನಂದನಾ ಸಮಾರಂಭದಲ್ಲಿ ಬದಿಯಡ್ಕ ಗ್ರಾ.ಪಂ.ಸದಸ್ಯ ಶ್ಯಾಮಪ್ರಸಾದ ಮಾನ್ಯ, ನಿವೃತ್ತ ಸೇನಾನಿ ಕೃಷ್ಣ ನಾಯ್ಕ್ ದೇವರಕೆರೆ, ದೇವರಕೆರೆ ಸೇವಾ ಸಮಿತಿಯ ಅಧ್ಯಕ್ಷ ಸೋಮಪ್ಪ ನಾಯ್ಕ್, ಕಾರ್ಯದರ್ಶಿ ಶಿವಪ್ರಸಾದ ಮೇಗಿನಡ್ಕ, ಕೋಶಾಧಿಕಾರಿ ಅಪ್ಪಯ ನಾಯ್ಕ್, ಸಾಮ್ರಾಟ್ (ರಿ) ಮಾನ್ಯ ದ ಅಧ್ಯಕ್ಷ ಐತ್ತಪ್ಪ ನಾಯ್ಕ್, ಸುರೇಶ್ ಮೇಗಿನಡ್ಕ, ಪ್ರಿಯದರ್ಶಿನಿ ಸಂಸ್ಥೆಯ ಪ್ರದೀಪ್, ಸುಬ್ರಹ್ಮಣ್ಯ, ರಾಜ ಬೆಳ್ಚಪ್ಪಾಡ, ಕುಮಾರ, ರಾಜು ಮುಂಡೋಡು ಮೊದಲಾದವರಿದ್ದರು.