186
ಪಿಸ್ತಾದ ಸಿಪ್ಪೆ ಗಂಟಲಲ್ಲಿ ಸಿಲುಕಿ 2ರ ಹರೆಯದ ಮಗು ಮೃತಪಟ್ಟ ಘಟನೆ ಕುಂಬಳೆಯಲ್ಲಿ ನಡೆದಿದೆ. ಕುಂಬಳೆ ಭಾಸ್ಕರ್ ನಗರ ನಿವಾಸಿ ಅನ್ವರ್ – ಮೆಹರುನ್ನೀಸಾ ದಂಪತಿಯ ಪುತ್ರ ಅನಾಸ್ ಮೃತಪಟ್ಟ ಬಾಲಕ.ಶನಿವಾರ ಮನೆಯಲ್ಲಿ ಪಿಸ್ತಾದ ಸಿಪ್ಪೆ ತೆಗೆದು ತಿನ್ನುವಾಗ ಮಗುವಿನ ಗಂಟಲಿಗೆ ಪಿಸ್ತಾ ಸಿಲುಕಿಕೊಂಡಿತ್ತು. ಅದನ್ನು ಗಂಟಲಿಗೆ ಬೆರಳು ಹಾಕಿ ತೆಗೆಯಲಾಗಿತ್ತು. ಆದರೂ ಮಗುವಿನ ಉಸಿರಾಟದಲ್ಲಿ ತೊಂದರೆ ಕಂಡುಬಂದಾಗ ಕುಂಬಳೆ ಆಸ್ಪತ್ರೆಗೆ ಸೇರಿಸಲಾಗಿತ್ತು. ವೈದ್ಯರು ತಪಾಸಿಸಿ ತೊಂದರೆಗಳಿಲ್ಲವೆಂದು ಕಳಿಸಿದ್ದರು. ಆದರೆ ಶನಿವಾರ ರಾತ್ರಿ ಸಮಸ್ಯೆ ಉಲ್ಬಣಿಸಿತು. ಆದಿತ್ಯವಾರ ಮುಂಜಾನೆ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆ ಮಗು ಮೃತಪಟ್ಟಿದೆ.
ಮಗುವಿನ ತಂದೆ ಅನ್ವರ್ ಒಂದುವಾರದ ಹಿಂದೆಯಷ್ಟೇ ವಿದೇಶಕ್ಕೆ ತೆರಳಿದ್ದರು.