128
- ಉಪ್ಪಳ ಐಲ ಮೈದಾನದಿಂದ 2ಕಿಲೋ ಗಾಂಜಾ ಸಹಿತ ಯುವಕನ ಸೆರೆ
ಉಪ್ಪಳ ಐಲ ಮೈದಾನದಿಂದ ಭಾರೀ ಪ್ರಮಾಣದ 2ಕಿಲೋ ತೂಕದ ಗಾಂಜಾ ಸಹಿತ ಯುವಕನೊಬ್ಬನನ್ನು ಬಂಧಿಸಲಾಗಿದೆ. ಉಪ್ಪಳ ಅಂಬಾರ್ ನಿವಾಸಿ ಮುಹ್ಮದ್ ಆದಿಲ್ ಎಂಬಾತ ಬಂಧಿತ ವ್ಯಕ್ತಿಯಾಗಿದ್ದಾನೆ.
ಶನಿವಾರ ರಾತ್ರಿ 11ರ ವೇಳೆಗೆ ಐಲ ಮೈದಾನದಲ್ಲಿ 2 90ಗ್ರಾಂ ಗಾಂಜಾವನ್ನು ಚೀಲದಲ್ಲಿರಿಸಿ ಬೈಕ್ ಸಹಿತ ನಿಂತಿದ್ದಾಗ ಮಂಜೇಶ್ವರ ಪೋಲೀಸರು ಆರೋಪಿಯನ್ನು ಸೆರೆ ಹಿಡಿದರು. ಡಿವೈಎಸ್ಪಿಗೆ ಸಿಕ್ಕ ರಹಸ್ಯ ಮಾಹಿತಿಯಂತೆ ಪೋಲೀಸ್ ತಂಡ ಆರೋಪಿಯನ್ನು ಬಂಧಿಸಿದೆ. ಈತನ ಬೈಕ್ ವಶಪಡಿಸಲಾಗಿದೆ.