118
- ಬೋವಿಕಾನ ಬಳಿ ನಸುಕಿನ ವೇಳೆ ರಸ್ತೆಯಲ್ಲೇ ಎರಡು ಚಿರತೆ..
ಪ್ರತ್ಯಕ್ಷ ದರ್ಶಿಯ ವಾಹನವನ್ನು ಮೂರು ಬಾರಿ ದಿಟ್ಟಿಸಿ ನೋಡಿ ನಿಧಾನಕ್ಕೆ ಸಾಗಿದ ಚಿರತೆ!
ಕಾಸರಗೋಡಿನ ಬೋವಿಕಾನ ಸಮೀಪದ ಕುಟ್ಟಿಯಾನಂ ಚಿಪ್ಲಿಕಯ ಪ್ರದೇಶದಲ್ಲಿ ನಡುರಸ್ತೆಯಲ್ಲೇ ಚಿರತೆಗಳೆರಡು ಕಂಡುಬಂದಿವೆ.
ಶನಿವಾರ (ಇಂದು) ಮುಂಜಾನೆ ಅಯ್ಯಪ್ಪ ಮಾಲಾಧಾರಿಗಳಿಬ್ಬರನ್ನು ಸಮೀಪದ ಮಂದಿರಕ್ಕೆ ಬಿಟ್ಟು ಬರುವಾಗ ಮುಂಜಾನೆ 5.45ಕ್ಕೆ ರಸ್ತೆಯಲ್ಲಿ ಚಿರತೆಗಳಿದ್ದುವೆಂದು ಪ್ರತ್ಯಕ್ಷ ದರ್ಶಿಯಾದ ದಿನೇಶ ಎಂಬವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಎರಡು ಚಿರತೆಗಳ ಪೈಕಿ ಒಂದು ವಾಹನದ ಬೆಳಕು ಕಂಡಾಗ ರಸ್ತೆ ಬದಿಯ ಪೊದೆ ಕಾಡಿಗೆ ಓಡಿ ನಾಪತ್ತೆಯಾದರೆ ಮತ್ತೊಂದು ಚಿರತೆ ಕದಲದೇ, ಮೂರು ಬಾರಿ ವಾಹನದತ್ತ ನೋಡಿ ನಿಧಾನಕ್ಕೆ ಕಾಡಿಗೆ ಸಾಗಿತೆಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.
ಮುಳಿಯಾರು, ಬೇಡಡ್ಕ ಪಂಚಾಯತ್ ವ್ಯಾಪ್ತಿಯ ಕಾಡಿಗೆ ಹೊಂದಿಕೊಂಡ ನಾಡಿನಲ್ಲಿ ಯಾವುದೇ ಹೊತ್ತು ಚಿರತೆ ಕಾಣಲ್ಪಡುತ್ತಿವೆ. ಈ ಸಂಬಂಧ ನಾಗರಿಕರು ಭೀತಿಯಲ್ಲಿದ್ದಾರೆ.