- ಪಡುಕುತ್ಯಾರು ಆನೆಗುಂದಿ ಮಠದಲ್ಲಿ ನಾಳೆ(ಜ.12) ಕೇಪಳ ಪುಷ್ಪದೊಂದಿಗೆ ಕೋಟಿ ಕುಂಕುಮಾರ್ಚನೆಯ ಸಮರ್ಪಣೆ
- ಸ್ತೋತ್ರ ಪುಸ್ತಕ ಸಹಿತ app ಬಿಡುಗಡೆ, ಗಣ್ಯರ ಸಮಕ್ಷ ಧಾರ್ಮಿಕ ಸಭೆ
ಉಡುಪಿ ತಾಲೂಕಿನ ಪಡುಕುತ್ಯಾರಿನಲ್ಲಿರುವ ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ದಲ್ಲಿ ಜ. 6ರಿಂದ ಆರಂಭಗೊಂಡ ಕೋಟಿ ಕುಂಕುಮಾರ್ಚನೆಯು 12 ರಂದು (ನಾಳೆ) ಸಮಾಪ್ತಿಗೊಳ್ಳಲಿದ
ಶ್ರೀ ಸರಸ್ವತೀ ಮಾತೃಮಂಡಳಿ, ಆನೆಗುಂದಿ ಪ್ರತಿಷ್ಠಾನದ ವ್ಯಾಪ್ತಿಯ ದೇವಸ್ಥಾನಗಳು ಹಾಗೂ ಸ್ಥಳೀಯ ಪಂಚಾಯತುಗಳ ಹಿಂದೂ ಸಮಾಜ ಬಾಂಧವರ ನೇತೃತ್ವದಲ್ಲಿ
ಕಾರ್ಯಕ್ರಮವು ಯಶಸ್ವಿಯಾಗಿ ನಡೆಯುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ಮಹನೀಯರು ಭಾಗವಹಿಸುತ್ತಿದ್ದಾರೆ.
ಮಹಾಸಂಸ್ಥಾನದ ವಿವಿಧ ಯೋಜನೆಗಳ ಸಾಕಾರ ಮತ್ತು ಲೋಕ ಕಲ್ಯಾಣದ ಸಂಕಲ್ಪದೊಂದಿಗೆ ಕೇಪಳಪುಷ್ಪದೊಂದಿಗೆ ಶ್ರೀ ಸರಸ್ವತೀ ಯಾಗ ಶಾಲೆಯಲ್ಲಿ ಕೋಟಿ ಕುಂಕುಮಾರ್ಚನೆಯು ಮಹಾ ಸಂಸ್ಥಾನದ ಶ್ರೀ ಸರಸ್ವತಿ ಪೂರ್ವಚಾತ್ರ ಸಂಘ, ಶ್ರೀ ನಾಗದರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠಶಾಲೆ ಹಾಗೂ ಸಮಾಜ ವೈದಿಕರು ಕಾರ್ಯಕ್ರಮಗಳ ವೈದಿಕ ನೇತೃತ್ವವನ್ನು ವಹಿಸುತ್ತಿದ್ದಾರೆ.
ಜ.12ರಂದು ಭಾನುವಾರ ಬೆಳಗ್ಗೆ 5.30 ಗಂಟೆಯಿಂದ ದಶ ಸಹಸ್ರ ಕದಳಿ ಶ್ರೀ ಲಲಿತಾ ಸಹಸ್ರನಾಮ ಹೋಮಗಳು, ಶ್ರೀ ಸೂಕ್ತ ಹೋಮ ನಡೆಯಲಿದೆ.ಕೋಟಿ ಕುಂಕುಮಾರ್ಚನೆಯ ಕೊನೆಯ ಎರಡು ಆವೃತ್ತಿ ಬೆಳಗ್ಗೆ 8:30 ರಿಂದ 10.00 ಗಂಟೆಯವರೆಗೆ ನಡೆಯಲಿದೆ.ನಂತರ ಕೇಪಳ ಪುಷ್ಪದೊಂದಿಗೆ ಕೋಟಿಕುಂಕುಮಾರ್ಚನೆಯ ಸಮರ್ಪಣೆ ನಡೆಯಲಿದೆ
ನಂತರ ಧಾರ್ಮಿಕ ಸಭೆ ನಡೆಯಲಿದೆ.
ಇದೆ ವೇಳೆ ಶ್ರೀ ಸರಸ್ವತಿ ಮಾತ್ರ ಮಂಡಳಿಯ ವತಿಯಿಂದ ಶ್ರೀ ಗುರುಭಕ್ತಿ ಕುಸುಮಾಂಜಲಿ ಎನ್ನುವ ಸ್ತೋತ್ರ ಪುಸ್ತಕ ಬಿಡುಗಡೆ, ಇದೇವೇಳೆ ಶ್ರೀ ಯತೀಶ್ ಬಿ ಆಚಾರ್ಯ ಕೊಯಂಬುತ್ತೂರು ಅವರು ತಯಾರಿಸಿದ ಮಹಾಸಂಸ್ಥಾನದ ಸೇವಾರಶೀದಿಗಳ ಆಪ್ (app) ಬಿಡುಗಡೆ ನಡೆಯಲಿದೆ.ಧಾರ್ಮಿಕ ಸಭೆಯಲ್ಲಿ
ಕಟಪಾಡಿ ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರರಾದ ಪರಮಪೂಜ್ಯ ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಗಳವರು ಆಶೀರ್ವಚನ ನೀಡಲಿರುವರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ(ರಿ.) ಕಟಪಾಡಿ ಇದರ ಅಧ್ಯಕ್ಷ ಶ್ರೀ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ ವಹಿಸುವರು. ಶ್ರೀ ಸರಸ್ವತೀ ಮಾತೃ ಮಂಡಳಿ ಪಡುಕುತ್ಯಾರು ಇದರ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ ಪ್ರಾಸ್ತಾವಿಕ ಮಾತುಗಳನ್ನಾಡಲಿರುವರು. ಆನೆಗುಂದಿ ಮಹಾಸಂಸ್ಥಾನದ ಆಸ್ಥಾನ ವಿದ್ವಾಂಸರಾದ ವಿದ್ವಾನ್ ಮಹಾಮಹೋಪಾಧ್ಯಾಯ ಪಂಜ ಭಾಸ್ಕರ ಭಟ್, ವೇದ ಬ್ರಹ್ಮ ಶ್ರೀ ಶಂಕರಾಚಾರ್ಯ ಕಡ್ಲಾಸ್ಕರ್ ಪಂಡಿತ್ ಹುಬ್ಬಳ್ಳಿ( ಉಪ ಆಯುಕ್ತರು, ಕಸ್ಟಂಸ್ ಇಲಾಖೆ ನವದೆಹಲಿ, ಶ್ರೀ ಸರಸ್ವತೀ ಮಾತೃ ಮಂಡಳಿ ಪಡುಕುತ್ಯಾರು ಇದರ ಗೌರವ ಅಧ್ಯಕ್ಷೆ ಸರಳಮ್ಮ ಗುರುನಾಥ ಸ್ವಾಮಿ ಶಿಕಾರಿಪುರ, ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಪಿ.ವಿ ಗಂಗಾಧರ ಆಚಾರ್ಯ ಉಡುಪಿ ಇವರ ಘನ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿದ್ವಾನ್ ಹಿರಣ್ಯ ವೆಂಕಟೇಶ ಭಟ್ ಬಾಯಾರು ಧಾರ್ಮಿಕ ಉಪನ್ಯಾಸ ನೀಡುವರು.
ಮುಖ್ಯ ಅತಿಥಿಗಳಾಗಿ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ,
ಶ್ರೀ ಯಶಪಾಲ್ ಸುವರ್ಣ ಭಾಗವಹಿಸುವರು.ವಿಶೇಷ ಆಹ್ವಾನಿತರಾಗಿ ಮುನಿಯಾಲು ಸಂಜೀವಿನೀ ಗೋಧಾಮದ ಸವಿತಾ ಆರ್ ಆಚಾರ್ಯ, ವೀಣಾ ವಿಶ್ವನಾಥ ರಾವ್ ದೋಹಾ ಕತಾರ್ ಭಾಗವಹಿಸುವರು. ರಾಜ್ಯ ಸರಕಾರದ ಸಹಕಾರ ರತ್ನ ಪ್ರಶಸ್ತಿ ಪುರಸ್ಕ್ಕೃತ ವಿಶ್ವಕರ್ಮ ಸಹಕಾರ ಬ್ಯಾಂಕ್ ಮಂಗಳೂರು ಅಧ್ಯಕ್ಷರಾದ ಡಾ. ಎಸ್ ಆರ್ ಹರೀಶ್ ಆಚಾರ್ಯ ಜಳಕದಕಟ್ಟೆ ಇವರಿಗೆ ಮಹಾಸಂಸ್ಥಾನದ ವತಿಯಿಂದ ಗೌರವ ಅಭಿನಂದನೆ ನಡೆಯಲಿದೆ.
ಸ್ ಕೆ. ಜಿ ಐ ಕೋ ಆಪ್ ಸೊಸೈಟಿ ಮಂಗಳೂರು ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ ಪೆರ್ಡೂರು , ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಜನಾರ್ದನ ಆಚಾರ್ಯ ಕಳತ್ತೂರು, ಪ್ರಸಾದ್ ಶೆಟ್ಟಿ ಕುತ್ಯಾರು, ಗೀತಾಂಜಲಿ ಸುವರ್ಣ, ಶಿಲ್ಪಾ ಜಿ.ಸುವರ್ಣ ಶುಭಾಶಂಸನೆ ನಡೆಸುವರು.ಸಮಾರಂಭದಲ್ಲಿ ಮಹಾಸಂಸ್ಥಾನದ ವ್ಯಾಪ್ತಿಯ ದೇವಸ್ಥಾನಗಳ ಧರ್ಮರ್ಶಿಗಳಾದ ದಿನೇಶ್ ಆಚಾರ್ಯ ಪಡುಬಿದ್ರಿ ಆನೆಗುಂದಿ,ಶ್ರೀ ಉಮೇಶ್ ಆಚಾರ್ಯ ಪಾಂಡೇಶ್ವರ ( ನಿವೃತ್ತ ತಹಸಿಲ್ದಾರರು) ಮಂಗಳೂರು, ಮುರಹರಿ ಆಚಾರ್ಯ, ಕಟಪಾಡಿ , ಶಿಲ್ಪಿ ರಾಮಚಂದ್ರ ಆಚಾರ್ಯ, ಕಾರ್ಕಳ ,ಚಂದ್ರಯ್ಯ ಆಚಾರ್ಯ ಕಳಿ ಉಪ್ರಳ್ಳಿ, ಪುರೋಹಿತ್ ಜಯಕರ ಆಚಾರ್ಯ, ಮೂಡಬಿದ್ರೆ , ಮಧುಕರ ಚಂದ್ರಶೇಖರ ಆಚಾರ್ಯ, ಗೋಕರ್ಣ, ಗಜಾನನ ಎನ್ ಆಚಾರ್ಯ, ಭಟ್ಕಳ,ಶ್ರೀ ಕೆ. ಸುಧಾಕರ ಆಚಾರ್ಯ, ಕೊಲಕಾಡಿ ಕೊಲಕಾಡಿ,ಶ್ರೀ ಗಣೇಶ ಆಚಾರ್ಯ, ಕಾಪು ,ಸುಂದರ ಆಚಾರ್ಯ, ಕೋಟೆಕಾರು , ಬಿ.ಎಂ ಯದುನಂದನ ಆಚಾರ್ಯ ಬಂಗ್ರಮಂಜೇಶ್ವರ , ಜನಾರ್ದನ ಆಚಾರ್ಯ ಆರಿಕ್ಕಾಡಿ ಕುಂಬಳೆ, ನ್ಯಾಯವಾದಿ ಕೆ. ಪ್ರಭಾಕರ ಆಚಾರ್ಯ ಮಧೂರು, ಪುರುಷೋತ್ತಮ ಆಚಾರ್ಯ ಕಾಞಂಗಾಡು. ,ಸಿ.ಎ ಶ್ರೀಧರ ಆಚಾರ್ಯ ಪನ್ವೇಲ್ ,ಶ್ರೀ ಚಿಕ್ಕಣ್ಣ ಆಚಾರ್ ಬೆಂಗಳೂರು, ನಾಯಂಡರಹಳ್ಳಿ ಬೆಂಗಳೂರು., ಜಗದೀಶ್ ಆಚಾರ್ಯ ಪಡುಪಣಂಬೂರು ದತ್ತಾ ಎಂ ಆಚಾರ್ಯ ಅಂಕೋಲಾ, ನಾಗರಾಜ ಹಾವನೂರು, ಹಳೇ ಹುಬ್ಬಳ್ಳಿ, ಗುರುನಾಥ ಪಟ್ಟಣಕೋಡಿ, ದಾರವಾಡ, ಉಪಸ್ಥಿತರಿರುವರು.
ಸಹಟ್ರಸ್ಟ್ ಮತ್ತು ಸಮಿತಿಗಳ ಪದಾಧಿಕಾರಿಗಳಾದ ಬಿ.ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ, ,ಗಣೇಶ್ ಆಚಾರ್ಯ ಕೆಮ್ಮಣ್ಣು, ಬೆಳುವಾಯಿ ಸುಂದರ ಆಚಾರ್ಯ ಮಂಗಳೂರು, ಹರಿಶ್ಚಂದ್ರ ಎನ್. ಆಚಾರ್ಯ, ಬೆಂಗಳೂರು , ಶುಭಕರ ಎನ್. ಆಚಾರ್ಯ, ಕೊಯಂಬತ್ತೂರು , ಕೃಷ್ಣ ವಿ ಆಚಾರ್ಯ ಮುಂಬಯಿ, ತುಕಾರಾಮ ಆಚಾರ್ಯ ಬೆಂಗಳೂರು , ನಲ್ಕ ತ್ರಿವಿಕ್ರಮ ಆಚಾರ್ಯ ಬೆಂಗಳೂರು , ಯು.ಎಸ್ ಗಿರೀಶ್ ಆಚಾರ್ಯ ಕೊಯಂಬುತ್ತೂರು, , ಯೋಗೀಶ್ ಆಚಾರ್ಯ ಕೊಯಂಬುತ್ತೂರು, ರವೀಶ್ ಜಿ ಆಚಾರ್ಯ ಮುಂಬಯಿ , ಶ್ರೀಧರ ವಿ ಆಚಾರ್ಯ ಮುಂಬಯಿ, ಜಿ.ಟಿ ಆಚಾರ್ಯ ಮುಂಬಯಿ, ಕೆ.ನಾಗರಾಜ ಆಚಾರ್ಯ ಕಾಡಬೆಟ್ಟು, ನಿವೃತ್ತ ಸುಭೇದಾರ್ ವೈ ಧರ್ಮೇಂದ್ರ ಆಚಾರ್ಯ ಕಾಸರಗೋಡು ಭಾಗವಹಿಸುವರು.