ತುಳು ಭಾಷೆಯನ್ನುಲಕರ್ನಾಟಕದ ಎರಡನೇ ಭಾಷೆಯನ್ನಾಗಿಸಲು ಸರಕಾರ ಗೌರವದಿಂದ ಪರಿಗಣಿಸಿದೆ: ಸಿ.ಎಂ.ಸಿದ್ಧರಾಮಯ್ಯ

ನರಿಂಗಾನ,ಕಂಬಳ ಉದ್ಘಾಟಿಸಿ ಪ್ರತಿ ಕಂಬಳಕ್ಕೂ 5ಲಕ್ಷ ರೂ ಅನುದಾನ ನೀಡುತ್ತೇವೆಂದು ‌ಪ್ರಕಟಿಸಿದ ಸಿ ಎಂ.

by Narayan Chambaltimar
  • ತುಳು ಭಾಷೆಯನ್ನುಲಕರ್ನಾಟಕದ ಎರಡನೇ ಭಾಷೆಯನ್ನಾಗಿಸಲು ಸರಕಾರ ಗೌರವದಿಂದ ಪರಿಗಣಿಸಿದೆ: ಸಿ.ಎಂ.ಸಿದ್ಧರಾಮಯ್ಯ
  • ನರಿಂಗಾನ,ಕಂಬಳ ಉದ್ಘಾಟಿಸಿ ಪ್ರತಿ ಕಂಬಳಕ್ಕೂ 5ಲಕ್ಷ ರೂ ಅನುದಾನ ನೀಡುತ್ತೇವೆಂದು ‌ಪ್ರಕಟಿಸಿದ ಸಿ ಎಂ.

ಮಂಗಳೂರು(ಕಣಿಪುರ ಸುದ್ದಿಜಾಲ) :
ತುಳು ಭಾಷೆ ಮತ್ತು ಸಂಸ್ಕೃತಿ ಅಖಂಡ ಕರ್ನಾಟಕಕ್ಕೆ ಮಹತ್ತರ ಕೊಡುಗೆ ನೀಡಿದ್ದನ್ನು ಇಡೀ ರಾಜ್ಯ ಗೌರವದಿಂದ ಮಾನಿಸಬೇಕು. ಈ ಹಿನ್ನೆಲೆಯಲ್ಲಿ ರಾಜ್ಯದ ಎರಡನೇ ಭಾಷೆಯನ್ನಾಗಿ ತುಳುವನ್ನು ಪರಿಗಣಿಸಿ ಅಧಿಕೃತವಾಗಿಸಲು ಮತ್ತು ತುಳು ಭಾಷೆಗೆ ಸ್ವಾಯತ್ತ ಸ್ಥಾನಮಾನ ನೀಡಲು ಕರ್ನಾಟಕ ಸರಕಾರ ಗಂಭೀರವಾಗಿಯೇ ಆಲೋಚಿಸಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.ಮಂಗಳೂರಿನ ಹೊರವಲಯದ ನರಿಂಗಾನದಲ್ಲಿ ನಡೆದ ಕಂಬಳ ಸಂಭ್ರಮದಲ್ಲಿ ಪಾಲ್ಗೊಂಡು ಕಂಬಳವನ್ನು ಉದ್ಘಾಟಿಸಿ ಮಾತನಾಡಿದರು.
ತುಳುವನ್ನು ರಾಜ್ಯದ ಎರಡನೇ ಭಾಷೆಯನ್ನಾಗಿಸಬೇಕೆಂಬ ಆಗ್ರಹ ನ್ಯಾಯೋಚಿತ ಮತ್ತು ಗೌರವದಿಂದ ಪರಿಗಣಿಸುವುದಾಗಿ ತಿಳಿಸಿದ ಅವರು ಇಲ್ಲಿ ಕಂಬಳಕ್ಕೆ ಜನ ಸೇರಿದ್ದಾರೆಯೇ ಹೊರತು ನನ್ನನ್ನು ನೋಡಲು, ಅಹವಾಲು ನೋಡಲು ಯಾರೂ ಬಂದಿಲ್ಲ, ಇದರಿಂದಲೇ ಕಂಬಳದ ಜನಪ್ರಿಯತೆ ತಿಳಿಯುತ್ತದೆ ಎಂದರು.

ಕಂಬಳ ಉದ್ಘಾಟನೆಗೆ ಬಂದು ಪಾಲ್ಗೊಂಡು ಸ್ಪೀಕರ್ ಯು.ಟಿ.ಖಾದರ್ ಜತೆ ಬೆರೆತ ಸಿಎಂ ಅವರಿಗೆ ಬೆಳ್ಳಿ ನೊಗ, ಬೆಳ್ಳಿ ಹಿಡಿಕೆಯ ಬೆತ್ತ ನೀಡಿ ಗೌರವಿಸಲಾಯಿತು.
ಸ್ಪೀಕರ್ ಯು.ಟಿ.ಖಾದರ್ ನೇತೃತ್ವದಲ್ಲಿ ನರಿಂಗಾನ ಕಂಬಳ ನಡೆಯುತ್ತಿದೆ. ಕಂಬಳದಲ್ಲಿ 230ಕ್ಕೂ ಹೆಚ್ಚು ಕೋಣಗಳು ಪಾಲ್ಗೊಂಡಿವೆ.

ಕಂಬಳ ಕೃಷಿ ಸಂಸ್ಕೃತಿಯ ಪ್ರತೀಕ. ಇದರಲ್ಲಿ ಕೋಣಗಳನ್ನು ಮಕ್ಕಳಿಗಿಂತಲೂ ಪ್ರೀತಿಯಿಂದ ಸಾಕುವುದನ್ನು ಕೇಳಿ ಬಲ್ಲೆ. ಬೆಂಗಳೂರಿನಲ್ಲಿ ಕಳೆದ ವರ್ಷ ಕಂಬಳ ನಡೆದಾಗ ನಾನು ಪ್ರತ್ಯಕ್ಷ ಕಂಬಳ ನೋಡಿದ್ದೆ. ಸರಕಾರದಿಂದ ಕಂಬಳ ನಡೆಸಲು ಒಂದೂವರೆ ಕೋಟಿ ನೆರವು ನೀಡಿದ್ದೆ. ಈಗಲೂ ರಾಜ್ಯದಲ್ಲಿ ನಡೆಯುವ 24 ಕಂಬಳಗಳ ಪೈಕಿ ಪ್ರತಿ ಕಂಬಳಕ್ಕೆ ತಲಾ 5ಲಕ್ಷ ರೂಗಳಂತೆ ಅನುದಾನ ಸರಕಾರದಿಂದ ನೀಡಲಾಗುತ್ತಿದೆ. ಏಕೆಂದರೆ ಇದು ತುಳುನಾಡಿನ ಮಣ್ಣಿನ ಸಂಸ್ಕೃತಿ ಪೋಷಿಸುವ ಕೆಲಸ. ನಾವು ಕಲೆ, ಕ್ರೀಡೆ, ಸಂಸ್ಕೃತಿ ಮೂಲಕ ಎಲ್ಲಾ ಜೀವಜಾಲವನ್ನು ಪ್ರೀತಿಸಬೇಕೇ ಹೊರತು ಧ್ವೇಷಿಸಬಾರದೆಂದು ಸಿಎಂ ಸಿದ್ಧರಾಮಯ್ಯ ನುಡಿದರು.

ಕಂಬಳವನ್ನೊಂದು ನೆಲಮೂಲ ಸಂಸ್ಕೃತಿಯ ಕ್ರೀಡೆಯನ್ನಾಗಿಸುವ ಸಂಸ್ಕಾರಯುತ ಆಲೋಚನೆ ದ.ಕ ಜಿಲ್ಲೆಯಲ್ಲಿ ಕಾಣುತ್ತಿರುವುದು ಅತ್ಯಂತ ಆರೋಗ್ಯಕರ ಸಂಸ್ಕಾರ. ಜನರೆಲ್ಲ ಒಂದುಗೂಡಿ ಆಚರಿಸುವ ಸಂಸ್ಕಾರಗಳು ಬೆಳೆಯಬೇಕು ಎಂದು ಅವರು ಕಂಬಳ ಆಯೋಜಕ ಸ್ಪೀಕರ್ ಯು.ಟಿ ಖಾಜರ್ ಅವರನ್ನು ಅಭಿನಂದಿಸಿದರು.
ಕಂಬಳದ ಉದ್ಘಾಟನೆ ನಿರ್ವಹಿಸಿ, ಕಂಬಳದಲ್ಲಿ ಪಾಲ್ಲ‌ಗೊಂಡ ಮುಖ್ಯಮಂತ್ರಿಗೆ ಬೆಳ್ಳಿಯ ನೊಗ, ಬೆಳ್ಳಿ ಹಿಡಿಕೆಯ ಕಂಬಳದ ಬೆತ್ತ ನೀಡಿ ಗೌರವಿಸಲಾಯಿತು.
ಸ್ಪೀಕರ್ ಯು ಟಿ ಖಾದರ್ ಮುತುವರ್ಜಿಯಿಂದ ನರಿಂಗಾನ ಕಂಬಳ ಆಯೋಜಿಸಲಾಗಿದೆ. 230ಕ್ಕೂ ಅಧಿಕ ಕೋಣಗಳು ಪಾಲ್ಗೊಂಡ ಕಂಬಳ ಸರ್ವರ ಸಂಭ್ರಮವಾಗಿ ನಡೆಯಿತು.

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00