- ಕೇರಳ ಶಾಲಾ ರಾಜ್ಯ ಕಲೋತ್ಸವ : ತಲ್ಪನಾಜೆಯ ಪ್ರತಿಭೆ ಅನ್ವಿತಾ ಳಿಗೆ ಮೂರು ಎ ಗ್ರೇಡ್
- ಕನ್ನಡ ಕಂಠಾಪಾಠ, ಶಾಸ್ತ್ರೀಯ ಸಂಗೀತ, ವಯಲಿನ್ ನಲ್ಲಿ ಸತತ ಎಗ್ರೇಡ್ ಪಡೆದ ಸಾಧಕಿ
ಕೇರಳದ ತಿರುವನಂತಪುರದಲ್ಲಿ ನಡೆದ ಕೇರಳ ರಾಜ್ಯ ಶಾಲಾ ಕಲೋತ್ಸವದಲ್ಲಿ ಮೂರು ಎಗ್ರೇಡ್ ಪಡೆದು ನೀರ್ಚಾಲು ಬಳಿಯ ತಲ್ಪಣಾಜೆಯ ಅನ್ವಿತಾ. ಟಿ. ನಾಡಿಗೆ ಅಭಿಮಾನವಾಗಿದ್ದಾಳೆ.ಹೈಯ್ಯರ್ ಸೆಕೆಂಡರಿ ವಿಭಾಗದ ಕನ್ನಡ ಕಂಠಾಪಾಠ, ಶಾಸ್ತ್ರೀಯ ಸಂಗೀತ ಹಾಗೂ ವಯಲಿನ್ ನಲ್ಲಿ ಈಕೆ ಎಗ್ರೇಡ್ ಪಡೆದು ಪ್ರತಿಭೆ ಮೆರೆದಳು.
ಈಕೆ ತಲ್ಪಣಾಜೆ ನಿವಾಸಿ ನಿವೃತ್ತ ಅಧ್ಯಾಪಕ ಹಾಗೂ ಹವ್ಯಾಸಿ ಭಾಗವತ ತಲ್ಪನಾಜೆ ಶಿವಶಂಕರ ಭಟ್ ಹಾಗೂ ಅಧ್ಯಾಪಿಕೆ ಸುಧಾವಾಣಿ ದಂಪತಿಯ ಪುತ್ರಿ. ಅಗಲ್ಪಾಡಿ ಅನ್ನಪೂರ್ಣೇಶ್ವರಿ ಹಯರ್ ಸೆಕಂಡರಿ ಶಾಲೆಯ ಪ್ಲಸ್ ವನ್ ವಿದ್ಯಾರ್ಥಿನಿಯಾದ ಈಕೆ ಶಾಸ್ತ್ರೀಯ ಸಂಗೀತವನ್ನು ವಿದ್ವಾನ್ ಅನೀಶ್ ವಿ ಭಟ್ ಅವರಲ್ಲೂ, ವಯಲಿನ್ ಶಿಕ್ಷಣವನ್ನು ವಿದ್ವಾನ್ ಪ್ರಭಾಕರ ಕುಂಜಾರು ಅವರಿಂದ ಪಡೆಯುತ್ತಾ ಅನೇಕ ಸಂಗೀತ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾಳೆ.
8ನೇ ತರಗತಿಯಿಂದಲೇ ಕೇರಳ ರಾಜ್ಯ ಶಾಲಾ ಕಲೋತ್ಸವದಲ್ಲಿ ತಲಾ ಮೂರ್ನಾಲ್ಕು ಸ್ಪರ್ಧಾ ವಿಭಾಗಗಳಲ್ಲಿ ಎ ಗ್ರೇಡ್ ಸಂಪಾದಿಸುತ್ತಿರುವ ಈಕೆ ಕಳೆದ ವರ್ಷದ ಕಲೋತ್ಸವದಲ್ಲಿ ನಾಲ್ಕು ಎ ಗ್ರೇಡ್ ಪಡೆದಿದ್ದಳು.