135
ಕುಂಬಳೆ ಆರಿಕ್ಕಾಡಿಯಲ್ಲಿ ರೈಲಿನಿಂದ ಎಸೆಯಲ್ಪಟ್ಟು ಯುವಕ ಮೃತ್ಯು
ಕುಂಬಳೆ ಬಳಿ ರೈಲಿನಿಂದ ಎಸೆಯಲ್ಪಟ್ಟು ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ. ಕುಂಬಳೆ ಸಮೀಪದ ಮುಟ್ಟಂ ಕುನ್ನಿಲ್ ಅಬ್ದುಲ್ ರಹ್ಮಾನರ ಪುತ್ರ ಹುಸೈನ್ ಸವಾದ್ (35) ಮೃತ ವ್ಯಕ್ತಿಯಾಗಿದ್ದಾರೆ.
ವಿದೇಶಕ್ಕೆ ಹೋಗಲು ಬಯೋಡೇಟಾ ಕಳುಹಿಸಲೆಂದು ಮನೆಯಿಂದ ತೆರಳಿದ್ದರು. ನಿನ್ನೆ ಸಂಜೆ ಕುಂಬಳೆ ಸಮೀಪದ ಆರಿಕ್ಕಾಡಿ ಬಳಿಯಲ್ಲಿ ಇವರು ರೈಲಿನಿಂದ ಹೊರಕ್ಕೆಸೆಯಲ್ಪಟ್ಟಿದ್ದು, ಕೂಡಲೇ ಸಹ ಪ್ರಯಾಣಿಕರು ಕುಂಬಳೆ ಠಾಣೆಗೆ ನೀಡಿದ ಮಾಹಿತಿಯಂತೆ ಹಡುಕಾಟ ನಡೆಸಿದಾಗ ಮೃತ ದೇಹ ಪತ್ತೆಯಾಯಿತು. ಮೃತರು ತಾಯಿ ಮತ್ತು ಸಹೋದರ, ಸಹೋದರಿಯನ್ನಗಲಿದ್ದಾರೆ.