54
ಮಂಗಳೂರಿನ ಹೊರವಲಯದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪೌರನೊಬ್ಬನನ್ನು ಬಂಧಿಸಲಾಗಿದೆ. ಆರೋಪಿಯನ್ನು 25ರ ಹರೆಯದ ಅನುರುಲ್ ಶೇಖ್ ಎಂದು ಗುರುತಿಸಲಾಗಿದೆ.
ಈತನನ್ನು ಮಂಗಳೂರಿನ ಹರವಲಯ ಮುಕ್ಕ ದಿಂದ ಬಂಧಿಸಲಾಯಿತೆಂದು ಪೋಲೀಸರು ತಿಳಿಸಿದ್ದಾರೆ.ಖಚಿತ ಸುಳಿವಿನ ಹಿನ್ನೆಲೆಯಲ್ಲಿ ಆಂತರಿಕ ಭದ್ರತಾ ದಳ ಮತ್ತು ಪೋಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದರು.
ಆರೋಪಿ ಮೂರು ವರ್ಷಗಳ ಹಿಂದೆ ಪೂರ್ವ ಪ.ಬಂಗಾಳದ ಲಾಲ್ಗೋಲ್ ಗಡಿ ಮೂಲಕ ಅಕ್ರಮವಾಗಿ ಭಾರತ ಪ್ರವೇಶಿಸಿದ್ದನು. ಬಳಿಕ ಪ.ಬಂಗಾಳದ ಮುರ್ಷಿದಾಬಾದಿಗೆ ಬಂದು ಅನಂತರ ಮಂಗಳೂರು ಸೇರಿಕೊಂಡನು. ಮಂಗಳೂರಿನಲ್ಲೀತ ಕಟ್ಟಡ ಕಾರ್ಮಿಕನಾಗಿ ದುಡಿಯುತ್ತಿದ್ದನು.