68
ಕೇರಳ ಸೆಕ್ರೇಟರಿಯೇಟಿನಲ್ಲಿ ಧರ್ಮಾಧರಿತವಾಗಿ ವಾಟ್ಸಪ್ ಗ್ರೂಪ್ ರಚಿಸಿದ್ದಾರೆಂಬ ಕಾರಣಕ್ಕೆ ವಿವಾದಗಳ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ಐಎಎಸ್ ಅಧಿಕಾರಿ ಕೆ.ಗೋಪಾಲಕೃಷ್ಣನ್ ಅಶರ ಅಮಾನತು ರದ್ದು ಪಡಿಸಿ ಸೇವೆಗೆ ಬರಮಾಡಿಕೊಳ್ಳಲಾಗಿದೆ.
ಅಮಾನತುಗೊಂಡು 2ತಿಂಗಳಾಗುವಷ್ಟರಲ್ಲೇ ಸರಕಾರ ಅವರನ್ನು ಮತ್ತೆ ಸೇವೆಗೆ ಕರೆಸಿಕೊಂಡಿದೆ.
ಕಳೆದ ಅಕ್ಟೋಬರ್ 31ರಂದು ಮಲ್ಲು ಹಿಂದೂ ಆಫೀಸರ್ಸ್ ಎಂಬ ವಾಣಿಜ್ಯ, ಕೈಗಾರಿಕಾ ಖಾತೆಯ ಸಿಬ್ಬಂದಿಗಳ ವಾಟ್ಸಪ್ ಗ್ರೂಪ್ ಅಸ್ತಿತ್ವಕ್ಕೆ ಬಂದಿತ್ತು. ಈ ಗ್ರೂಪಿನ ಕುರಿತು ವಿವಾದ ಉಂಟಾದಾಗ ಗ್ರೂಪ್ ಡಿಲೀಟ್ ಮಾಡಲಾಗಿತ್ತು. ಐಎಎಸ್ ಅಧಿಕಾರಿಯಾದ ಗೋಪಾಲಕೃಷ್ಣನ್ ಗ್ರೂಪ್ ಡಿಲೀಟ್,ಮಾಡಿರುವುದೆಂದು ಪತ್ತೆ ಹಚ್ಚಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು.