- ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು…ಒಲವಿನ ಉಡುಗೊರೆ ಕೊಡಲೇನು…ಮಂದಾರ ಪುಷ್ಪವು ನೀನು…ಎಂದ ಗಾಯಕನನ್ನು ಕನ್ನಡಿಗರು ಮರೆಯಲುಂಟೇ..?
- 16ಸಾವಿರ ಅಮರ ಗಾನಗಳ ಮೆಲೋಡಿ ರಾಜ ಪಿ.ಜಯಚಂದ್ರನ್ : ಕನ್ನಡಿಗರೂ ಮರೆಯದ ಜೇನ್ದನಿ..
✍️ ನುಡಿನಮನ :
ಎಂ.ನಾ. ಚಂಬಲ್ತಿಮಾರ್
*******
ಗಾಯಕ ಪಿ.ಜಯಚಂದ್ರನ್ (80)ಅಗಲುವ ಮೂಲಕ ಭಾವಪ್ರಚೋದಕ ಮಧುರ ಮೆಲೋಡೀಸ್ ಗಾಯನದ ಒಂದು ಯುಗಾಂತ್ಯವಾಗಿದೆ.
ಜ.9 ಗುರುವಾರ ರಾತ್ರಿ 8ರ ವೇಳೆಗೆ ಅವರ ಅಗಲುವಿಕೆ ದೃಢೀಕರಿಸಲಾಯಿತು. ಅರ್ಬುದದಿಂದ ಬಳಲಿ ಕೇವಲ 9ದಿನಗಳ ಆಸ್ಪತ್ರೆ ವಾಸದೊಂದಿಗೆ ಅವರು ಚಿರನಿದ್ರೆಗೆ ಜಾರಿದ್ದಾರೆ.
ಕನ್ನಡ, ಮಲಯಾಳಂ ,
ತಮಿಳು, ತೆಲುಗು ಸಹಿತ ಹಿಂದಿ ಮತ್ತಿತರ ಭಾಷೆಗಳಲ್ಲಿ 16ಸಾವಿರಕ್ಕೂ ಅಧಿಕ ಮಾಧುರ್ಯದ ಸವಿಗಾನಗಳನ್ನು ಹಾಡುವ ಯೋಗ ಭಾಗ್ಯ ಒಲಿದಿದ್ದ
ಅವರು ಒಂದು ತಲೆಮಾರು ಮೆಲುಕುವ ಸುಮಧುರ ಹಾಡುಗಳ ಭಾವಗಾಯಕ.
ಕನ್ನಡದಲ್ಲೂ ಎಂದೆಂದೂ ಮರೆಯದ ಹಾಡುಗಳಿಂದ ಅವರು ಕನ್ನಡಿಗರ ಭಾವದ ಜೀವಕೋಶದಲ್ಲಿದ್ದಾರೆನ್ನುವೂದೇ ಈಗ ನೆನಪು…
80-90ರ ದಶಕದ ಜನಪ್ರಿಯ ಕನ್ನಡ ಚಿತ್ರಗಳಿಗೆ ಪಿ.ಜಯಚಂದ್ರನ್ ಜೇನ್ದನಿ ಒದಗಿತ್ತು. ಅವುಗಳಲ್ಲಿ ಪ್ರಮುಖವಾದುದು “ಒಲವಿನ ಉಡುಗೊರೆ ಕೊಡಲೇನು..ರಕುತದಿ ಬರಿದಿದೆ ಇದ ನಾನು..”( ಚಿತ್ರ ಒಲವಿನ ಉಡುಗೊರೆ), ಹಿಂದೂ ಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು..(ಚಿತ್ರ: ಅಮೃತಗಳಿಗೆ), ಮಃದಾರ ಪುಷ್ಪವು ನೀನು, ಸಿಂಧೂರ ಚಿಲುಮೆಯು ನೀನು..(ಚಿತ್ರ:ರಂಗನಾಯಕಿ), ಮಾನಸ ಸರೋವರಾ, ಜೀವನಾ ಸಂಜೀವನಾ (ಚಿತ್ರ :ಹಂತಕನ ಸಂಚು), ಭೂಮಿ ತಾಯಾಣೇ ಇಷ್ಟ ಕಣೇ..(ಚಿತ್ರ ಭಕ್ತ ಪ್ರಹ್ಲಾದ) ಕನ್ನಡ ನಾಡಿನ ಕರಾವಳೀ..(ಚಿತ್ರ:ಮಸಣದ ಹೂವು) , ಭೂಮಿ ತಾಯಾಣೇ ನು ಇಷ್ಟಾ ಕಣೈ( ಚಿತ್ರ: ಪ್ರಾಯ,ಪ್ರಾಯ) ,ಕಮಲಾ ನಯನ ಕಮಲಾ ವದನ…ಹೀಗೆ ಸಾಲು, ಸಾಲು ಎಂದೂ ಮರೆಯದ ಭಾವ ಸ್ಫುರಣೆಯ ಹಾಡುಗಳಿಗೆ ಎಂದೂ ಮರೆಯಲಾಗದ ಸುಸ್ವರದ ಉಸಿರನ್ನಿತ್ತ ಪಿ.ಜಯಚಂದ್ರನ್ ಎಲ್ಲಾ ಭಾಷಿಕರಿಗೂ ಪ್ರಿಯ ಗಾಯಕ.
ತಾನು ಎಷ್ಟನೇ ವಯಸ್ಸಲ್ಲಿದ್ದರೂ ತನ್ನ ವಯಸ್ಸಿಗಿಂತ ಸ್ವರಕ್ಕೆ ತಾರುಣ್ಯ, ಮಾಧುರ್ಯ ಕಾಪಾಡಿದ್ದ ಅವರ ಕಂಠಶ್ರೀಯ ಗಾನಗಳಲ್ಲಿ ಒಂದು ತಲೆಮಾರು ಪ್ರೀತಿಸಿದೆ. ಅಸಂಖ್ಯರ ಪ್ರೇಮ ಅರಳಿದೆ. ಇನ್ನನೇಕರ ವಿರಹಕ್ಕೂ ಅದು ಜತೆಯಾಗಿದೆ.
ಜಿ.ದೇವರಾಜನ್, ಇಳೆಯರಾಜ, ಎ.ಆರ್. ರೆಹ್ಮಾನ್ ಸೇರಿದಂತೆ ದಕ್ಷಿಣದ ಪ್ರಸಿದ್ಧ ಸಂಗೀತ ಸಂಯೋಜಕರ ಗೀತೆಗಳನ್ನೆಲ್ಲಾ ಅಮರವಾಗಿಸಿದ ಅವರು ಎಚ್ಚರದಿಂದ ಗಾಯನಕ್ಕೆ ಜೀವತುಂಬುತ್ತಿದ್ದರು. ಆರು ದಶಕಗಳ ಅವರ ಗೋನಯಾನ ಥ್ರಿಲ್ಲರ್ ಸಿನಿಮಾದಂತೆ ರೋಚಕ…
ಸಿನಿಮ ಹಿನ್ನೆಲೆ ಗಾಯನ, ನಾಟಕ, ಆಲ್ಬಂ, ಸ್ಟೇಜ್ ಶೋ, ಭಕ್ತಿಗೀತೆ ಹೀಗೆ ಎಲ್ಲ ನಮೂನೆಯ ಗಾಯನದಲ್ಲೂ ತಾರುಣ್ಯದ ಧ್ವನಿಯಾಗಿದ್ದ ಅವರ ಶರೀರವೇ ಬೇರೆ, ಶಾರೀರವೇ ಬೇರೆ.
1986ರಲ್ಲಿ ರಾಷ್ಟ್ರೀಯ ಪ್ರಶಸ್ತಿ, ಕೇರಳ ರಾಜ್ಯ ಪ್ರಶಸ್ತಿ 5ಬಾರಿ, 4ಬಾರಿ ತಮಿಳುನಾಡು ರಾಜ್ಯ ಪ್ರಶಸ್ತಿ ಮುಡಿದ ಅವರು ಪ್ರಶಸ್ತಿಗಳನ್ನೂ ಮೀರಿದ ಜನಹೃದಯ ಸೂರೆಗೈದ ಗಾಯಕ.
[3:39 AM, 1/10/2025] M Narayana Chambalthimar: ಕೇರಳದ ಪ್ರತಿಷ್ಠಿತ ತೃಪುಣಿತ್ತರ ಅರಮನೆಯ ರವಿವರ್ಮ ಕೊಚ್ಚಿನಿಯನ್ ತಂಬುರಾನ್ (ರಾಜ) , ಚೆಂದಮಂಗಲಂ ಪಾಲಿಯಂ ತರವಾಡಿನ ಸುಭದ್ರ ಕುಂಞ್ಞಮ್ಮ ದಂಪತಿಯ ಮಗನಾಗಿ 1944 ಮಾ.3ರಂದು ಜನಿಸಿದ್ದ ಅವರು ಚೆಂಡೆ, ಮೆದಂಗ, ಶಾಸ್ತ್ರೀಯ ಸಂಗೀತವನ್ನು ಆಳವಾಗಿ ಕಲಿತವರು. ಗಾನಗಂಧರ್ವ ಕೆ.ಜೆ. ಜೇಸುದಾಸ್ ಸಂಗೀತ ಗಾಯನಕ್ಕೆ ಮೃದಂಗ ನುಡಿಸಿ ಇಬ್ಬರೂ ಒಂದೇ ವೇದಿಕೆಯಲ್ಲಿ ಅರಳಿಕೊಂಡವರು. ಸಾಂಸ್ಕೃತಿಕ ಕೇರಳದ ಮನಗೆದ್ದವರು.