ವಿದ್ಯಾರ್ಥಿಗಳಿಗೆ ಯಕ್ಷಕಲಾ ಸಂಸ್ಕಾರದ ಶಿಕ್ಷಣ ನೀಡಿ ಪೀಳಿಗೆ ರೂಪಿಸಬೇಕು : ಪಟ್ಲ ಸತೀಶ್ ಶೆಟ್ಟಿ

by Narayan Chambaltimar
  • ವಿದ್ಯಾರ್ಥಿಗಳಿಗೆ ಯಕ್ಷಕಲಾ ಸಂಸ್ಕಾರದ ಶಿಕ್ಷಣ ನೀಡಿ ಪೀಳಿಗೆ ರೂಪಿಸಬೇಕು : ಪಟ್ಲ ಸತೀಶ್ ಶೆಟ್ಟಿ
  • ಕಾರ್ಕಳ ತಾಲೂಕು ಕಿಶೋರ ಯಕ್ಷೋತ್ಸವ ಸಮಾರೋಪ

ನಮ್ಮ ಆರೋಗ್ಯಕ್ಕೂ ಮನಸ್ಸಿಗೂ ನೆಮ್ಮದಿ ತರುತ್ತದೆ. ಸಂಗೀತ, ವಾದನ ,ನೃತ್ಯ , ನಟನೆ , ವರ್ಣಾಲಂಕಾರ ಹೀಗೆ ವಿವಿದತೆಯಲ್ಲಿ ಏಕತೆಯನ್ನು ಸಾರುವ ಕಲೆ ನಮ್ಮ ಯಕ್ಷಗಾನ .ಇದು ಉಳಿದು ಬೆಳೆದು ನಮ್ಮನ ಸಂಸ್ಕೃತಿ ಸಾಕಾರಗೊಳ್ಳಬೇಕು. ಶಿಕ್ಷಣ ಸಂಸ್ಥೆಗಳ ಮೂಲಕ ವಿದ್ಯಾರ್ಥಿಗಳಿಗೆ ಯಕ್ಷಗಾನ ಸಂಸ್ಕಾರ ಸಹಿತ ಯಕ್ಷಶಿಕ್ಷಣ ನೀಡಿ ಅವರನ್ನು ಕಲಾವಿದರನ್ನಾಗಿ ಅಥವಾ ಕಲಾಪ್ರೇಕ್ಷಕ ಬಂದುಗಳಾಗಿ ನಾವು ನರೂಪಿಸುವುದು ನಮ್ಮ ಕರ್ತವ್ಯ ಎಂದು ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಹೇಳಿದರು.

ಅವರು ಯಕ್ಷಕಲಾರಂಗ( ರಿ )
ಕಾರ್ಕಳ ಇವರು ಕಾರ್ಕಳ ತಾಲೂಕಿನ ವಿವಿದ ಶಿಕ್ಷಣ ಆಸಕ್ತಿಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಯಕ್ಷ ಶಿಕ್ಷಣ ನೀಡಿ ಆ ವಿದ್ಯಾರ್ಥಿಗಳಿಂದ ನಡೆಸಿದ ಹದಿಮೂರನೇ ವರ್ಷದ ಕಿಶೋರ ಯಕ್ಷೋತ್ಸವದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ ಶನಿವಾರ ಮತ್ತು ಭಾನುವಾರ ಕಾರ್ಕಳದ ಪೆರ್ವಾಜೆ ಹೈಸ್ಕೂಲ್ ವಠಾರದಲ್ಲಿ ಹದಿಮೂರು ಶಾಲೆಗಳ ಮಕ್ಕಳ ಯಕ್ಷಗಾನ ಪ್ರದರ್ಶನ ಜರಗಿದಾಗ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು, ಮಕ್ಕಳ ಪ್ರದರ್ಶನವನ್ನು ಪ್ರಶಂಸಿಸಿದರು.

ಎಣ್ಣೆಹೊಳೆಯ ವೇ.ಮೂ ಅರಣ್ ಭಟ್, ಸಾಣೂರು ಭಕ್ತ ವತ್ಸಲ ಗಣೇಶ ಶೆಟ್ಟಿ, ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಇದ್ದರು. ಸಂಸ್ಥೆಯ ಅದ್ಯಕ್ಷರಾದ ವಿಜಯ ಶೆಟ್ಟಿ, ಸಂಚಾಲಕ ಪ್ರೊ. ಪದ್ಮನಾಭ ಗೌಡ, ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಐದು ಮಂದಿ ಯಕ್ಷ ಶಿಕ್ಷಣ ಪಡೆದ ಉತ್ತಮ ವಿದ್ಯಾರ್ಥಿಗಳಿಗೆ ದಾನಿಗಳ ನೆರವಿನಿಂದ ವಿದ್ಯಾರ್ಥಿವೇತನ ನೀಡಲಾಯಿತು. ಯಕ್ಷಯಾನದ ಇಪ್ಪತ್ತೈದರ ಸಂಭ್ರಮದಲ್ಲಿರುವ ಪಟ್ಲ ಸತೀಶ್ ಶೆಟ್ಟಿ ಯವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಪ್ರೊ. ಪದ್ಮನಾಭ ಗೌಡ ಸ್ವಾಗತಿಸಿದರು. ಬೇಬಿ ಕೆ. ಈಶ್ವರಮಂಗಲ ಕಾರ್ಯಕ್ರಮ ನಿರೂಪಿಸಿದರು.
ಯಕ್ಷ ಗುರು ಮಹಾವೀರ ಪಾಂಡಿ ವಂದಿಸಿದರು. ನಂತರ ಶ್ರೀ ಕೃಷ್ಣ ವಿವಾಹ ಯಕ್ಷಗಾನ ಪ್ರದರ್ಶನ ಗೊಂಡಿತು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00