44
- ಮಂಗಳೂರು – ಕಾಸರಗೋಡು ರೂಟಿನಲ್ಲಿ ಹೆಚ್ಚಿಸಿದ ಕೇರಳ ಕೆಎಸ್ಸಾರ್ಟಿಸಿ ಬಸ್ ಟಿಕೆಟ್ ದರ ಹಿಂತೆಗೆಯಲು ಒತ್ತಾಯ
- ಕೇರಳ ಸಾರಿಗೆ ಸಚಿವರನ್ನು ಮುಖತಾ ಭೇಟಿಯಾಗಿ ಮನವಿ ಸಲ್ಲಿಸಿದ ಮಂಜೇಶ್ವರ ಶಾಸಕ
ಮಂಗಳೂರು – ಕಾಸರಗೋಡು ನಡುವಣ ಕೇರಳ ಕೆಎಸ್ಸಾರ್ಟೀಸಿ ಬಸ್ ಟಿಕೆಟ್ ದರ ಏರಿಕೆ ಹಿಂತೆಗೆಯಬೇಕೆಂದು ಒತ್ತಾಯಿಸಿ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಅವರು ಕೇರಳ ಸಾರಿಗೆ ಸಚಿವ ಆರ್.ಗಣೇಶ್ ಕುಮಾರ್ ಅವರನ್ನು ತಿರುವನಂತಪುರ ವಿಧಾನಸೌಧದಲ್ಲಿ ಮುಖತಾ ಭೇಟಿಯಾಗಿ ಮನವಿ ಸಲ್ಲಿಸಿದರು.
ಕರ್ನಾಟಕ ಸಾರಿಗೆಯ ಬಸ್ ಗಳಲ್ಲಿ 15ಶೇ. ಟಿಕೆಟ್ ದರ ಹೆಚ್ಚಿಸಿದ ಬೆನ್ನಲ್ಲೇ ಕೇರಳ ಕೆಎಸ್ಸಾರ್ಟೀಸಿಯಲ್ಲೂ ದರ ಹೆಚ್ಚಿಸಿ, ಕಾಸರಗೋಡು, ಮಂಜೇಶ್ವರ ನಿವಾಸಿಗಳಿಗೆ ಪ್ರಯಾಣ ವೆಚ್ಚದ ಹೊರೆ ಹೊರಿಸಿರುವುದನ್ನು ಕೂಡಲೇ ಹಿಂತೆಗೆಯಬೇಕೆಂದು ಅವರು ವಿನಂತಿಯಲ್ಲಿ ಆಗ್ರಹಿಸಿದ್ದಾರೆ.
ಕಾಸರಗೋಡು – ಮಂಗಳೂರು ನಡುವೆ ದೈನಂದಿನ ಶಿಕ್ಷಣ, ಚಿಕಿತ್ಸೆ, ಉದ್ಯೋಗ, ವ್ಯವಹಾರಕ್ಕಾಗಿ ಸಾವಿರಾರು ಮಂದಿ ಅಂತರಾಜ್ಯ ಪ್ರಯಾಣಿಸುತ್ತಿದ್ದು, ಅವರಿಗೆ ಟಿಕೆಟ್ ದರ ಹೆಚ್ಚುವರಿ ಆರ್ಥಿಕ ಹೊರೆ ನೀಡಿದೆಯೆಂದೂ, ಹೆಚ್ಚಿಸಿದ ಟಿಕೆಟ್ ದರ ಹಿಂತೆಗೆದು ಜನ ಸಾಮಾನ್ಯರ ಸಂಕಷ್ಟ ಪರಿಹರಿಸಬೇಕೆಂದೂ ಅವರು ಸಚಿವರೊಡನೆ ವಿನಂತಿಸಿದರು.