ಯಕ್ಷ ಧ್ರುವ ಪಟ್ಲ ಫೌಂಡೇಶನ್ ಉಪ್ಪಳ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರ ವಿಶೇಷ ಸಭೆ ಇತ್ತೀಚೆಗೆ ಕುಳೂರು ನಲ್ಲಿ ಘಟಕದ ಗೌರವಾಧ್ಯಕ್ಷರಾದ ಪಿ. ಆರ್. ಶೆಟ್ಟಿ ಪೊಯ್ಯೇಲು ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಸಭೆಯಲ್ಲಿ ಘಟಕದ ವಾರ್ಷಿಕೋತ್ಸವವನ್ನು ಜನವರಿ 12ರಂದು ಜರಗಿಸಲು ತೀರ್ಮಾನಿಸಲಾಯಿತು. ಈ ಸಂದರ್ಭ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಪದಾಧಿಕಾರಿಗಳ ಆಯ್ಕೆ :
ಉಪ್ಪಳ ಘಟಕದ ಗೌರವ ಮಾರ್ಗದರ್ಶಕರಾಗಿ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಕೊಂಡೆವೂರು, ಗೌರವಾಧ್ಯಕ್ಷರಾಗಿ ಪಿ. ಆರ್. ಶೆಟ್ಟಿ ಪೊಯ್ಯೇಲು, ಅಧ್ಯಕ್ಷರಾಗಿ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ, ಪ್ರಧಾನ ಕಾರ್ಯದರ್ಶಿ ಯಾಗಿ ರಾಜೇಶ್ ಶೆಟ್ಟಿ ಕಲ್ಲಾಯಿ , ಸಂಚಾಲಕರಾಗಿ ಯೋಗೀಶ ರಾವ್ ಚಿಗುರುಪಾದೆ, ಕೋಶಾಧಿಕಾರಿಯಾಗಿ ಶಶಿಧರ್ ಪೂಂಜ ಕೊಂಡೆವೂರು ಅವರನ್ನು ಆಯ್ಕೆ ಮಾಡಲಾಯಿತು. ಹಾಗೂ ಇತರ ಈ ಹಿಂದಿನ ಪದಾಧಿಕಾರಿಗಳನ್ನು ಮುಂದುವರಿಸಲಾಗಿದೆ.
ಸಭೆಯಲ್ಲಿ ವಾರ್ಷಿಕೋತ್ಸವದ ಕರಪತ್ರ ಬಿಡುಗಡೆ ನಡೆಯಿತು.
ಫೌಂಡೇಷನ್ ಉಪ್ಪಳ ಘಟಕದ 7ನೇ ವಾರ್ಷಿಕೋತ್ಸವ ಜ.12ರಂದು ಕುಳೂರು ಶ್ರೀಹರಿ ಭಜನಾ ಮಂದಿರ ವಠಾರದಲ್ಲಿ ಜರಗಲಿದೆ. ಪ್ರಮುಖರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಭಾಗವತ ಜಿ.ಕೆ.ನಾವಡರಿಗೆ ಗೌರವಾರ್ಪಣೆ ನಡೆಯಲಿದೆ. ಬಳಿಕ ಪಾವಂಜೆ ಮೇಳದವರಿಂದ ಶ್ರೀಹರಿ ದರ್ಶನ ಪ್ರಸಂಗದ ಯಕ್ಷಗಾನ ಬಯಲಾಟ ಜರಗಲಿದೆಯೆಂದು ಪ್ರಕಟಣೆ ತಿಳೀಸಿದೆ.