- ಅವಳಿ ಕೊಲೆ ಪ್ರಕರಣ : ಮಾಜಿ ಶಾಸಕರ ಸಹಿತ ನಾಲ್ವರು ಸಿಪಿಐಎಂ ನಾಯಕರು ಜೈಲುಮುಕ್ತ
ಕಾಸರಗೋಡು(ಕಣಿಪುರ ಸುದ್ದಿಜಾಲ): ಪೆರಿಯ ಕಲ್ಯೋಟ್ ಅವಳಿ ಕೊಲೆಪ್ರಕರಣದಲ್ಲಿ ಜೈಲುಪಾಲಾಗಿದ್ದ ಸಿಪಿಎಂ ನಾಯಕ, ಮಾಜಿ ಉದುಮ ಶಾಸಕ ಕೆ.ವಿ.ಕುಂಞಿರಾಮನ್ ಸಹಿತ ನಾಲ್ವರು ಪ್ರಮುಖ ಸಿಪಿಐಎಂ ನಾಯಕರು ಇಂದು ಕಣ್ಣೂರು ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾದರು.
ಸಿಬಿಐ ನ್ಯಾಯಾಲಯ ಇವರಿಗೆ ವಿಧಿಸಿದ್ದ 5ವರ್ಷದ ಜೈಲುಶಿಕ್ಷೆಗೆ ಹೈಕೋರ್ಟು ತಡೆಯಾಜ್ಞೆ ವಿಧಿಸಿದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಅವರು ಜೈಲುಮುಕ್ತರಾದರು. ಜೈಲಿನಿಂದ ಹೊರ ಬಂದ ಇವರಿಗೆ ಪಕ್ಷದ ಕಾರ್ಯಕರ್ತರು, ನಾಯಕರು ಘೋಷವಾಕ್ಯ ಮೊಳಗಿಸಿ ಸ್ವಾಗತ ನೀಡಿದರು.
ಈ ಸಂದರ್ಭ ಮಾಧ್ಯಮಗಳ ಜತೆ ಮಾತಾಡಿದ ಕೆ.ವಿ.ಕುಂಞಿರಾಮನ್ ಕೇಸಿನಲ್ಲಿ ಗೂಢಾಲೋಚನೆ ಇಲ್ಲವೆಂದೂ, ನಾಯಕರಾದ ನಮ್ಮನ್ನು ಕೇಸಿನಲ್ಲಿರಾಜಕೀಯ ಹುನ್ನಾರದಿಂದ ಸಿಲುಕಿಸಲಾಗಿದೆಯೆಂದೂ ನುಡಿದರು. 20ನೇ ಆರೋಪಿ ಕೆ.ವಿ ಕುಂಞಿರಾಮನ್ ಹೊರತಾಗಿ 14ನೇ ಆರೋಪಿ ಮಣಿಕಂಠನ್, 21ನೇ ಆರೋಪಿ ರಾಘವನ್ ವೆಳುತ್ತೋಳಿ, 22ನೇ ಆರೋಪಿ ಕೆ.ವಿ.ಭಾಸ್ಕರನ್ ಇಂದು ಜೈಲುಮುಕ್ತರಾದರು. ಸಿಬಿಐ ನ್ಯಾಯಾಲಯ ನೀಡಿದ ಶಿಕ್ಷೆಯನ್ನು ಪ್ರಶ್ನಿಸಿ ಇವರು ಹೈಕೋರ್ಟಿಗೆ ಸಲ್ಲಿಸಿದ ಮೇಲ್ಮನವಿ ಪರಿಗಣಿಸಿ ಶಿಕ್ಷೆಗೆ ತಡೆಯಾಜ್ಞೆ ನೀಡಲಾಗಿತ್ತು.